ಡಿಸೆಂಬರ್ ಅಂತ್ಯದೊಳಗೆ ಅಮಿತ್ ಶಾ ಜಾಗಕ್ಕೆ ನೂತನ ಸಾರಥಿ: ಕನ್ಫರ್ಮ್
Recommended Video
ನವದೆಹಲಿ, ಅ 14 (ಪಿಟಿಐ): ಈ ವರ್ಷಾಂತ್ಯದೊಳಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ನೂತನ ಸಾರಥಿ ನೇಮಕವಾಗಲಿದ್ದಾರೆ. ಈ ವಿಚಾರವನ್ನು ಖುದ್ದು ಅಮಿತ್ ಶಾ ಅವರೇ ಸ್ಪಷ್ಟ ಪಡಿಸಿದ್ದಾರೆ.
"ಕೆಲವೊಂದು ರಾಜ್ಯಗಳ ಚುನಾವಣೆ ನಡೆಯುತ್ತಿರುವುದರಿಂದ, ಆ ಜವಾಬ್ದಾರಿಯನ್ನು ಮುಗಿಸಿ, ಹೊಸಬರಿಗೆ ದಾರಿ ಬಿಟ್ಟು ಕೊಡುತ್ತೇನೆ" ಎಂದು ಶಾ ಹೇಳಿದ್ದಾರೆ.
ಕೇಂದ್ರ ಗೃಹಸಚಿವರೂ ಆಗಿರುವ ಅಮಿತ್ ಶಾ, ಅಧ್ಯಕ್ಷ ಹುದ್ದೆಯಿಂದ ಹೊರಗಿದ್ದರೂ, 'ಸೂಪರ್ ಪವರ್' ಆಗಿ ಇರುತ್ತೀರಾ ಎನ್ನುವ ಪ್ರಶ್ನೆಗೆ 'ಇಲ್ಲ' ಎಂದಿದ್ದಾರೆ.

"ಸೂಪರ್ ಪವರ್ ಆಗಿರಲು ನಮ್ಮದೇನೂ ಕಾಂಗ್ರೆಸ್ ಪಕ್ಷವೇ ಎಂದಿರುವ ಅಮಿತ್ ಶಾ, ಬಿಜೆಪಿಯಲ್ಲಿ ಎಲ್ಲವೂ ಪಕ್ಷದ ಸಿದ್ದಾಂತದ ಪ್ರಕಾರವೇ ನಡೆಯಲಿದೆ" ಎಂದು ಹೇಳಿದ್ದಾರೆ.
ಈಗಿನ ಕಾರ್ಯಾಧ್ಯಕ್ಷರಾಗಿರುವ ಜೆ.ಪಿ.ನಡ್ಡಾ ಅವರು ಮುಂದಿನ ರಾಷ್ಟ್ರಾಧ್ಯಕ್ಷರಾಗಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಈ ಬಗ್ಗೆ ಕೇಳಲಾದ ಪ್ರಶ್ನೆಗೆ ಅಮಿತ್ ಶಾ ಉತ್ತರ ನೀಡಲಿಲ್ಲ.
"ದೇವೇಂದ್ರ ಫಡ್ನವೀಸ್ ನೇತೃತ್ವದಲ್ಲಿ ನಾವು ಮಹಾರಾಷ್ಟ್ರದಲ್ಲಿ ಚುನಾವಣೆ ಎದುರಿಸುತ್ತಿದ್ದೇವೆ. ಅಲ್ಲಿ ನಮ್ಮ ಗೆಲುವು ನಿಶ್ಚಿತ" ಎಂದು ಭರವಸೆಯ ಮಾತನ್ನು ಶಾ ಆಡಿದ್ದಾರೆ.












Click it and Unblock the Notifications