ಬಿಜೆಪಿ ವೆಬ್ಸೈಟಿಗೆ ಕನ್ನ ಹಾಕಿ, ಮೋದಿ ಮೀಮ್ಸ್ ಬಿಟ್ಟ ಹ್ಯಾಕರ್ಸ್

Recommended Video

      ಬಿಜೆಪಿ ವೆಬ್ಸೈಟ್ ಹ್ಯಾಕ್ ಮಾಡಿದ ಹ್ಯಾಕರ್ಸ್ | ಬಿಜೆಪಿ ಕಾಲೆಳೆದ ಮಾಡಿದ ರಮ್ಯಾ | Oneindia Kannada

      ನವದೆಹಲಿ, ಮಾರ್ಚ್ 05: ಕೇಂದ್ರ ಸರ್ಕಾರದ ವೆಬ್ ಸೈಟ್ ಗಳು ಹೆಚ್ಚಿನ ಭದ್ರತೆ ಹೊಂದಿಲ್ಲ ಎಂದು ಎಥಿನಿಕಲ್ ಹ್ಯಾಕರ್ ನೀಡಿದ್ದ ಸಲಹೆ ಬಿಜೆಪಿ ನಾಯಕರ ಕಿವಿಗೆ ಬಿದ್ದಂತೆ ಕಾಣುತ್ತಿಲ್ಲ. ಭಾರತೀಯ ಜನತಾ ಪಕ್ಷ(ಬಿಜೆಪಿ) ದ ಅಧಿಕೃತ ವೆಬ್ ಸೈಟ್ ಹ್ಯಾಕ್ ಆಗಿದೆ.

      ಬಿಜೆಪಿ ವೆಬ್ ಸೈಟ್ ಹ್ಯಾಕ್ ಆಗಿದೆ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಸುದ್ದಿ ಹರಿದಾಡುತ್ತಿದ್ದಂತೆ ಬಿಜೆಪಿ ಐಟಿ ಸೆಲ್ ಎಚ್ಚೆತ್ತುಕೊಂಡಿದೆ. ಆದರೆ, ಅಷ್ಟರಲ್ಲೇ ಕಾಂಗ್ರೆಸ್ ನ ಐಟಿ ಸೆಲ್ ಕಣ್ಣಿಗೆ ಬಿಜೆಪಿ ವೆಬ್ ತಾಣ ಹ್ಯಾಕ್ ಆಗಿರುವುದು ಕಂಡಿದೆ. ಐಟಿ ಸೆಲ್ ಮುಖ್ಯಸ್ಥೆ, ಮಾಜಿ ಸಂಸದೆ ರಮ್ಯಾ ಅವರು ಬಿಜೆಪಿ ವೆಬ್ ಸೈಟ್ ಹ್ಯಾಕ್ ಆಗಿದೆಯಂತೆ ಎಂದು ಗೇಲಿ ಮಾಡಿ ಟ್ವೀಟ್ ಮಾಡಿದ್ದಾರೆ.

      ಬಿಜೆಪಿ ವೆಬ್ ಸೈಟ್ ಹ್ಯಾಕ್ ಮಾಡಿದ ಬಳಿಕ ಮೋದಿ ಅವರಿರುವ ವಿಡಿಯೋ ಕ್ಲಿಪಿಂಗ್ ಹಾಕಲಾಗಿದ್ದು, ಜತೆಗೆ ಜರ್ಮನಿಯ ಚಾನ್ಸೆಲರ್ ಏಂಜೆಲಾ ಮೆರ್ಕಲ್ ಇದ್ದಾರೆ. ಪ್ರಧಾನಿ ಮೋದಿ ಅವರು ಹೆಲೋ ಎನ್ನುತ್ತಿರುವಾಗ ಏಂಜೆಲಾ ಅವರು ನನಗೆ ಬಾಯ್ ಫ್ರೆಂಡ್ ಇದ್ದಾನೆ ಎನ್ನುತ್ತಾ ಮೋದಿ ಅವರನ್ನು ನೋಡದಂತೆ ಅವರ ಹಿಂಬದಿಗೆ ಸರಿಯುವಂಥ ವಿಡಿಯೋ ಹಾಕಲಾಗಿದೆ.

      ಬಿಜೆಪಿ ವೆಬ್ ಸೈಟ್ ಹ್ಯಾಕ್ ಆಗಿದೆ

      ಬಿಜೆಪಿ ವೆಬ್ ಸೈಟ್ ಹ್ಯಾಕ್ ಆಗಿದೆ

      ಬಿಜೆಪಿ ವೆಬ್ ಸೈಟ್ ಹ್ಯಾಕ್ ಆಗಿದೆ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಸುದ್ದಿ ಹರಿದಾಡುತ್ತಿದ್ದಂತೆ ಬಿಜೆಪಿ ಐಟಿ ಸೆಲ್ ಎಚ್ಚೆತ್ತುಕೊಂಡಿದೆ. ಹ್ಯಾಕ್ ಆಗಿದ್ದಾಗ ಇದ್ದ ವಿಡಿಯೋವನ್ನು ತೆಗೆದು ಹಾಕಿ, We will be back soon ಎಂಬ ಸಂದೇಶ ಹಾಕಿದ್ದಾರೆ

      Bohemian Rhapsody. ಮ್ಯೂಸಿಕ್ ಇದೆ

      Bohemian Rhapsody. ಮ್ಯೂಸಿಕ್ ಇದೆ

      Brothers and sisters, I've fooled all of you. Brothers and sisters, we've fooled all of you. More to come! Many, many congratulations!" ಎಂಬ ಸಂದೇಶ ಹಾಗೂ Bohemian Rhapsody. ಮ್ಯೂಸಿಕ್ ಇದೆ.

      ಬಿಜೆಪಿ ವೆಬ್ ಸೈಟ್ ಹ್ಯಾಕ್, ವಿಡಿಯೋ ಮಿಸ್ ಮಾಡಬೇಡಿ

      ಬಿಜೆಪಿ ವೆಬ್ ಸೈಟ್ ಹ್ಯಾಕ್, ವಿಡಿಯೋ ಮಿಸ್ ಮಾಡಬೇಡಿ ಎಂದು ಮೋದಿ ಹಾಗೂ ಏಂಜೆಲಾ ಮಾರ್ಕಲ್ ಇರುವ ವಿಡಿಯೋ ಕ್ಲಿಪ್ ಹಾಕಿರುವ ಕೆಲವರು ಟ್ವಿಟ್ಟಿಗರು.

      ಭಾಯಿಯೋ ಔರ್ ಬೆಹನೋ

      ಭಾಯಿಯೋ ಔರ್ ಬೆಹನೋ ಎಂದು ಮೋದಿ ಶೈಲಿಯಲ್ಲಿ ಟ್ವೀಟ್ ಶುರು ಮಾಡಿ, ಬಿಜೆಪಿ ವೆಬ್ ಸೈಟ್ ಸಿಗುತ್ತಿಲ್ಲ ಎಂದರೆ ನೀವು ಮಿಸ್ ಮಾಡಿಕೊಳ್ಳುತ್ತಿದ್ದೀರಿ ಎಂದರ್ಥ ಎಂದು ಟ್ವೀಟ್ ಮಾಡಿದ ದಿವ್ಯಸ್ಪಂದನ್

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+