ಕುಸ್ತಿಪಟುಗಳ ಪ್ರತಿಭಟನೆ: ಲೈಂಗಿಕ ಕಿರುಕುಳದ ಆರೋಪಿಯ ಅಯೋಧ್ಯೆ ರ‍್ಯಾಲಿಯಿಂದ ದೂರ ಸರಿದ ಬಿಜೆಪಿ

ನವದೆಹಲಿ, ಮೇ. 24: ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ) ಮುಖ್ಯಸ್ಥ ಮತ್ತು ಬಿಜೆಪಿಯ ಕೈಸರ್‌ಗಂಜ್ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ದೇಶದ ಕುಸ್ತಿಪಟುಗಳು ಲೈಂಗಿಕ ಕಿರುಕುಳದ ಆರೋಪ ಹೊರಿಸಿ, ರಾಷ್ಟ್ರ ರಾಜಧಾನಿಯ ಜಂತರ್ ಮಂತರ್‌ನಲ್ಲಿ ಭಾರೀ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರ ನಡುವೆಯೇ ಆರೋಪಿ ಬ್ರಿಜ್ ಭೂಷಣ್ ಶರಣ್ ಸಿಂಗ್ ತನ್ನ ಶಕ್ತಿ ಪ್ರದರ್ಶನ ಮಾಡಲು ಅಯೋಧ್ಯೆ ರ‍್ಯಾಲಿ ಆಯೋಜಿಸಿದ್ದಾರೆ.

ಬ್ರಿಜ್ ಭೂಷಣ್ ಶರಣ್ ಸಿಂಗ್ ಮೇಲೆ ಏಳು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎನ್ನುವ ಆರೋಪವಿದೆ. ಅವರ ವಿರುದ್ಧ ವಿರೋಧ ಪಕ್ಷಗಳು, ನಾಗರಿಕರು ಮತ್ತು ರೈತ ಸಂಘಟನೆಗಳು ನವದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇಂತಹ ಸಮಯದಲ್ಲಿ ಅವರು ಜೂನ್ 5ರಂದು ಅಯೋಧ್ಯೆಯಲ್ಲಿ ರ‍್ಯಾಲಿ ನಡೆಸುವ ಘೋಷಣೆ ಮಾಡಿದ್ದಾರೆ. ಆದರೆ, ಅಯೋಧ್ಯೆ ಬಿಜೆಪಿ ಘಟಕವು ಈ ರ‍್ಯಾಲಿಯಿಂದ ದೂರ ಸರಿದಿದೆ.

BJP MP Brij Bhushan Sharan Singh

ಬ್ರಿಜ್ ಭೂಷಣ್ ಅವರು ಅಯೋಧ್ಯೆಯ ರಾಮ್ ಕಥಾ ಪಾರ್ಕ್‌ನಲ್ಲಿ ಜನ ಚೇತನ ಮಹಾ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ, ಅಲ್ಲಿ ಸಾಧುಗಳು ಹಾಗೂ ಕಾನೂನು, ಶಿಕ್ಷಣ ಮತ್ತು ಸಾಮಾಜಿಕ ಕಾರ್ಯಗಳ ತಜ್ಞರನ್ನು ಹಲವಾರು ರಾಜ್ಯಗಳಿಂದ ಆಹ್ವಾನಿಸಲಾಗಿದೆ. ದೆಹಲಿ ಪೊಲೀಸರು ಬಿಜೆಪಿ ಸಂಸದರ ವಿರುದ್ಧ ಎರಡು ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ. ಎಫ್‌ಐಆರ್ ದಾಖಲಾದಾಗಿನಿಂದ ಬ್ರಿಜ್ ಭೂಷಣ್ ಸಿಂಗ್ ರಾಜಕೀಯ ಕಾರ್ಯಕ್ರಮಗಳಿಂದ ದೂರ ಉಳಿದಿದ್ದರು.

ರಾಜಕೀಯ ಕಾರ್ಯಕ್ರಮಗಳಿಂದ ದೂರ ಉಳಿದಿದ್ದ ಅವರು ಅಯೋಧ್ಯೆ ರ‍್ಯಾಲಿಗೆ ಜನರನ್ನು ಆಹ್ವಾನಿಸಲು ಕಳೆದ ವಾರದಿಂದ ಯುಪಿಯ ಅವಧ್ ಪ್ರದೇಶದ ಗೊಂಡಾ, ಅಯೋಧ್ಯೆ, ಬಹ್ರೈಚ್ ಮತ್ತು ಬಸ್ತಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಪ್ರವಾಸ ಮಾಡುತ್ತಿದ್ದಾರೆ.

ಇತ್ತ, 'ಬಿಜೆಪಿಗೂ ಈ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ರ‍್ಯಾಲಿಗೂ ಸಂಬಂಧವಿಲ್ಲ. ಬಿಜೆಪಿ ನಾಯಕತ್ವವು ನಮ್ಮನ್ನು ಕೇಳಿದರೆ ಮಾತ್ರ ನಾವು ಅದರಲ್ಲಿ ಭಾಗವಹಿಸುತ್ತೇವೆ. ಇಲ್ಲಿಯವರೆಗೆ ನಮಗೆ ಅಂತಹ ಯಾವುದೇ ನಿರ್ದೇಶನ ಬಂದಿಲ್ಲ" ಎಂದು ಬಿಜೆಪಿಯ ಅಯೋಧ್ಯೆ ಜಿಲ್ಲಾಧ್ಯಕ್ಷ ಸಂಜೀವ್ ಸಿಂಗ್ ಹೇಳಿದ್ದಾರೆ.

ಉತ್ತರ ಪ್ರದೇಶದ ಅವಧ್‌ನ ಮತ್ತೊಬ್ಬ ಹಿರಿಯ ಬಿಜೆಪಿ ನಾಯಕ, "ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಸಾಮರ್ಥ್ಯದಲ್ಲಿ ರ‍್ಯಾಲಿಯನ್ನು ಆಯೋಜಿಸುತ್ತಿರುವ ಕಾರಣ ಪಕ್ಷದ ಕಾರ್ಯಕರ್ತರು ರ‍್ಯಾಲಿಯಲ್ಲಿ ಭಾಗವಹಿಸುವುದಿಲ್ಲ" ಎಂದು ಹೇಳಿದರು.

ಕೈಸರ್‌ಗಂಜ್ ಬಿಜೆಪಿ ನಾಯಕ ಸಂಜೀವ್ ಸಿಂಗ್, "ಇದು ರಾಜಕೀಯ ರ‍್ಯಾಲಿ ಅಲ್ಲ. ಮಹಾ ರ‍್ಯಾಲಿಯಲ್ಲಿ, ಯಾರನ್ನಾದರೂ ಮಾನಹಾನಿ ಮಾಡಲು ಕಾನೂನನ್ನು ದುರುಪಯೋಗಪಡಿಸಿಕೊಳ್ಳುವವರನ್ನು ಹೇಗೆ ಎದುರಿಸಬೇಕು ಎಂಬುದರ ಕುರಿತು ಸಾಧುಗಳು ಮತ್ತು ಬುದ್ಧಿಜೀವಿಗಳೊಂದಿಗೆ ಮಾತ್ರ ಚರ್ಚೆ ನಡೆಯಲಿದೆ. ಸುಳ್ಳು ಆರೋಪಗಳನ್ನು ಹೊರಿಸುವವರನ್ನು ಪ್ರಸ್ತುತ ಐಪಿಸಿ ಸೆಕ್ಷನ್ 182 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆದರೆ ಶಿಕ್ಷೆಯು ಅಪರಾಧಕ್ಕೆ ಅನುಗುಣವಾಗಿಲ್ಲ" ಎಂದು ಹೇಳಿದ್ದಾರೆ.

"ಐಪಿಸಿ ಸೆಕ್ಷನ್ 182 ರ ಅಡಿಯಲ್ಲಿ ಒದಗಿಸಲಾದ ಕ್ರಮವು ಸಾಕಾಗುವುದಿಲ್ಲ. ರ‍್ಯಾಲಿಯಲ್ಲಿ, ಕಾನೂನನ್ನು ತಿದ್ದುಪಡಿ ಮಾಡಲು ಮತ್ತು ಅಂತಹ ಪ್ರಕರಣಗಳಲ್ಲಿ ಶಿಕ್ಷೆಯನ್ನು ಕಠಿಣಗೊಳಿಸುವಂತೆ ಒತ್ತಾಯಿಸಲಾಗುವುದು. ಬ್ರಿಜ್ ಭೂಷಣ್ ವಿರುದ್ಧದ ಆರೋಪಗಳು ಸುಳ್ಳು ಎಂದು ಹೇಳಿದ್ದಾರೆ.

ಇತ್ತ, ಬಿಜೆಪಿ ಇದುವರೆಗೆ ಸಂಸದರ ವಿರುದ್ಧ ಕ್ರಮಕೈಗೊಂಡಿಲ್ಲ ಮತ್ತು ಮೂಲಗಳ ಪ್ರಕಾರ ಅವರಿಗೆ ಶೋಕಾಸ್ ನೋಟಿಸ್ ಕೂಡ ನೀಡಿಲ್ಲ. ಕಳೆದ ವಾರ, ಲಕ್ನೋದಲ್ಲಿ ಬಿಜೆಪಿಯ ಅವಧ್ ಘಟಕದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಬ್ರಿಜ್ ಭೂಷಣ್ ಸಿಂಗ್ ಭಾಗವಹಿಸಿದ್ದರು, ಸಭೆಯಲ್ಲಿ ನರೇಂದ್ರ ಮೋದಿ ಸರ್ಕಾರದ ಒಂಬತ್ತು ವರ್ಷಗಳನ್ನು ಗುರುತಿಸಲು ಮೇ 30 ರಿಂದ ಪಕ್ಷದ ಮಹಾಸಂಪರ್ಕ್ ಅಭಿಯಾನದ ಸಿದ್ಧತೆಗಳ ಕುರಿತು ಚರ್ಚೆಗಳು ನಡೆದವು.

ಆದರೆ, ಬಿಜೆಪಿಯ ಮೂಲಗಳು ಕೈಸರ್‌ಗಂಜ್ ಸಂಸದ ಮತ್ತು ಅವರ ರ‍್ಯಾಲಿಯ ಬಗ್ಗೆ ಪಕ್ಷದ ಅನೇಕ ನಾಯಕರು ಅಸಮಾಧಾನ ಹೊಂದಿದ್ದಾರೆ ಎಂದು ಹೇಳಿದ್ದಾರೆ. ಜೊತೆಗೆ 2024ರ ಲೋಕಸಭೆ ಚುನಾವಣೆಗೆ ಮತ್ತೆ ಸ್ಪರ್ಧಿಸಲು ತಯಾರಿ ನಡೆಸುತ್ತಿದ್ದಾರೆ. ಆದ್ದರಿಂದ, ಈ ರ‍್ಯಾಲಿಯನ್ನು ಆಯೋಜಿಸುತ್ತಿದ್ದಾರೆ. ಜನರು ಮತ್ತು ಸಾಧು ಸಮುದಾಯದ ಬೆಂಬಲವನ್ನು ಪಡೆಯುವ ಪ್ರಯತ್ನ ಎಂದು ಬಿಜೆಪಿ ನಾಯಕರೊಬ್ಬರು ಟೀಕಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+