ಶಿವರಾಜ್ ಸಿಂಗ್ ಚೌಹಾಣ್ ಗೆ ಭರ್ಜರಿ ಗೆಲುವು: ಟೈಮ್ಸ್ ನೌ ಸಿಎನ್ಎಕ್ಸ್
ಭೋಪಾಲ್, ನವೆಂಬರ್ 09 : ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್ ಗಢದಲ್ಲಿ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಟೈಮ್ಸ್ ನೌ- ಸಿಎನ್ಎಕ್ಸ್ ಸಂಸ್ಥೆಯು ಇತ್ತೀಚೆಗೆ ನಡೆಸಿದ ಸಮೀಕ್ಷೆಯ ಫಲಿತಾಂಶ ಇಲ್ಲಿದೆ.
ಲೋಕಸಭೆ ಚುನಾವಣೆ 2018ಗೆ ಈ ಮೂರು ರಾಜ್ಯಗಳ ಚುನಾವಣೆಯನ್ನು ಸೆಮಿಫೈನಲ್ ಎಂದೇ ಕರೆಯಲಾಗುತ್ತಿದೆ. ಮುಖ್ಯವಾಗಿ ಬಿಜೆಪಿ ನೇತೃತ್ವದ ಎನ್ಡಿಎಗೆ ಇದು ದಿಕ್ಸೂಚಿಯಾಗಲಿದೆ.
ಟೈಮ್ಸ್ ನೌ ಈ ಸಮೀಕ್ಷೆಯ ಪ್ರಕಾರ, ಸತತ ಮೂರನೇ ಬಾರಿಗೆ ಮಧ್ಯ ಪ್ರದೇಶದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಗೆ ಇನ್ನೊಂದು ಅವಕಾಶ ಸಿಗಲಿದೆ. 2018ರ ಅಂತ್ಯಕ್ಕೆ ಮಧ್ಯಪ್ರದೇಶ ವಿಧಾನಸಭೆ ಚುನಾವಣೆ ನಡೆಯಲಿದೆ. ಲೋಕಸಭೆ ಚುನಾವಣೆಗೆ ಇನ್ನು 6 ತಿಂಗಳು ಬಾಕಿ ಇದೆ.
ದೇಶದ ನಾಲ್ಕು ಮೂಲೆಗಳಿಂದ ಸಂಗ್ರಹಿಸಿದ ಸಮೀಕ್ಷೆಗಳ ಸರಾಸರಿಯಂತೆ ಎನ್ಡಿಎ ಅಥವಾ ಯುಪಿಎ ಪೈಕಿ ಯಾವ ಮೈತ್ರಿಕೂಟಕ್ಕೆ ಸರಳ ಬಹುಮತ ಲಭಿಸಲಿದೆ.

ವಿಧಾನಸಭೆ ಚುನಾವಣೆ 230 ಸ್ಥಾನ
ಮಧ್ಯಪ್ರದೇಶದಲ್ಲಿ 230 ಸ್ಥಾನದ ಫಲಿತಾಂಶಕ್ಕಾಗಿ ಅಕ್ಟೋಬರ್ 25 ರಿಂದ ನವೆಂಬರ್ 3ರ ತನಕ ಟೈಮ್ಸ್ ನೌ- ಸಿಎನ್ಎಕ್ಸ್ ನಡೆಸಿದ ಸಮೀಕ್ಷೆ.
* ಬಿಜೆಪಿ 122 ಸ್ಥಾನ ಪಡೆಯಲಿದೆ(2013ಕ್ಕಿಂತ 43 ಸ್ಥಾನ ಕಡಿಮೆ)
* ಕಾಂಗ್ರೆಸ್ಸಿಗೆ 95 ಸ್ಥಾನ ಲಭಿಸಿದೆ. (2013ಕ್ಕಿಂತ 38 ಸ್ಥಾನ ಅಧಿಕ)
* ಇತರೆ ಪಕ್ಷಗಳಿಗೆ 10 ಸ್ಥಾನಗಳು(2013ದಲ್ಲಿ 8 ಸ್ಥಾನ ಲಭಿಸಿತ್ತು)
* ಬಿಎಸ್ ಪಿಗೆ 3 ಸ್ಥಾನ ಲಭಿಸಲಿದೆ.

ಕದನ ಕೊಠಡಿ ರಣತಂತ್ರದ ಸಮೀಕ್ಷೆ
ಟೈಮ್ಸ್ ನೌ ಸಂಸ್ಥೆಯು ಅಕ್ಟೋಬರ್ 09ರಂದು ಪ್ರಕಟಿಸಿದ ಕದನ ಕೊಠಡಿ ರಣತಂತ್ರದ ಸಮೀಕ್ಷೆಯ ಫಲಿತಾಂಶ ಹೀಗಿದೆ.
* ಬಿಜೆಪಿ 142 ಸ್ಥಾನ ಪಡೆಯಲಿದೆ(2013ಕ್ಕಿಂತ 23 ಸ್ಥಾನ ಕಡಿಮೆ)
* ಕಾಂಗ್ರೆಸ್ಸಿಗೆ 77 ಸ್ಥಾನ ಲಭಿಸಿದೆ. (2013ಕ್ಕಿಂತ 20ಸ್ಥಾನ ಅಧಿಕ)
* ಇತರೆ ಪಕ್ಷಗಳಿಗೆ 11 ಸ್ಥಾನಗಳು(2013ದಲ್ಲಿ 8 ಸ್ಥಾನ ಲಭಿಸಿತ್ತು)

ಯಾರಾಗಲಿದ್ದಾರೆ ಮಧ್ಯಪ್ರದೇಶದ ಮುಂದಿನ ಸಿಎಂ
ಸತತ ಮೂರನೇ ಬಾರಿಗೆ ಆಡಳಿತ ಚುಕ್ಕಾಣಿ ಹಿಡಿಯಲು ಮುಂದಾಗಿರುವ ಬಿಜೆಪಿಗೆ ಹಾಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಜನಪ್ರಿಯತೆ ಆಧಾರವಾಗಿದೆ. ಆದರೆ, 15 ವರ್ಷಗಳ ಕಾಲ ಆಡಳಿತ ವಿರೋಧಿ ಅಲೆ ಇದೆ ಎಂದು ಕಾಂಗ್ರೆಸ್ ನಂಬಿದೆ.
* ಶೇ 40 : ಶಿವರಾಜ್ ಸಿಂಗ್ ಚೌಹಾಣ್(ಬಿಜೆಪಿ)
* ಶೇ 20.3 : ಜ್ಯೋತಿರಾದಿತ್ಯಾ ಸಿಂಧಿಯಾ (ಕಾಂಗ್ರೆಸ್)
* ಶೇ 19.7 : ಕಮಲ್ ನಾಥ್ (ಕಾಂಗ್ರೆಸ್)

ಅಕ್ಟೋಬರ್ 09ರ ಕದನ ಕೊಠಡಿ ಸಮೀಕ್ಷೆ
ಟೈಮ್ಸ್ ನೌ ಸಂಸ್ಥೆಯು ಅಕ್ಟೋಬರ್ 09ರಂದು ಪ್ರಕಟಿಸಿದ ಕದನ ಕೊಠಡಿ ರಣತಂತ್ರದ ಸಮೀಕ್ಷೆಯ ಫಲಿತಾಂಶ ಹೀಗಿದೆ. ಯಾರು ಮುಂದಿನ ಮುಖ್ಯಮಂತ್ರಿಯಾಗಲು ಸೂಕ್ತ ಎಂಬ ಪ್ರಶ್ನೆಗೆ ಈ ರೀತಿ ಉತ್ತರ ಸಿಕ್ಕಿದೆ.
* ಶೇ 61: ಶಿವರಾಜ್ ಸಿಂಗ್ ಚೌಹಾಣ್ (ಬಿಜೆಪಿ)
* ಶೇ 17 : ಜ್ಯೋತಿರಾದಿತ್ಯಾ ಸಿಂಧ್ಯಾ(ಕಾಂಗ್ರೆಸ್)
* ಶೇ 5 : ದಿಗ್ವಿಜಯ್ ಸಿಂಗ್ (ಕಾಂಗ್ರೆಸ್)
* ಶೇ 6 : ಕಮಲ್ ನಾಥ್ (ಕಾಂಗ್ರೆಸ್)
* ಇತರೆ : ಶೇ 11












Click it and Unblock the Notifications