ಉತ್ತರಪ್ರದೇಶದಲ್ಲಿ ಬಿಜೆಪಿಯ ಮುಸ್ಲಿಂ ಮುಖಂಡನ ಮೇಲೆ ಗುಂಡಿನ ದಾಳಿ
ಉತ್ತರಪ್ರದೇಶದಲ್ಲಿ ಬಿಜೆಪಿಯ ಮುಸ್ಲಿಂ ಮುಖಂಡನ ಮೇಲೆ ಗುಂಡಿನ ದಾಳಿ ನಡೆಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ.
ಲಕ್ನೋ. ಜೂನ್ 02: ಉತ್ತರಪ್ರದೇಶದ ಬರೇಲಿ ಜಿಲ್ಲೆಯಲ್ಲಿ ಗುಂಡಿನ ದಾಳಿಗೊಳಗಾಗಿದ್ದ ಬಿಜೆಪಿಯ ಮುಸ್ಲಿಂ ಮುಖಂಡನ ಸ್ಥಿತಿ ಗಂಭೀರವಾಗಿದೆ.
ಬರೇಲಿಯ ಬಿಜೆಪಿಯ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷರಾದ ರಯೀಸ್ ಅಹ್ಮದ್ ಅವರ ಮೇಲೆ ಗುರುವಾರ ರಾತ್ರಿ ವೇಳೆ, ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದರು. ಮೂರು ಸುತ್ತಿನ ಗುಂಡಿನ ದಾಳಿ ಎದುರಿಸಿದ್ದ ರಯೀಸ್ ಅವರನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿತ್ತು.

ಗುರುವಾರ ರಾತ್ರಿ 7 ಗಂಟೆ ಸುಮಾರಿಗೆ ಬೈಕಿನಲ್ಲಿ ಹೋಗುತ್ತಿದ್ದ ರಯೀಸ್ ಅವರ ಮೇಲೆ ದೇವ್ ಚಾರ ಪ್ರದೇಶದಲ್ಲಿ ದಾಳಿ ನಡೆದಿದೆ. ನಂತರ ಘಟನಾ ಸ್ಥಳಕ್ಕೆ ಬಂದ ಭರೋರಾದ ಪೊಲೀಸರು, ರಯೀಸ್ ಅವರನ್ನು ಅಲ್ಲಿಂದ ಅಸ್ಪತ್ರೆಗೆ ಸಾಗಿಸಿದ್ದಾರೆ. ದಾಳಿ ನಡೆಸಿದವರು ಯಾರು? ಏನವರ ಉದ್ದೇಶ ಎಂಬುದು ತಿಳಿದು ಬಂದಿಲ್ಲ.
ಘಟನೆಯನ್ನು ತೀವ್ರವಾಗಿ ಖಂಡಿಸಿರುವ ವಿಪಕ್ಷಗಳು, ಯೋಗಿ ಆದಿತ್ಯನಾಥ್ ಸರ್ಕಾರವು ತನ್ನ ನಾಗರಿಕರಿಗೆ ರಕ್ಷಣೆ ಒದಗಿಸುವಲ್ಲಿ ವಿಫಲವಾಗಿದೆ ಎಂದಿವೆ.












Click it and Unblock the Notifications