ನರೇಂದ್ರ ಮೋದಿಗೆ ಇಂದು 64ನೇ ಹುಟ್ಟುಹಬ್ಬದ ಶುಭಾಶಯ

ಅಹಮದಾಬಾದ್, ಸೆಪ್ಟೆಂಬರ್ 17: ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ದಾಮೋದರದಾಸ್ ಮೂಲಚಂದ್ ಮೋದಿ ಅವರು ಇಂದು ಮಂಗಳವಾರ 64ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಈ ಸಂದರ್ಭದಲ್ಲಿ ಮೋದಿ ಅವರ ಅಪಾರ ಅಭಿಮಾನಿಗಳು ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ.

ಮೋದಿ ಹುಟ್ಟುಹಬ್ಬದ ಮುನ್ನಾ ಸಂದರ್ಭದಲ್ಲಿ ಮೋದಿಗೆ ಹುಟ್ಟುಹಬ್ಬದ ಕಾಣಿಕೆಯಾಗಿ ಅವರನ್ನು ಬಿಜೆಪಿ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದೆ. ಜತೆಗೆ ಕೆಲವೊಂದು ಅಪವ್ಯಸನಗಳ ನಡುವೆಯೂ ಪಕ್ಷದ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಅವರು ಮತ್ತೆ ಮೋದಿ ಹಾದಿಗೆ ಹೊರಳಿದ್ದಾರೆ. ಇದು ಮೋದಿ ಜನ್ಮದಿನಕ್ಕೆ ಹೆಚ್ಚು ಮೆರುಗು ತಂದಿದೆ.

BJP Prime Ministerial candidate Narendra Modi 64th birthday celebrations,

'ದಿನದ ಇಪ್ಪತ್ನಾಲ್ಕೂ ತಾಸು ಹಳ್ಳಿಗಳಿಗೆ ವಿದ್ಯುತ್ಛಕ್ತಿ ಒದಗಿಸುವ ಏಕೈಕ ರಾಜ್ಯ ಗುಜರಾತ್‌. ಅದರ ಹಿರಿಮೆ ನರೇಂದ್ರ ಮೋದಿ ಅವರಿಗೆ ಸಲ್ಲಬೇಕು. ಮೋದಿ ಅವರನ್ನು ಪಕ್ಷವು ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡಿದೆ. ಇನ್ನು ದೇಶವು ಈ ಜವಾಬ್ದಾರಿಯನ್ನು ಅವರಿಗೆ ವಹಿಸಿದರೆ, ವಿವಿಧ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರಗಳು ಕೈಗೊಂಡಿರುವ ಉತ್ತಮ ಕೆಲಸಗಳನ್ನು ದೇಶಾದ್ಯಂತ ಜಾರಿಗೆ ತಲುಪಲು ಸಹಕಾರಿಯಾಗುತ್ತದೆ' ಎಂದು ಛತ್ತೀಸ್‌ಗಢದ ಕೋರ್ಬಾದಲ್ಲಿ ಅಡ್ವಾಣಿ ಅವರು ಅರ್ಥಪೂರ್ಣವಾಗಿ ಹೇಳಿದ್ದಾರೆ.

ಈ ಮಧ್ಯೆ, ಮೋದಿ ಅವರ ಅಪಾರ ಅನುಯಾಯಿಗಳು ಜನ್ಮದಿನದಿಂದ ಹಿಡಿದು 9 ದಿನಗಳ ಕಾಲ ವಿಶೇಷ ಸಂಪರ್ಕ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದ್ದಾರೆ. ಇದಲ್ಲದೆ ಹುಟ್ಟುಹಬ್ಬದ ಅಂಗವಾಗಿ ರಕ್ತದಾನ, ಗ್ರಾಮಮಟ್ಟದ ಸಭೆ ಮತ್ತಿತರ ಕಾರ್ಯಕ್ರಮಗಳನ್ನೂ ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗಿದೆ.

ಬಿಜೆಪಿಯ ವಿವಿಧ ಹಂತದ ನಾಯಕರ 7 ತಂಡಗಳನ್ನು ರಚಿಸಲಾಗಿದ್ದು ಈ ತಂಡಗಳು ಮುಂದಿನ 9 ದಿನಗಳ ಅವಧಿಯಲ್ಲಿ ತಲಾ 1 ಲಕ್ಷದಂತೆ ಗುಜರಾತಿನ ಎಲ್ಲಾ ಭಾಗದ 7 ಲಕ್ಷ ಜನರನ್ನು ಭೇಟಿ ಮಾಡುವ ಕೆಲಸ ಮಾಡಲಿವೆ. ಈ ವೇಳೆ ಅವರ ಸಮಸ್ಯೆಗಳನ್ನು ಆಲಿಸುವ ಜೊತೆಗೆ ಅವರಿಗೆ ಸರ್ಕಾರದ ಸಾಧನೆಗಳನ್ನು ಮನವರಿಕೆ ಮಾಡಿಕೊಡುವ ಕೆಲಸ ಮಾಡಲಿವೆ.

It's Shri Narendra Modi's birthday on 17th September and on this special occasion, you can send in your good wishes to him directly through this platform. Write your wishes with hashtag #NamoBirthday as comments below by logging in directly or through Facebook, Twitter or Google+. You can also SMS your wishes to toll-free number 9227411117.

For Shri, Narendra Modi, people's blessings and wishes mean a lot. These wishes of yours will be sent to Shri Narendra Modi with your names. So keep them coming!

Do not forget to add the hashtag #NamoBirthday in your wishes, particularly on social media.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+