ಪಿಎಂ ಕ್ಯಾಂಡಿಡೇಟ್ ಮೋದಿ ಶೃಂಗಾರ ರಹಸ್ಯ ಬಯಲು

ನೋಡಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ವೃತ್ತಿಪರ beautician ಅನ್ನು ನೇಮಿಸಿಕೊಂಡಿದ್ದಾರೆ. ಪ್ರತಿದಿನ ಮೋದಿಯನ್ನು ಶೃಂಗಾರ ಮಾಡಲು 1 ಲಕ್ಷ ರೂಪಾಯಿ ವೆಚ್ಚ ಮಾಡಲಾಗುತ್ತಿದೆ ಎಂದು ಪಂಚಾಯಿತಿ ಸಚಿವ ಭೀಮಸಿಂಗ್ ಹೇಳಿದ್ದಾರೆ.
ಅಂದಹಾಗೆ, ಪಂಚಾಯಿತಿ ಸಚಿವ ಭೀಮಸಿಂಗ್ ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಪಂಚಾಯಿತಿ ಮಾಡುವುದು ಹೊಸದೇನೂ ಅಲ್ಲ.
( ಟೈಲರ್ ಮೇಡ್ ನರೇಂದ್ರ ಮೋದಿಯ ಬಗ್ಗೆ ಗೊತ್ತಾ? )
'ಮೋದಿ ಬ್ಯೂಟಿ' ಬಗ್ಗೆ ಹೊಸ ಹೊಳಹು: ಬಹಳ ಕಾಲದಿಂದಲೂ ತಮ್ಮ ಬಟ್ಟೆಬರೆಯನ್ನು ಒಪ್ಪ ಓರಣವಾಗಿಟ್ಟುಕೊಂಡು, ಸಿಂಗರಿಸಿಕೊಳ್ಳುವುದು ಮೋದಿಗೆ ರೂಢಿಯಾಗಿದೆ. ಅದು ಮೋದಿ ಖುರ್ತಾ ಮೋದಿ ಸ್ಟೈಲ್ ಅಂತೆಲ್ಲಾ ಜನಪ್ರಿಯವೂ ಆಗಿದೆ. ಆದರೂ ಈಗ ಪಂಚಾಯಿತಿ ಸಚಿವರು 'ಮೋದಿ ಬ್ಯೂಟಿ' ಬಗ್ಗೆ ಹೊಸ ಹೊಳಹನ್ನು ನೀಡಿದ್ದಾರೆ.
ಕಳೆದ ಡಿಸೆಂಬರಿನಲ್ಲಿ 'ಮೋದಿ ಬ್ಯೂಟಿ' ಬಗ್ಗೆ ಮಾತನಾಡಿದ್ದ ಬಾಲಿವುಡ್ ಅಭಿನೇತ್ರಿ ಚಿತ್ರಾಂಗದಾ ಸಿಂಗ್ 'ಮೋದಿ ಗಡ್ಡವನ್ನು ತೆಗೆಸಿದರೂ ಸಹ ಚೆನ್ನಾಗಿಯೇ ಕಾಣುತ್ತಾರೆ. ಮೋದಿ ಅಂಥ ಸುಂದರಾಂಗ ಪುರುಷರಿಗೆ ಗಡ್ಡದ ಅಗತ್ಯವಿರುವುದಿಲ್ಲ' ಎಂದು Gillette ಕಂಪನಿಯ ಪ್ರಚಾರ ವೇಳೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು. ಅದು ಮೋದಿ ಲಕ್ಷಣದ ಬಗೆಗಿನ ಗುಣಗಾನವಾಗಿತ್ತು.












Click it and Unblock the Notifications