ಪ್ರತಿ ಲೋಕಸಭಾ ಕ್ಷೇತ್ರಕ್ಕೆ ಕಾಲ್ ಸೆಂಟರ್, ಚುನಾವಣೆ ಗೆಲ್ಲಲು ಬಿಜೆಪಿ ಪ್ಲಾನ್

Recommended Video

      ಲೋಕಸಭಾ ಚುನಾವಣೆ ಗೆಲ್ಲಲು ಬಿಜೆಪಿ ಹೊಸ ಪ್ಲಾನ್ | Oneindia Kannada

      ನವದೆಹಲಿ, ಅಕ್ಟೋಬರ್ 03: ಲೋಕಸಭೆ ಚುನಾವಣೆ ಗೆಲ್ಲಲು ಬಿಜೆಪಿ ಹೈಕಮಾಂಡ್ ಹೊಸ ಪ್ಲಾನ್ ಮಾಡಿದ್ದು. ಪ್ರತಿ ಲೋಕಸಭಾ ಕ್ಷೇತ್ರದಲ್ಲಿ ಮಿನಿ ಕಾಲ್ ಸೆಂಟರ್‌ ಅನ್ನು ತೆರೆಯಲು ಸಜ್ಜಾಗಿದೆ.

      ಅಮಿತ್ ಶಾ ಅವರ ಯೋಜನೆ ಇದಾಗಿದ್ದು, ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಪರ ಪ್ರಚಾರಕ್ಕೆ ಹಾಗೂ ಜನರ ಸಂಪರ್ಕ ಸಾಧಿಸಲೆಂದು ಈ ಕಾಲ್‌ ಸೆಂಟರ್‌ಗಳನ್ನು ತೆರೆಯಲಾಗುತ್ತಿದೆ. ಇದರ ವೆಚ್ಚ ಬಿಜೆಪಿ ಹೈಕಮಾಂಡ್ ಭರಿಸಲಿದೆ.

      ಪ್ರತಿ ಲೋಕಸಭಾ ಕ್ಷೇತ್ರದಲ್ಲಿ 23 ಜನ ತರುಣರ ತಂಡವು ಆ ಕ್ಷೇತ್ರದ ಚುನಾವಣಾ ಅಭ್ಯರ್ಥಿಯ ಪ್ರಚಾರದ ಉಸ್ತುವಾರಿ ವಹಿಸಲಿದೆ. ಅಷ್ಟೂ ಜನರಿಗೆ ಬಿಜೆಪಿ ಹೈಕಮಾಂಡ್ ಸಂಬಳ ನೀಡುತ್ತದೆ. 23 ಜನರನ್ನು ಆಯ್ಕೆ ಮಾಡುವ ಅಧಿಕಾರವನ್ನು ಅಭ್ಯರ್ಥಿಗೆ ನೀಡಲಾಗಿದೆ.

      ಯಾರು ಯಾವ ಕಾರ್ಯ ನಿರ್ವಹಿಸುತ್ತಾರೆ

      ಯಾರು ಯಾವ ಕಾರ್ಯ ನಿರ್ವಹಿಸುತ್ತಾರೆ

      23 ಮಂದಿ ತಂಡದಲ್ಲಿ 15 ಜನ ಸಾಮೂಹಿಕ ಸಂದೇಶಗಳನ್ನು ಕಳುಹಿಸುವುದು. ಸಾಮಾಜಿಕ ಜಾಲತಾಣಗಳ ಮೂಲಕ ಕ್ಷೇತ್ರದ ಜನರ ಸಂಪರ್ಕ ಸಾಧಿಸುವುದು ಮಾಡುತ್ತಾರೆ. ನಾಲ್ಕು ಮಂದಿ ಅಭ್ಯರ್ಥಿಯ ಸಾಮಾಜಿಕ ಜಾಲತಾಣಗಳನ್ನು ನೋಡಿಕೊಳ್ಳುತ್ತಾರೆ. ಉಳಿದವರು ಮೋದಿ ಅವರ ಸಾಧನೆಗಳನ್ನು ಜನರಿಗೆ ತಲುಪಿಸುವ ಕಾರ್ಯ ಮಾಡುತ್ತಾರೆ.

      ಎಲ್ಲ ತಂಡಗಳನ್ನು ಹೈಕಮಾಂಡ್‌ ನಿಯಂತ್ರಿಸುತ್ತದೆ

      ಎಲ್ಲ ತಂಡಗಳನ್ನು ಹೈಕಮಾಂಡ್‌ ನಿಯಂತ್ರಿಸುತ್ತದೆ

      ಎಲ್ಲ ತಂಡಗಳನ್ನು ಆಯಾ ರಾಜ್ಯದ ಮುಖ್ಯ ತಂಡವೊಂದು ನಿಯಂತ್ರಿಸುತ್ತದೆ. ಮುಖ್ಯ ತಂಡದಿಂದ ಬಂದ ಸೂಚನೆಗಳನ್ನು ಕ್ಷೇತ್ರದ ಉಪ ತಂಡಗಳು ಪಾಲಿಸುತ್ತವೆ. ಕ್ಷೇತ್ರದಲ್ಲಿ ಪ್ರಚಾರ ನಡೆಯುತ್ತಿರುವ ರೀತಿಯ ಬಗ್ಗೆ ಮುಖ್ಯ ತಂಡಕ್ಕೆ ಮಾಹಿತಿ ರವಾನೆ ಆಗುತ್ತಿರುತ್ತದೆ. ರಾಜ್ಯ ತಂಡಗಳನ್ನು ಬಿಜೆಪಿ ಯ ಐಟಿ ಸೆಲ್‌ ನಿಯಂತ್ರಿಸುತ್ತದೆ.

      ಮಾಧ್ಯಮಗಳ ಮೇಲೆ ಪ್ರಭಾವ

      ಮಾಧ್ಯಮಗಳ ಮೇಲೆ ಪ್ರಭಾವ

      ಇದೇ ತಂಡವು ಸುದ್ದಿ ಮಾಧ್ಯಮಗಳು, ಪತ್ರಿಕೆಗಳಲ್ಲಿ ಪ್ರಚಾರ ಮಾಡಿಸುವ ಜವಾಬ್ದಾರಿಯನ್ನೂ ಹೊತ್ತಿರುತ್ತವೆ. ಸುದ್ದಿಗೋಷ್ಠಿಗಳು, ಮಾಧ್ಯಮ ಹೇಳಿಕೆಗಳು, ಇನ್ನಿತರೆ ಮಾಧ್ಯಮ ಸಂಬಂಧಿ ವಿಚಾರಗಳನ್ನು ಸಹ ಈ ತಂಡಗಳು ನೋಡಿಕೊಳ್ಳುತ್ತವೆ. ಮಾಧ್ಯಮಗಳೊಂದಿಗೆ ನಿರಂತರ ಸಂಪರ್ಕವನ್ನು ಈ ತಂಡಗಳು ಸಾಧಿಸುತ್ತವೆ.

      ಹಲವು ಹಂತದ ತಂತ್ರ

      ಹಲವು ಹಂತದ ತಂತ್ರ

      ವಿರೋಧ ಪಕ್ಷಗಳ ತಂತ್ರಗಳಿಗೆ ಪ್ರತಿ ತಂತ್ರವನ್ನು ಹೂಡುವುದು, ವಿರೋಧಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಣಿಯುವುದು, ವಾಟ್ಸಾಪ್‌ ಗುಂಪುಗಳನ್ನು ಮಾಡಿ ಬಿಜೆಪಿ ಪರ ಮತ್ತು ಪ್ರತಿ ಪಕ್ಷಗಳ ವಿರುದ್ಧ ಸುದ್ದಿಗಳನ್ನು ಹರಿಬಿಡುವುದು ಇನ್ನಿತರ ಕಾರ್ಯಗಳನ್ನು ಈ ತಂಡಗಳು ಮಾಡಲಿವೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+