Delhi Assembly Election 2025: ಬಿಜೆಪಿ ಕೊಡಲಿದೆ 300 ಯುನಿಟ್ ಉಚಿತ ವಿದ್ಯುತ್

ನವದೆಹಲಿ, ಜನವರಿ 09: ದೆಹಲಿ ವಿಧಾನಸಭೆ ಚುನಾವಣೆ-2025ರ ವೇಳಾಪಟ್ಟಿ ಘೋಷಣೆಯಾಗಿದೆ. 70 ಸದಸ್ಯ ಬಲದ ವಿಧಾನಸಭೆಗೆ ಫೆಬ್ರವರಿ 5ರಂದು ಮತದಾನ ನಡೆಯಲಿದ್ದು, ಫೆಬ್ರವರಿ 8ರಂದು ಫಲಿತಾಂಶ ಘೋಷಣೆಯಾಗಲಿದೆ. ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್‌ ನಂಬರ್ 36. ರಾಜ್ಯದ ಆಡಳಿತ ಪಕ್ಷ ಆಮ್‌ ಆದ್ಮಿ. ಬಿಜೆಪಿ ಮತ್ತು ಕಾಂಗ್ರೆಸ್ ಈ ಬಾರಿಯ ಚುನಾವಣೆಯಲ್ಲಿ ಗೆಲ್ಲಲು ತಂತ್ರ ರೂಪಿಸಿವೆ.

ದೆಹಲಿ ಚುನಾವಣೆಯ ಪ್ರಣಾಳಿಕೆಯಲ್ಲಿ ಬಿಜೆಪಿ ಜನರಿಗೆ ಹಲವು ಭರವಸೆಗಳನ್ನು ನೀಡುವ ನಿರೀಕ್ಷೆ ಇದೆ. ಮಹಾರಾಷ್ಟ್ರ ರಾಜ್ಯದಲ್ಲಿ ಈಗಾಗಲೇ 'ಲಡ್ಕಿ ಬೆಹನ್' ಯೋಜನೆ ಮೂಲಕ ಚುನಾವಣೆ ಗೆದ್ದಿದೆ, ಮಧ್ಯಪ್ರದೇಶದಲ್ಲಿಯೂ ಮಹಿಳೆಯರಿಗೆ ಹಲವು ಯೋಜನೆಗಳನ್ನು ಜಾರಿಗೆ ತಂದು ಬಿಜೆಪಿ ಯಶಸ್ಸು ಪಡೆದಿದೆ. ಇದೇ ಮಾದರಿಯನ್ನು ದೆಹಲಿಯಲ್ಲಿಯೂ ಜಾರಿಗೊಳಿಸಲು ಪಕ್ಷ ಬಯಸಿದೆ.

BJP May Announce Free Electricity Up To 300 Units In Delhi election 2025 Manifesto

ರಾಷ್ಟ್ರ ರಾಜಧಾನಿಯಲ್ಲಿಯೂ ಹಲವು ಘೋಷಣೆಗಳನ್ನು ಮಾಡಲು ಪಕ್ಷ ಮುಂದಾಗಿದೆ. ಅದರಲ್ಲೂ ಈಗಾಗಲೇ ಆಮ್ ಆದ್ಮಿ ಪಕ್ಷ ರಾಜ್ಯದ ಜನರಿಗೆ ಹಲವು ಭರವಸೆಗಳನ್ನು ನೀಡಿದೆ. ಆದ್ದರಿಂದ ಬಿಜೆಪಿ ಅನಿವಾರ್ಯವಾಗಿ ಹಲವು ಭರವಸೆಗಳನ್ನು ನೀಡಬೇಕಿದೆ. ರಾಜ್ಯದ ಆಡಳಿತ ವಿರೋಧಿ ಅಲೆಯನ್ನು ಬಳಸಿಕೊಂಡು ಚುನಾವಣೆ ಗೆಲ್ಲಲು ಬಿಜೆಪಿ ಯೋಜನೆ ರೂಪಿಸುತ್ತಿದೆ.

300 ಯುನಿಟ್ ಉಚಿತ ವಿದ್ಯುತ್: ಮಾಹಿತಿಗಳ ಪ್ರಕಾರ ಬಿಜೆಪಿ ರಾಜ್ಯದ ಜನರಿಗೆ 300 ಯುನಿಟ್ ಉಚಿತ ವಿದ್ಯುತ್ ಭರವಸೆ ನೀಡಲಿದೆ. ಅಲ್ಲದೇ ಉಚಿತವಾಗಿ ಕುಡಿಯುವ ನೀರು, ಮಹಿಳೆಯರಿಗೆ ಲಡ್ಕಿ ಬೆಹನ್ ಯೋಜನೆಯ ಮಾದರಿ ಯೋಜನೆಯನ್ನು ಘೋಷಣೆ ಮಾಡುವ ನಿರೀಕ್ಷೆ ಇದೆ.

ಅಲ್ಲದೇ ಬಿಜೆಪಿ ಧಾರ್ಮಿಕ ಕೇಂದ್ರಗಳಿಗೆ, ಗುರುದ್ವಾರಗಳಿಗೆ 500 ಯೂನಿಟ್ ಉಚಿತ ವಿದ್ಯುತ್ ಪೂರೈಸುವ ಘೋಷಣೆ ಮಾಡುವ ಸಾಧ್ಯತೆ ಇದೆ. ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶ ಚುನಾವಣೆಯಲ್ಲಿ ಬಿಜೆಪಿಗೆ ಮಹಿಳಾ ಮತದಾರರು ಹೆಚ್ಚಿನ ಬೆಂಬಲ ನೀಡಿದ್ದಾರೆ. ಆದ್ದರಿಂದ ದೆಹಲಿಯಲ್ಲಿಯೂ ಅವರ ಬೆಂಬಲ ಪಡೆಯಲು ಪಕ್ಷ ಮುಂದಾಗಿದೆ.

ಇತ್ತೀಚಿನ ದಿನಗಳಲ್ಲಿ ಎಎಪಿ, ಬಿಜೆಪಿ, ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳಿಗೆ ಮಹಿಳೆಯರು ಮತಬ್ಯಾಂಕ್ ಆಗಿದ್ದಾರೆ. ನೇರವಾಗಿ ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡುವ ಪಕ್ಷಗಳ ಭರವಸೆ, ಯೋಜನೆಗಳಿಗೆ ಮಹಿಳೆಯರು ಬೆಂಬಲ ಸೂಚಿಸುತ್ತಿದ್ದಾರೆ.

2015, 2020ರ ಚುನಾವಣೆಯಲ್ಲಿ ದೆಹಲಿಯಲ್ಲಿ ಗೆದ್ದು ಸರ್ಕಾರ ರಚನೆ ಮಾಡಿದ್ದ ಎಎಪಿ ಈ ಬಾರಿಯೂ ಗೆದ್ದು ಹ್ಯಾಟ್ರಿಕ್ ಬಾರಿಸುವ ಉತ್ಸಾಹದಲ್ಲಿದೆ. ಈಗಾಗಲೇ ಪ್ರಣಾಳಿಕೆಯಲ್ಲಿ ಪಕ್ಷ ಮಹಿಳೆಯರಿಗೆ ಮಾಸಿಕ 1000 ರೂ. ನಿಂದ 2,100 ರೂ. ನೀಡುವ ಭರವಸೆ ನೀಡಿದೆ. ಅಲ್ಲದೇ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ 60 ವರ್ಷ ದಾಟಿದವರಿಗೆ ಉಚಿತವಾಗಿ ಆರೋಗ್ಯ ಸೇವೆ ನೀಡುವ 'ಸಂಜೀವಿನಿ ಯೋಜನೆ' ಘೋಷಣೆ ಮಾಡಿದ್ದಾರೆ.

ಬಿಜೆಪಿ ದೆಹಲಿಯಲ್ಲಿ 2013ರ ವಿಧಾನಸಭೆ ಚುನಾವಣೆಯಲ್ಲಿ ಶೇ 33.1, 2015ರ ಚುನಾವಣೆಯಲ್ಲಿ ಶೇ 32.2ರಷ್ಟು ಮತಗಳನ್ನು ಪಡೆಯಿತು. 2020ರಲ್ಲಿ ಇದು ಶೇ 38.5ರಷ್ಟು ಹೆಚ್ಚಳವಾಯಿತು. ಆದರೆ 2015ರಲ್ಲಿ 32 ಸೀಟು ಗೆದ್ದಿದ್ದ ಪಕ್ಷ 2020ರಲ್ಲಿ ಗೆದ್ದಿದ್ದು 8 ಸೀಟು. 2024ರ ಲೋಕಸಭೆ ಚುನಾವಣೆಯಲ್ಲಿ ಗೆದ್ದಿರುವ ಪಕ್ಷ ರಾಷ್ಟ್ರ ರಾಜಧಾನಿಯಲ್ಲೂ ಗೆಲ್ಲಬೇಕು ಎಂದು ತಂತ್ರ ರೂಪಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+