Election Results: ಹರಿಯಾಣದಲ್ಲಿ ಮ್ಯಾಜಿಕ್ ನಂಬರ್ (46) ದಾಟಿದ ಬಿಜೆಪಿ, ಮುಗ್ಗರಿಸಿದ ಕಾಂಗ್ರೆಸ್
ನವದೆಹಲಿ, ಅಕ್ಟೋಬರ್ 08: ಹರಿಯಾಣದಲ್ಲಿ ಬೆಳಗ್ಗೆ 8 ಗಂಟೆಯಿಂದಲೇ ಮತ ಎಣಿಕೆ ಆರಂಭವಾಗಿದೆ. ಆರಂಭ ಕೆಲವು ಗಂಟೆ ಮುಂದಿದ್ದ ಕಾಂಗ್ರೆಸ್‌ಗೆ ಇದೀಗ ಹಿನ್ನಡೆ ಆಗಿದೆ. ಬಿಜೆಪಿಗೆ ಮುನ್ನಡೆ ಆಗಿದ್ದು, ಮ್ಯಾಜಿಕ್ ನಂಬರ್ ದಾಟಿ ಮುನ್ನುಗ್ಗುತ್ತಿದೆ. ಸದ್ಯ ಬಿಜೆಪಿ ಹರಿಯಾಣದಲ್ಲಿ 49 ಕ್ಷೇತ್ರಗಳಲ್ಲಿ ವಿಜಯ ಪತಾಕೆ ಹರಿಸುವ ಲಕ್ಷಣಗಳು ಕಂಡು ಬಂದಿವೆ.
ಸದ್ಯ ಬಿಜೆಪಿಗೆ ಹೆಚ್ಚಿನ ಸೀಟುಗಳು ಬರುತ್ತಿದ್ದಂತೆ ಕೇಸರಿ ಪಡೆ ಕಾರ್ಯಕರ್ತರು ಮತ್ತು ಮುಖಂಡರ ಮೊದಲ್ಲಿ ಮಂದಹಾಸ ಮೂಡಿದೆ. ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸುತ್ತಿದ್ದಾರೆ. ಕೆಲವೆಡೆ ಪಟಾಕಿ ಸಿಡಿಸುತ್ತಿದ್ದಾರೆ. ಗೆಲುವಿನ ಮಂದಹಾಸದಲ್ಲಿದ್ದ ಕಾಂಗ್ರೆಸ್ ಗೆ ತೀವ್ರ ಮುಖಭಂಗವಾಗಿದೆ.

ಬಿಜೆಪಿಯು 2014 ಮತ್ತು 2019ರಲ್ಲಿ ರಾಜ್ಯದಲ್ಲಿ ಆಡಳಿತ ನಡೆಸಿತ್ತು. ಈ ಬಾರಿಯು ಗೆಲುವಿಗೆ ಕಸರತ್ತು ನಡೆಸಿತ್ತು. ಹೊಸ ಹೊಸ ತಂತ್ರಗಾರಿಕೆ ಹೆಣೆದಿತ್ತು. ಗ್ರಾಮೀಣ ಭಾಗದಲ್ಲಿ ಆರ್‌ಎಸ್‌ಎಸ್ ಸಹಾಯದಿಂದ ಸಭೆ ನಡೆಸಿತ್ತು. ದಲಿತ ಸಮುದಾಯಗಳನ್ನು ಟಾರ್ಗೆಟ್ ಮಾಡುವ ಮೂಲಕ ಮೂರನೇ ಭಾರಿಗೆ ಅಧಿಕಾರಕ್ಕೆ ಬರಲು ಹವಣಿಸಿತ್ತು.
ಸದ್ಯದವರೆಗಿನ ಮತ ಎಣಿಕೆ ನೋಡಿದರೆ, ಹರಿಯಾಣದಲ್ಲಿ ಬಿಜೆಪಿಗೆ ಮೂರನೇ ಬಾರಿಗೆ ಮತದಾರರು ಆಶೀರ್ವಾದ ಮಾಡಿದ್ದಾರೆ. ಕೇವಲ ಹರಿಯಾಣದಲ್ಲಿ ಈ ಕಥೆಯಾದರೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಗೆ ಇಂತದ್ದೇ ಸ್ಥಿತಿ ಬಂದಿದೆ. ಅಲ್ಲಿ ಬಿಜೆಪಿಗೆ ತೀವ್ರ ಮುಖಂಭಂಗವಾಗಿದ್ದು, ಕಾಂಗ್ರೆಸ್ ಬರೋಬ್ಬರಿ 52ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ ಎಂದು ಚುನಾವಣೆ ಆಯೋಗ ಮಾಹಿತಿ ನೀಡಿದೆ.
ಬಿಜೆಪಿಯು ಹರಿಯಾಣದಲ್ಲಿ ಗೆದ್ದು ಬೀಗುತ್ತಿದೆ. ಕಾಂಗ್ರೆಸ್‌ಗೆ ಹಿನ್ನಡೆಯಾಗಿದೆ. ಬಿಜೆಪಿ ಪಕ್ಷದ ಸ್ಥಳೀಯ ಮುಖಂಡರು, ಹಾಲಿ ಸಚಿವರು, ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಪ್ರಮುಖ ರಸ್ತೆಗಳೆಲ್ಲ ಕೇಸರಿಮಯವಾಗಿದೆ. ಪ್ರಧಾನಿ ಮೋದಿ ಪರ ಘೋಷಣೆಗೊಳು ಮೊಳಗಿವೆ.
ಇಲ್ಲಿ ಮೂರನೇ ಬಾರಿಗೆ ಗೆಲ್ಲಲು ಬಿಜೆಪಿಗೆ ಹಲವು ಸವಾಲುಗಳು ಎದುರಾಗದ್ದವು. ಒಂದು ರೀತಿಯಲ್ಲಿ ಆಡಳಿತ ವಿರೋಧಿ ಅಲೆಯ ವಾತಾವರಣ ಸೃಷ್ಟಿಯಾಗಿತ್ತು. ಇದನ್ನೆ ಅಸ್ತ್ರವಾಗಿ ಮಾಡಿಕೊಂಡ ಕಾಂಗ್ರೆಸ್ ರಾಜ್ಯ ಅಧಿಕಾರದಿಂದ ಬಿಜೆಪಿಯನ್ನು ದೂರವಿಡಲು ತಂತ್ರ ಮಾಡಿತ್ತು. ಆದರೆ ಇದೆಲ್ಲದವರ ಮಧ್ಯೆ ಬಿಜೆಪಿ ಮೈ ಕೊಡವಿ ಎದ್ದಿದೆ. ಮೂರನೇ ಭರ್ಜರಿ ಗೆಲುವು ಸಾಧಿಸಿದೆ.
ಇದಕ್ಕೆ ಪ್ರಧಾನಿ ಮೋದಿ ಭಾಷಣ, ರ್ಯಾಲಿಗಳು ಒಂದು ಕಡೆಯಾದರೆ, ಮತ್ತೊಂದೆಡೆ ಚುನಾವಣೆ ಮೊದಲು ಮುಖ್ಯಮಂತ್ರಿಗಳನ್ನು ಬದಲಾವಣೆ ಮಾಡಲಾಯಿತು. ಈ ವಿಚಾರದಲ್ಲಿ ಅಮಿತ್ ಶಾ ತೋರಿದ ಚಾಣಾಕ್ಷತನ, ದೂರದೃಷ್ಟಿಯ ಒಂದಷ್ಟು ಕಾರಣಗಳಿಂದ ಇಂದು ಪಕ್ಷ ಮತ್ತೆ ಹರಿಯಾಣದಲ್ಲಿ ನೆಲೆಯೂರುವಂತಾಗಿದೆ ಎಂದು ವಿಶ್ಲೇಷಕರು ಮಾತನಾಡಿಕೊಳ್ಳುತ್ತಿದ್ದಾರೆ.












Click it and Unblock the Notifications