ಎನ್ ಡಿಎಗೆ 300 ಪ್ಲಸ್ ಸ್ಥಾನ, ಎಬಿಪಿ ನ್ಯೂಸ್ ಸಮೀಕ್ಷೆ
ಬೆಂಗಳೂರು, ಜನವರಿ 26: ಬಿಜೆಪಿ ನೇತೃತ್ವದ ನ್ಯಾಷನಲ್ ಡೆಮೊಕ್ರಾಟಿಕ್ ಅಲೈಯನ್ಸ್ (ಎನ್ ಡಿಎ)ಗೆ ಮುಂದಿನ ಲೋಕಸಭೆಯಲ್ಲಿ ಸರಿ ಸುಮಾರು 293 ರಿಂದ 309 ಸ್ಥಾನಗಳು ಲಭಿಸಲಿವೆ.
ಈ ಸಮಯಕ್ಕೆ ತ್ವರಿತವಾಗಿ ಚುನಾವಣೆ ನಡೆದರೆ ಎನ್ ಡಿಎಗೆ ಶೇ 34ರಷ್ಟು ಮತಪಾಲು ಸಿಗಲಿದೆ ಎಂದು ಎಬಿಪಿ ನ್ಯೂಸ್ ಲೋಕ್ ನೀತಿ ಸಿಎಸ್ ಡಿಎಸ್ ಸಮೀಕ್ಷೆ ವರದಿ ಹೇಳಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆಯೇ ಎನ್ಡಿಎಗೆ ಶ್ರೀರಕ್ಷೆಯಾಗಲಿದೆ. ಆದರೆ, 2014ಕ್ಕೆ ಹೋಲಿಸಿದರೆ ಕಾಂಗ್ರೆಸ್ ತನ್ನ ಬಲವನ್ನು ಹೆಚ್ಚಿಸಿಕೊಳ್ಳಲಿದೆ.

ಆದರೆ, ಮ್ಯಾಜಿಕ್ ಸಂಖ್ಯೆಯಾದ 272ರ ಹತ್ತಿರಕ್ಕೆ ಬರಲು ಕಾಂಗ್ರೆಸ್ಸಿಗೆ ಸಾಧ್ಯವಾಗುವುದಿಲ್ಲ. ಕಾಂಗ್ರೆಸ್ 127 ಸ್ಥಾನ ಗೆಲ್ಲುವ ನಿರೀಕ್ಷೆಯಿದೆ ಎಂದು ಸಮೀಕ್ಷೆ ಹೇಳಿದೆ.












Click it and Unblock the Notifications