ಬಿಹಾರ ಚುನಾವಣಾಪೂರ್ವ ಸಮೀಕ್ಷೆ: ನಿತೀಶ್ ಗೆ ಮುಖಭಂಗ

ಪಾಟ್ನಾ, ನವದೆಹಲಿ, ಸೆ 11: ಬಿಹಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಎನ್ಡಿಎ ಪ್ರಭಾವ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟಕ್ಕೆ ಸರಳ ಬಹುಮತ ಸಿಗುವ ಸಾಧ್ಯತೆಯಿದೆ ಎಂದು ಚುನಾವಣಾಪೂರ್ವ ಸಮೀಕ್ಷೆಯಲ್ಲಿ ಹೇಳಲಾಗಿದೆ.

ಸೆಪ್ಟಂಬರ್ ಮೊದಲ ವಾರದಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ, ಲಾಲೂ ಪ್ರಸಾದ್ ಯಾದವ್ ಮತ್ತು ಕಾಂಗ್ರೆಸ್ ಜೊತೆ ಮೈತಿ ಕೊಂಡಿರುವ ನಿತೀಶ್ ಕುಮಾರ್ ತೀವ್ರ ಮುಖಭಂಗ ಎದುರಿಸ ಬೇಕಾಗಬಹುದು ಎಂದು ಇಂಡಿಯಾ ಟುಡೆ - ಸಿಸಿರೋ ನಡೆಸಿದ ಸಮೀಕ್ಷೆಯಲ್ಲಿ ಜನಾಭಿಪ್ರಾಯ ವ್ಯಕ್ತವಾಗಿದೆ.

ಆಮ್ ಆದ್ಮಿ ಪಕ್ಷದ ಮಾಜಿ ಸಂಸ್ಥಾಪಕ ಸದಸ್ಯ ಮತ್ತು ಖ್ಯಾತ ಚುನಾವಣಾ ವಿಶ್ಲೇಷಕ ಯೋಗೀಂದ್ರ ಯಾದವ್ ಕೂಡಾ ಬಿಹಾರದಲ್ಲಿ ಬಿಜೆಪಿಗೆ ಅನುಕೂಲಕರ ವಾತಾವರಣವಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಐದು ಹಂತದಲ್ಲಿ ನಡೆಯುವ ಬಿಹಾರ ಚುನಾವಣೆ ಅಕ್ಟೋಬರ್ ಹನ್ನೆರಡರಿಂದ ನವೆಂಬರ್ ಐದರವರೆಗೆ ನಡೆಯಲಿದ್ದು ಮತ್ತು ಮತಎಣಿಕೆ ನವೆಂಬರ್ ಎಂಟರಂದು ನಡೆಯಲಿದೆ. (ಬಿಹಾರ ಚುನಾವಣೆ ವೇಳಾಪಟ್ಟಿ)

ಕಳೆದ ವಿಧಾನಸಭಾ ಚುನಾವಣೆಯಲ್ಲಿ (2010) ಜೆಡಿಯು 115, ಬಿಜೆಪಿ 91, ಆರ್ಜೆಡಿ ಒಕ್ಕೂಟ 25 ಸ್ಥಾನದಲ್ಲಿ ಜಯಗಳಿಸಿದ್ದವು. ಒಟ್ಟು ಕ್ಷೇತ್ರ 243, ಬಹುಮತಕ್ಕೆ ಬೇಕಾಗಿರುವ ಸ್ಥಾನ 122.

ಇಂಡಿಯಾ ಟುಡೆ - ಸಿಸಿರೋ ನಡೆಸಿದ ಸಮೀಕ್ಷೆಯ ಪ್ರಕಾರ ಯಾರಿಗೆ ಎಷ್ಟು ಸ್ಥಾನ ಸಿಗಲಿದೆ ಮತ್ತು ಇತರ ಜನಾಭಿಪ್ರಾಯವನ್ನು ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

ದೇಶದ ಅಭಿವೃದ್ಧಿಗೆ ಯಾರು ಮಾದರಿ?

ದೇಶದ ಅಭಿವೃದ್ಧಿಗೆ ಯಾರು ಮಾದರಿ?

ಈ ಪ್ರಶ್ನೆಗೆ ಜನರು ಶೇ. 45 ನರೇಂದ್ರ ಮೋದಿ ಮತ್ತು ಬಿಹಾರದ ಹಾಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಶೇ. 30 ಎಂದಿದ್ದಾರೆ.

ಯಾವ ಸರಕಾರ ಉತ್ತಮವಾಗಿತ್ತು?

ಯಾವ ಸರಕಾರ ಉತ್ತಮವಾಗಿತ್ತು?

ಬಿಜೆಪಿ - ನಿತೀಶ್ : ಶೇ. 40
ನಿತೀಶ್ - ಲಾಲೂ ಮೈತ್ರಿಯ ಸರಕಾರ : ಶೇ. 33

ಸಿಎಂ ಸ್ಥಾನಕ್ಕೆ ಯಾರು ಸೂಕ್ತ?

ಸಿಎಂ ಸ್ಥಾನಕ್ಕೆ ಯಾರು ಸೂಕ್ತ?

ನಿತೀಶ್ ಕುಮಾರ್ - ಶೇ. 29
ಸುಶೀಲ್ ಕುಮಾರ್ ಮೋದಿ - ಶೇ.19
ಲಾಲೂ ಪ್ರಸಾದ್ ಯಾದವ್ - ಶೇ. 12
ರಾಮವಿಲಾಸ್ ಪಾಸ್ವಾನ್ - ಶೇ. 7
ಜಿತನ್ ರಾಮ್ ಮಾಂಝಿ - ಶೇ. 6%

ಯಾರಿಗೆ ಎಷ್ಟು ಸ್ಥಾನ

ಯಾರಿಗೆ ಎಷ್ಟು ಸ್ಥಾನ

ಬಿಜೆಪಿ ಮೈತ್ರಿಕೂಟಕ್ಕೆ ಅಂದಾಜು 125
ಜೆಡಿಯು ಮೈತ್ರಿಕೂಟಕ್ಕೆ ಅಂದಾಜು 106
ಇತರರಿಗೆ - ಅಂದಾಜು 12

ಎನ್ಡಿಎ ಸೀಟು ಹಂಚಿಕೆ ಅಂತಿಮ

ಎನ್ಡಿಎ ಸೀಟು ಹಂಚಿಕೆ ಅಂತಿಮ

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್ಡಿಎ ಸೀಟು ಹಂಚಿಕೆ ವಿಚಾರ ಅಂತಿಮ ಹಂತಕ್ಕೆ ಬಂದಿದ್ದು, 243 ಕ್ಷೇತ್ರಗಳ ಪೈಕಿ 160ರಿಂದ 170 ಸ್ಥಾನಗಳಲ್ಲಿ ಬಿಜೆಪಿ ಸ್ಪರ್ಧಿಸಲಿದ್ದು, ಮಿತ್ರಪಕ್ಷಗಳಿಗೆ 70ರಿಂದ 83 ಕ್ಷೇತ್ರಗಳನ್ನು ಬಿಟ್ಟುಕೊಡಲು ನಿರ್ಧರಿಸಲಾಗಿದೆ. ಈ ಬಗ್ಗೆ ಅಂತಿಮ ಘೋಷಣೆ ಹೊರಬೀಳ ಬೇಕಷ್ಟೇ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+