ಎಬಿಪಿ ಸಮೀಕ್ಷೆ 2: ಎನ್ ಡಿಎ ಮುನ್ನಡೆ, ಯುಪಿಎ ಡೌನ್

ನವದೆಹಲಿ, ಮಾ.30: ದೇಶದಲ್ಲಿ ತಕ್ಷಣವೇ ಲೋಕಸಭೆಗೆ ಚುನಾವಣೆ ನಡೆದರೆ ಬಿಜೆಪಿ ನೇತೃತ್ವದ ಎನ್ ‌ಡಿಎ ಏಕೈಕ ದೊಡ್ಡ ಶಕ್ತಿಯಾಗಿ ಹೊರ ಹೊಮ್ಮಲಿದೆ ಎಂದು ರಾಷ್ಟ್ರೀಯ ಸುದ್ದಿವಾಹಿನಿ ನಡೆಸಿದ ಎರಡನೇ ಸಮೀಕ್ಷೆಯಿಂದ ತಿಳಿದು ಬಂದಿದೆ.

ಬಿಜೆಪಿ ನೇತೃತ್ವದ ಎನ್ ಡಿಎಗೆ 236 ಸ್ಥಾನಗಳು ದೊರೆಯಲಿದೆ. ಕಾಂಗ್ರೆಸ್ ನೇತೃತ್ವ ಯುಪಿಎ ಈ ಬಾರಿ ಚುನಾವಣೆಯಲ್ಲಿ ನೆಲಕಚ್ಚಲಿದ್ದು, ಕೇವಲ 92 ಸ್ಥಾನಕ್ಕೆ ತೃಪ್ತಿ ಹೊಂದಬೇಕಾಗುತ್ತದೆ ಎಂದು ಈ ಹಿಂದೆ ಸಮೀಕ್ಷೆ ವರದಿ ನೀಡಿದ್ದ ಎಬಿಸಿ-ನೆಲ್ಸನ್ ಸಂಸ್ಥೆ ಶನಿವಾರ ರಾತ್ರಿ ಹೊರ ಹಾಕಿರುವ ಎರಡನೇ ಸಮೀಕ್ಷಾ ವರದಿಯಲ್ಲೂ ಎನ್ ಡಿಎಗೆ ಭರ್ಜರಿ ಗೆಲುವು ಲಭಿಸಲಿದೆ ಎನ್ನಲಾಗಿದೆ.

ಮಾ.9 ರಿಂದ ಮಾ16ರ ತನಕ ದೇಶದೆಲ್ಲೆಡೆ 29 ಸಾವಿರಕ್ಕೂ ಅಧಿಕ ಮತದಾರರ ಅಭಿಮತ ಸಂಗ್ರಹಿಸಿ, ನೇರ ಸಂದರ್ಶನ ನಡೆಸಿ ಎಬಿಪಿ ನ್ಯೂಸ್ ಹಾಗೂ ನೆಲ್ಸನ್ ಸಂಸ್ಥೆ ಈ ಸಮೀಕ್ಷಾ ವರದಿ ತಯಾರಿಸಿದೆ. ಸರ್ಕಾರ ರಚನೆಯಲ್ಲಿ ಬಿಎಸ್ ಪಿ, ಟಿಎಂಸಿ, ಎಐಎಡಿಎಂಕೆ ಪ್ರಮುಖ ಪಾತ್ರ ವಹಿಸಲಿವೆ ಎಂದು ಎಬಿಪಿ ನ್ಯೂಸ್ ಹೇಳಿದೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವಧಿಯಲ್ಲಿ ಪಡೆದ ಸ್ಥಾನಗಳಿಗಿಂತಲೂ ಈ ಬಾರಿ ಕಮಲ ಪಕ್ಷ ಹೆಚ್ಚಿನ ಸ್ಥಾನ ಪಡೆಯಲಿದೆ. ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅಲೆ ಹಿಂದಿ ಭಾಷಿಕ ರಾಜ್ಯಗಳಲ್ಲಿ ದುಪ್ಪಟ್ಟಾಗಲಿದೆ. ಕರ್ನಾಟಕದ ಬಿಜೆಪಿ ಪಕ್ಷ ಅಧಿಕ ಸ್ಥಾನ ಗಳಿಸಿದರೂ ಕಳೆದ ಬಾರಿಗಿಂತ ಕೊಂಚ ಹಿನ್ನಡೆ ಅನುಭವಿಸಲಿದೆ. ವಲಯವಾರು ಸಮೀಕ್ಷಾ ವರದಿ ವಿವರ ಮುಂದೆ ಓದಿ...

ಎನ್ ಡಿಎ-ಬಿಜೆಪಿಗೆ ಮ್ಯಾಜಿಕ್ ನಂಬರ್ ಚಿಂತೆ

ಎನ್ ಡಿಎ-ಬಿಜೆಪಿಗೆ ಮ್ಯಾಜಿಕ್ ನಂಬರ್ ಚಿಂತೆ

ಒಟ್ಟು ಲೋಕಸಭೆಯ 543 ಸ್ಥಾನಗಳಲ್ಲಿ ಸರ್ಕಾರ ರಚನೆಗೆ 272 ಸ್ಥಾನಗಳು ಬೇಕು. ಎನ್ ಡಿಎ 236 ಸ್ಥಾನಗಳನ್ನು ಪಡೆದರೆ ಸರ್ಕಾರ ರಚನೆಗೆ ಇನ್ನು 36 ಸದಸ್ಯರ ಕೊರತೆ ಎದುರಾಗಲಿದೆ. ಬಿಜೆಪಿ 209 ಸೀಟುಗಳನ್ನು ಪಡೆಯಲಿದೆ.

ತೃತೀಯರಂಗದ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ 28 ಸೀಟುಗಳು ನಿರ್ಣಾಯಕವಾಗುವ ಸಾಧ್ಯತೆ ಹೆಚ್ಚಿದೆ. ಕಾಂಗ್ರೆಸ್ ಕೇವಲ 91 ಸೀಟು ಪಡೆಯಲಿದ್ದು ಒಟ್ಟಾರೆ ಯುಪಿಎ ಗೆ 119 ಸ್ಥಾನ ಮಾತ್ರ ಲಭಿಸಲಿದೆ. ಯುಪಿಎ, ಎನ್ ಡಿಎಯೇತರ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಮತಬ್ಯಾಂಕ್ ಭದ್ರ ಪಡಿಸಿಕೊಂಡಿವೆ ಎಂದು ಸಮೀಕ್ಷೆ ಹೇಳಿದೆ.

2009-2014-ಎನ್ ಡಿಎ-ಯುಪಿಎ ಬಲಾಬಲ

2009-2014-ಎನ್ ಡಿಎ-ಯುಪಿಎ ಬಲಾಬಲ

* 2014ರಲ್ಲಿ ಎನ್ ಡಿಎ 233 ಸೀಟು ಗೆಲ್ಲಲಿದೆ. 2009ರಲ್ಲಿ 159 ಸೀಟು ಗೆದ್ದಿತ್ತು.
* ಬಿಜೆಪಿ 209 ಗೆಲ್ಲಲಿದೆ, 2009ರಲ್ಲಿ 116 ಸೀಟು ಪಡೆದಿತ್ತು.
* 2014ರಲ್ಲಿ ಕಾಂಗ್ರೆಸ್ 91 ಸೀಟು ಗೆಲ್ಲಲಿದೆ. 2009ರಲ್ಲಿ 206 ಗಳಿಸಿತ್ತು.
* ಯುಪಿಎ 114 ಸೀಟು ಗೆಲ್ಲಲಿದೆ. 2009ರಲ್ಲಿ 262 ಸೀಟು ಪಡೆದಿತ್ತು.

ದಕ್ಷಿಣದಲ್ಲೂ ಬಿಜೆಪಿಗೆ ಕಳೆ ಮೋದಿ ಅಲೆ

ದಕ್ಷಿಣದಲ್ಲೂ ಬಿಜೆಪಿಗೆ ಕಳೆ ಮೋದಿ ಅಲೆ

* ಕರ್ನಾಟಕ (28) : ಬಿಜೆಪಿಗೆ 15 (2009ರಲ್ಲಿ 19), ಕಾಂಗ್ರೆಸ್ 10(6), ಜೆಡಿಎಸ್ 3 (3)
* ಕೇರಳ (20): ಸಿಪಿಎಂ 5, ಕಾಂಗ್ರೆಸ್ 8, ಇತರೆ 7
* ತಮಿಳುನಾಡು (39) : ಎಐಎಡಿಎಂಕೆ 21, ಡಿಎಂಕೆ 10, ಕಾಂಗ್ರೆಸ್ 1
* ಆಂಧ್ರಪ್ರದೇಶ(42): ಕಾಂಗ್ರೆಸ್ 9, ಟಿಡಿಪಿ 7, ಟಿಆರ್ ಎಸ್ 7, ವೈಎಸ್ಸಾರ್ ಕಾಂಗ್ರೆಸ್ 17, ಎಐಎಂಐಎಂ 1, ಇತರೆ 1
* ಗೋವಾ(2): ಕಾಂಗ್ರೆಸ್ 1, ಬಿಜೆಪಿ 1

ಭಾರತದ ಪೂರ್ವದಲ್ಲಿ ಯಾರಿಗೆ ಲಾಭ?

ಭಾರತದ ಪೂರ್ವದಲ್ಲಿ ಯಾರಿಗೆ ಲಾಭ?

* ಬಿಹಾರ್ (40): ಬಿಜೆಪಿ 19(2009ರಲ್ಲಿ 12), ಲಾಲೂ ಅವರ ಆರ್ ಜೆಡಿ 10, ಜೆಡಿಯು 6, ಕಾಂಗ್ರೆಸ್ 2, ಎಲ್ ಜೆಪಿ 2, ಇತರೆ 1
* ಅಸ್ಸಾಂ (14) : ಕಾಂಗ್ರೆಸ್ 8, ಎಜಿಪಿ 1, ಬಿಜೆಪಿ 3, ಬಿಪಿಎಫ್ 1, ಎಯುಎಫ್ 1
* ಒರಿಸ್ಸಾ(21) : ಬಿಜೆಡಿ 17, ಬಿಜೆಪಿ 2, ಕಾಂಗ್ರೆಸ್ 2
* ಜಾರ್ಖಂಡ್(14) : ಬಿಜೆಪಿ 10, ಜೆಎಂಎಂ 1, ಕಾಂಗ್ರೆಸ್ 1, ಇತರೆ 2
* ಪಶ್ಚಿಮ ಬಂಗಾಳ(42) : ಮಮತಾ ಅವರ ತೃಣಮೂಲ ಕಾಂಗ್ರೆಸ್ 28(2009ರಲ್ಲಿ 19), ಸಿಪಿಎಂ 7, ಕಾಂಗ್ರೆಸ್ 2, ಸಿಪಿಐ 2, ಎಐಎಫ್ ಬಿ 1, ಬಿಜೆಪಿ 1, ಆರ್ ಎಸ್ ಪಿ 1

ಭಾರತದ ಪಶ್ಚಿಮದಲ್ಲಿ ಯಾರಿಗೆ ಗೆಲುವು?

ಭಾರತದ ಪಶ್ಚಿಮದಲ್ಲಿ ಯಾರಿಗೆ ಗೆಲುವು?

* ಮಹಾರಾಷ್ಟ್ರ(48): ಬಿಜೆಪಿ 19 (2009ರಲ್ಲಿ 9), ಕಾಂಗ್ರೆಸ್ 5, ಎನ್ ಸಿಪಿ 5, ಶಿವಸೇನಾ 12(2009ರಲ್ಲಿ 11), ಎಂಎನ್ ಎಸ್ 1, ಇತರೆ 3
* ಮಧ್ಯಪ್ರದೇಶ (29) : ಬಿಜೆಪಿ 23, ಕಾಂಗ್ರೆಸ್ 5, ಬಿಎಸ್ ಪಿ 1.
* ಗುಜರಾತ್ (26): ಬಿಜೆಪಿ ಪ್ರಧಾನಿ ಅಭ್ಯರ್ಥಿ ಮೋದಿ ಅವರ ರಾಜ್ಯದಲ್ಲಿ ಬಿಜೆಪಿಗೆ 21 ಸ್ಥಾನ ಸಿಗಲಿದೆ, ಕಾಂಗ್ರೆಸ್ 5 ಸೀಟು ಗೆಲ್ಲುವ ನಿರೀಕ್ಷೆಯಿದೆ.
* ಛತ್ತೀಸ್ ಗಢ (11): ಬಿಜೆಪಿ 9 ಸ್ಥಾನ, ಕಾಂಗ್ರೆಸ್ 2.

ಉತ್ತರದಲ್ಲಿ ಯಾರಿಗೆ ಲಾಭ, ಯಾರಿಗೆ ನಷ್ಟ?

ಉತ್ತರದಲ್ಲಿ ಯಾರಿಗೆ ಲಾಭ, ಯಾರಿಗೆ ನಷ್ಟ?

* ಉತ್ತರಾಖಂಡ್ (5) : ಬಿಜೆಪಿಗೆ ಐದರಲ್ಲಿ ಐದು ಸ್ಥಾನ ಸಿಗಲಿದೆ.
* ರಾಜಸ್ಥಾನ್ (25) : ಬಿಜೆಪಿ 20, ಕಾಂಗ್ರೆಸ್ 5
* ಪಂಜಾಬ್ (13) : ಬಿಜೆಪಿ 2, ಕಾಂಗ್ರೆಸ್ 6, ಶಿರೋಮಣಿ ಅಕಾಲಿ ದಳ 5.
* ದೆಹಲಿ (7) : ಎಎಪಿ 3, ಬಿಜೆಪಿ 3, ಕಾಂಗ್ರೆಸ್ 1.
* ಹರ್ಯಾಣ (10) : ಬಿಜೆಪಿ 9,ಕಾಂಗ್ರೆಸ್ 1
* ಹಿಮಾಚಲ ಪ್ರದೇಶ (4) : ನಾಲ್ಕು ಸ್ಥಾನಗಳು ಬಿಜೆಪಿ ಪಾಲಾಗುವ ನಿರೀಕ್ಷೆ.
* ಚಂದೀಗಢ (1) : ಆಮ್ ಆದ್ಮಿ ಪಕ್ಷದ ಪಾಲು. ಖಾತೆ ಓಪನ್
* ಜಮ್ಮು ಮತ್ತು ಕಾಶ್ಮೀರ (6) : ಯುಪಿಎ 3, ಬಿಜೆಪಿ, ಪಿಡಿಪಿ ಹಾಗೂ ಇತರೆ ಪಕ್ಷಗಳಿಗೆ 1.

ದೇಶದೆಲ್ಲೆಡೆ ಸೀಟುಗಳ ಬ್ರೇಕ್ ಆಪ್

ದೇಶದೆಲ್ಲೆಡೆ ಸೀಟುಗಳ ಬ್ರೇಕ್ ಆಪ್

* ಯುಪಿಎ 119: ಪೂರ್ವ 22(142),ಉತ್ತರ 27(151), ದಕ್ಷಿಣ 35 (134), ಪಶ್ಚಿಮ 25 (116)

* ಎನ್ ಡಿಎ 233 : ಪೂರ್ವ 37 (142),ಉತ್ತರ 87 (151), ದಕ್ಷಿಣ 21 (134), ಪಶ್ಚಿಮ 86 (116)
* ಎಡಪಕ್ಷ 23: ಪೂರ್ವ 14 (142), ಉತ್ತರ 0 (151), ದಕ್ಷಿಣ 21 (134), ಪಶ್ಚಿಮ 0 (116)
* ಇತರೆ 170 : ಪೂರ್ವ 59 (142),ಉತ್ತರ 37 (151), ದಕ್ಷಿಣ 69 (134), ಪಶ್ಚಿಮ 6 (116)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+