ಕೇರಳದ ಬಿಜೆಪಿ ಕಾರ್ಯಕರ್ತನನ್ನು ಕೊಚ್ಚಿ ಕೊಲೆ

Posted By:
Subscribe to Oneindia Kannada

ತ್ರಿಸ್ಸೂರು, ಫೆಬ್ರವರಿ 13: ತ್ರಿಸ್ಸೂರು ಜಿಲ್ಲೆಯಲ್ಲಿ 20 ವರ್ಷ ವಯಸ್ಸಿನ ಬಿಜೆಪಿ ಕಾರ್ಯಕರ್ತರೊಬ್ಬರನ್ನು ಕೊಚ್ಚಿ ಕೊಲೆ ಮಾಡಲಾಗಿದೆ. ಭಾನುವಾರ ತಡ ರಾತ್ರಿ ಮುಕ್ಕತ್ತುಕಾರ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದ್ದು, ಮೃತ ಕಾರ್ಯಕರ್ತರನ್ನು ನಿರ್ಮಲ್ ಎಂದು ಗುರುತಿಸಲಾಗಿದೆ. ರಾಜಕೀಯ ದ್ವೇಷಕ್ಕೆ ಬಲಿಯಾಗುವವರ ಸಂಖ್ಯೆ ಏರುತ್ತಲೇ ಇದೆ.

ಕೊಲೆ ಹಿಂದಿನ ಕಾರಣ ಏನು ಎಂಬುದು ಇನ್ನೂ ತಿಳಿದು ಬಂದಿಲ್ಲ. ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಪೊಲೀಸರು ಹೇಳಿದ್ದಾರೆ.[ಬಿಜೆಪಿ ಕಾರ್ಯಕರ್ತ ಕೊಲೆ: ಆರು ಸಿಪಿಎಂ ಕಾರ್ಯಕರ್ತರ ಬಂಧನ]

BJP leader hacked to death in Kerala

ರಾಜಕೀಯ ದ್ವೇಷದಿಂದ ನಡೆದಿರುವ ಕೊಲೆಗಳ ಸರಣಿಗೂ ಈ ಕೊಲೆ ಸೇರಲಿದೆಯೇ ಎಂಬ ನಿರೀಕ್ಷಿತ ಪ್ರಶ್ನೆಯನ್ನು ಪೊಲೀಸರು ತಳ್ಳಿ ಹಾಕಿಲ್ಲ. ಕೊಲೆಗಾರರ ಪತ್ತೆಗೆ ವಿಶೇಷ ತಂಡ ರೂಪಿಸಲಾಗಿದ್ದು, ಇನ್ನಷ್ಟು ವಿಷಯ ತಿಳಿಯ ಬೇಕಿದೆ ಎಂದಿದ್ದಾರೆ.

ಕೇರಳದ ಆಂದಾಲೂರ್ ಎಂಬಲ್ಲಿ ಸಿ ಸಂತೋಷ್ ಎಂಬ 52 ವರ್ಷ ವಯಸ್ಸಿನ ಬಿಜೆಪಿ ಕಾರ್ಯಕರ್ತನ ಹತ್ಯೆಯಾದ ಒಂದು ತಿಂಗಳೊಳಗೆ ನಿರ್ಮಲ್ ಅವರನ್ನು ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲ್ಲಲಾಗಿದೆ. ಸಿಪಿಐಎಂ ಹಾಗೂ ಬಿಜೆಪಿ ನಡುವಿನ ರಾಜಕೀಯ ದ್ವೇಷಕ್ಕೆ ಕಾರ್ಯಕರ್ತರು ಬಲಿಯಾಗುತ್ತಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A 20 year old BJP worker was hacked to death at Thrissur district in Kerala. The incident took place late Sunday night at the Mukkattukara village. The deceased BJP worker has been identified as Nirmal.
Please Wait while comments are loading...