ಅಡ್ಡ ದಾರಿ ಹಿಡಿದರೂ ಬಿಜೆಪಿಗೆ ಬಂದಿದ್ದು 52 ಲಕ್ಷ ಮಿಸ್ಡ್‌ ಕಾಲ್ ಅಷ್ಟೆ

ನವದೆಹಲಿ, ಜನವರಿ 07: ಸಿಎಎ ವಿರುದ್ಧ ದೇಶದಾದ್ಯಂತ ಪ್ರತಿಭಟನೆಗಳು ಹೆಚ್ಚಾದಾಗ ಸಿಎಎ ಬೆಂಬಲ ದಾಖಲಿಸುವ ಸಲುವಾಗಿ ಬಿಜೆಪಿ ಮಿಸ್ಡ್‌ ಕಾಲ್ ಅಭಿಯಾನ ನಡೆಸಿತ್ತು. ಆದರೆ ಈ ಅಭಿಯಾನದಲ್ಲೂ ಸಿಎಎ ಗೆ ಹೆಚ್ಚಿನ ಬೆಂಬಲ ಪ್ರಾಪ್ತಿಯಾಗಿಲ್ಲ.

8866288662 ಮೊಬೈಲ್ ಸಂಖ್ಯೆಗೆ ಮಿಸ್ಡ್ ಕಾಲ್ ಕೊಟ್ಟು ಸಿಎಎ (ಪೌರತ್ವ ಕಾಯ್ದೆ)ಗೆ ಬೆಂಬಲ ದಾಖಲಿಸಿ ಎಂದು ಬಿಜೆಪಿ ಮನವಿ ಮಾಡಿತ್ತು. ಈ ಅಭಿಯಾನದಲ್ಲಿ ಸಿಎಎ ಗೆ ಬೆಂಬಲ ವ್ಯಕ್ತಪಡಿಸಿ 68 ಲಕ್ಷ ಮಂದಿ ಮಿಸ್ಡ್‌ ಕಾಲ್ ಕೊಟ್ಟಿದ್ದಾರೆ ಇದರಲ್ಲಿ 52.7 ಲಕ್ಷ ಮಿಸ್ಡ್‌ಕಾಲ್‌ಗಳು ನೊಂದಾವಣಿ ಆಗಿರುವ ಮೊಬೈಲ್ ಸಂಖ್ಯೆಗಳಿಂದ ಬಂದಿವೆ ಎಂದು ಅಮಿತ್ ಶಾ ಹೇಳಿದ್ದಾರೆ. ಭಾರತದಲ್ಲಿ ಮೊಬೈಲ್ ಬಳಸುವವರ ಒಟ್ಟು ಸಂಖ್ಯೆಗೆ ಹೋಲಿಸಿದರೆ ಇದು 0.63% ಮಾತ್ರವೇ ಆಗುತ್ತದೆ.

ಮಿಸ್ಡ್‌ ಕಾಲ್ ಅಭಿಯಾನದಲ್ಲಿ ಹೆಚ್ಚಿನ ಜನರ ಬೆಂಬಲ ಪಡೆಯಲು ಬಿಜೆಪಿ ಐಟಿ ವಿಭಾಗ ಬಳಸಿದ್ದ ಕೆಟ್ಟ ದಾರಿಗಳ ಬಗ್ಗೆ ಭಾರಿ ವಿರೋಧ ವ್ಯಕ್ತವಾಗಿತ್ತು. 8866288662 ಹುಡುಗಿಯರ ಮೊಬೈಲ್ ಸಂಖ್ಯೆ ಎಂತಲೂ, ವೇಶ್ಯಾಗೃಹದ ಮೊಬೈಲ್ ಸಂಖ್ಯೆ ಎಂತಲೂ ಬಿಂಬಿಸಿ ಜನರು ಕಾಲ್ ಮಾಡುವಂತೆ ಉದ್ರೇಕಿಸುವ ಪ್ರಯತ್ನವೂ ಸಾಮಾಜಿಕ ಜಾಲತಾಣದಲ್ಲಿ ನಡೆದಿತ್ತು. ಆದರೂ ಮಿಸ್ಡ್‌ ಕಾಲ್ ಸಂಖ್ಯೆ ತುಂಬಾ ಕಡಿಮೆ ಆಗಿದೆ.

BJP Get Very Few Missed Call In Support Of CAA

'8866288662 ನಂಬರ್‌ ಗೆ ಮಿಸ್ಡ್‌ ಕಾಲ್ ನೀಡಿದರೆ ನೆಕ್‌ಫ್ಲಿಕ್ಸ್‌ ಉಚಿತವಾಗಿ ಬರುತ್ತದೆ' ಎಂದೂ, 'ಮಿಸ್ಡ್‌ ಕಾಲ್ ಕೊಟ್ಟರೆ ಡಾಟಾ ಉಚಿತ' ಎಂದೂ, ಚಂದದ ಹುಡುಗಿಯರ ಚಿತ್ರ ಹಾಕಿ, 'ನಂಬರ್‌ ಗೆ ಮಿಸ್ಡ್‌ ಕಾಲ್ ಮಾಡಿದರೆ ನಗ್ನ ಚಿತ್ರ ಕಳಿಸುತ್ತೇನೆಂದು' ಹೇಳುವ ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ವಿಪರೀತ ಹರಿದಾಡಿದ್ದವು, ಇದಕ್ಕೆ ಭಾರಿ ವಿರೋಧವೂ ವ್ಯಕ್ತವಾಗಿತ್ತು. ಮಿಸ್ಡ್ ಕಾಲ್ ಮೂಲಕ ಬೆಂಬಲ ಪಡೆಯಲು ಬಿಜೆಪಿ ಐಟಿ ಸೆಲ್ ಅಡ್ಡದಾರಿ ಹಿಡಿದಿದೆ ಎಂದು ಹಲವು ದೂರಿದ್ದರು.

ಬಿಜೆಪಿಯು 19 ಕೋಟಿ ನೊಂದಾಯಿತ ಕಾರ್ಯಕರ್ತರನ್ನು ಹೊಂದಿದೆ ಎಂದು ಪಕ್ಷದ ವರಿಷ್ಠರು ಇತ್ತೀಚೆಗಷ್ಟೆ ಹೇಳಿದ್ದರು, ಆದರೆ ಈ ಸಂಖ್ಯೆಗೆ ಹೋಲಿಸಿದರೂ 52 ಲಕ್ಷ ಅತ್ಯಂತ ಕಡಿಮೆ ಆಗಿದೆ.

ಸಿಎಎ ಗೆ ಸಾಮಾನ್ಯ ಜನರ ಬೆಂಬಲ ಕಡಿಮೆ ಇದೆ ಎಂಬುದನ್ನು ಬಿಜೆಪಿ ಮನಗಂಡು ಕಾಯ್ದೆಯನ್ನು ಹಿಂಪಡೆಯುವ ಯತ್ನ ಮಾಡುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+