ಬದ್ಧವೈರಿಗಳಾದ ಬಿಜೆಪಿ-ಕಾಂಗ್ರೆಸ್ ಮೈತ್ರಿಗೆ ಸಾಕ್ಷಿಯಾದ ಮಿಜೋರಾಂ!

ಚಕ್ಮಾ(ಮಿಝೋರಾಂ), ಏಪ್ರಿಲ್ 26: ಬಿಜೆಪಿ-ಕಾಂಗ್ರೆಸ್ ಮೈತ್ರಿ...! ಅದು ಎಂದಾದರೂ ಸಾಧ್ಯವೇ? ಬ ಇಜೆಪಿ ಎಂದೊಡನೆ ಉರಿದುಬೀಳುವ ಕಾಂಗ್ರೆಸ್, ಕಾಂಗ್ರೆಸ್ ಎಂದೊಡನೆ ಕೆಂಡಾಮಂಡಲವಾಗುವ ಬಿಜೆಪಿ ಒಟ್ಟಾಗಿ ಆಡಳಿತ ನಡೆಸುವುದು? ಛೆ ಛೆ ಸಾಧ್ಯವೇ ಇಲ್ಲ ಎಂದುಕೊಳ್ಳುವವರಿಗೆಲ್ಲ ಒಂದು ಅಚ್ಚರಿ ಕಾದಿದೆ!

ಮಿಜೋರಾಂನ ಸ್ಥಳೀಯ ಸಂಸ್ಥೆ ಚುನಾವಣೆಯ ನಂತರ ಸ್ಪಷ್ಟ ಬಹುಮತ ಪಡೆಯದ ಬಿಜೆಪಿ-ಕಾಂಗ್ರೆಸ್ ಪಕ್ಷಗಳು ಮೈತ್ರಿಮಾಡಿಕೊಂಡಿವೆ! ಇಲ್ಲಿನ ಚಕ್ಮಾ ಜಿಲ್ಲೆಯ ಸ್ಥಳೀಯ ಸಂಸ್ಥೆ ಚುನಾವಣೆಯ ನಂತರ ನಡೆದ ಈ ಮೈತ್ರಿ ಪ್ರಹಸನ ರಾಜಕೀಯ ವಲಯದಲ್ಲೇ ಅಚ್ಚರಿ ಮೂಡಿಸಿದೆ.

ಬಿಜೆಪಿ ಜೊತೆ ಕೈಜೋಡಿಸುವ ಕಾಂಗ್ರೆಸ್ ನಿರ್ಧಾರ ಇಲ್ಲಿನ ಸ್ಥಳೀಯ ಮುಖಂಡರ ನಿರ್ಧಾರವೇ ಹೊರತು ಹೈಕಮಾಂಡ್ ನಿರ್ಧಾರವಲ್ಲ. ಹೈಕಮಾಂಡ್ ಇದಕ್ಕೆ ಸುತಾರಾಂ ಒಪ್ಪದಿದ್ದರೂ, ಹೈಕಮಾಂಡಿಗೆ ಕ್ಯಾರೇ ಎನ್ನದ ಸ್ಥಳೀಯ ಮುಖಂಡರು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ.

BJP-Congress joining hands in Mizoram local body!

ಆದರೆ ಬಿಜೆಪಿ ಮುಖಂಡರ್ಯಾರೂ ಇದನ್ನು ವಿರೋಧಿಸದಿರುವುದು ಅಚ್ಚರಿ ಮೂಡಿಸಿದೆ. ಇದೂ ಬಿಜೆಪಿಯ ನಾರ್ತ್ ಈಸ್ಟ್ ಮಿಶನ್ ನ ಭಾಗವಾಗಿದ್ದಿರಬಹುದು! ಕಾಂಗ್ರೆಸ್ ಆಡಳಿತದಲ್ಲಿರುವ ಈಶಾನ್ಯದ ಕೊಟ್ಟ ಕೊನೆಯ ರಾಜ್ಯವಾಗಿರುವ ಮಿಜೋರಾಂನಲ್ಲೂ ಬಿಜೆಪಿ ಅಲೆ ಎಬ್ಬಿಸುವ ಪ್ರಯತ್ನಕ್ಕೆ ಈ ಮೈತ್ರಿ ಮುನ್ನುಡಿಯಾದರೆ ಅಚ್ಚರಿಯಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+