ಮೋದಿ ಅಲೆ, ಬ್ರ್ಯಾಂಡ್ ಬಿಜೆಪಿ ಬೆಲೆ ಬಹಿರಂಗ

ಬೆಂಗಳೂರು, ಏ.14: ದೇಶದೆಲ್ಲೆಡೆ ಹಬ್ಬಿರುವ ಮೋದಿ ಅಲೆಯನ್ನು ಕಾಯ್ದುಕೊಳ್ಳಲು ಬಿಜೆಪಿ ವ್ಯಯಿಸಿರುವ ಖರ್ಚು ವೆಚ್ಚಗಳ ಲೆಕ್ಕಾಚಾರದ ಬಗ್ಗೆ ರಾಷ್ಟ್ರೀಯ ಸುದ್ದಿ ವಾಹಿನಿ ಹಿಂದೂಸ್ತಾನ್ ಟೈಮ್ಸ್ ವರದಿ ಪ್ರಕಟಿಸಿದೆ. ಭಾರತೀಯ ಜನತಾ ಪಕ್ಷ 2014 ಲೋಕಸಭಾ ಚುನಾವಣಾ ಪ್ರಚಾರಕ್ಕಾಗಿ ವ್ಯಯಿಸುತ್ತಿರುವ ಹಣದ ಮೊತ್ತ ಬಹಿರಂಗಗೊಂಡಿದೆ.

ದಿನ ಪತ್ರಿಕೆ, ಟಿವಿ ಚಾನೆಲ್, ಎಫ್ ಎಂ ರೆಡಿಯೋ, ಯೂಟ್ಯೂಬ್, ಫೇಸ್ ಬುಕ್, ಟ್ವಿಟ್ಟರ್, ವ್ಯಾಟ್ಸಾಪ್ ಸಾಧ್ಯವಿರುವ ಎಲ್ಲಾ ಮಾಧ್ಯಮಗಳ ಮೂಲಕ 'ಅಬ್ ಕಿ ಬಾರ್ ಮೋದಿ ಸರ್ಕಾರ್' ಮಂತ್ರವನ್ನು ಎಲ್ಲೆಡೆ ಬಿತ್ತಲಾಗಿದೆ. ಇದರ ಫಲ ಮೇ.16 ರಂದು ತಿಳಿಯಲಿದೆ.

ಮೋದಿಯನ್ನು ಈ ರೀತಿ ಬಿಂಬಿಸಲು ಬಿಜೆಪಿ ಬರೋಬ್ಬರಿ ಐದು ಸಾವಿರ ಕೋಟಿ ರೂ.ಗೂ ಹೆಚ್ಚಿನ ಹಣ ಹೂಡಿಕೆ ಮಾಡಿದೆಯಂತೆ. ದೃಶ್ಯ ಮತ್ತು ಮುದ್ರಣ ಮಾಧ್ಯಮಗಳಷ್ಟೇ ಅಲ್ಲದೇ ಮೊಬೈಲ್, ಸಾಮಾಜಿಕ ತಾಣ ಸೇರಿದಂತೆ ಯಾವುದೇ ಸಂಪರ್ಕ ಮಾಧ್ಯಮವನ್ನೂ ಬಿಜೆಪಿ ಬಿಟ್ಟಿಲ್ಲ. ಎಲ್ಲಿ ನೋಡಿದರೇ ಅಲ್ಲಿ ಮೋದಿ ಅವರ ಹಲವು ಭಂಗಿಗಳ, ಹಲವು ಉಡುಪುಗಳಲ್ಲಿ ತೆಗೆದ ಭಾವಚಿತ್ರಗಳ ಮೆರವಣಿಗೆ, ಪಕ್ಷದ ಚಿನ್ನೆ ಕಮಲದ ಪ್ರದರ್ಶನ, ಹೀಗೆ ಇಡೀ ದೇಶವನ್ನೇ ಸರ್ವವೂ ಮೋದಿ ಮಯಂ, ಸರ್ವವೂ ಕಮಲ ಮಯಂ ಮಾಡಲಾಗಿದೆ.

ಮತದಾನದ ಕೊನೆಯ ಹಂತ ಅಂದರೆ ಮೇ 12ವರೆಗೆ ಈ ಪ್ರಚಾರದ ಭರಾಟೆ ಮುಂದುವರೆಯಲಿದೆ. ಈ ಕುರಿತಂತೆ ಪ್ರಶ್ನಿಸಿದರೇ ಇದು ನಮ್ಮ ಪೂರ್ವ ನಿಗದಿತ ಯೋಜನೆ ಎನ್ನುತ್ತವೆ ಬಿಜೆಪಿ ಮೂಲಗಳು. ಬಿಜೆಪಿಯ ಈ ಮಾಧ್ಯಮ ಪ್ರಚಾರದ ಹೊಣೆಯನ್ನು ಹೊತ್ತಿರುವ ಮ್ಯಾಡಿಸನ್ ವರ್ಲ್ಡ್ ಎಂಬ ವಿದೇಶಿ ಸಂಸ್ಥೆಯ ನಿರ್ದೇಶಕ ಮತ್ತು ಅಧ್ಯಕ್ಷ ಶ್ಯಾಮ್ ಬಲ್ಸಾರ ಅವರನ್ನು ಈ ಬಗ್ಗೆ ಪ್ರಶ್ನಿಸಿದರೆ, ನಮಗೆ ಹೆಚ್ಚಿನದೇನು ಗೊತ್ತಿಲ್ಲ. ಬಿಜೆಪಿ ಸೂಚನೆಯಂತೆ ಮಾಡುತ್ತಿದ್ದೇವೆ ಎನ್ನುತ್ತಾರೆ.

ಮ್ಯಾಡಿಸನ್ ವರ್ಲ್ಡ್ ಸಂಸ್ಥೆಗೆ ಹೊಣೆಗಾರಿಕೆ

ಮ್ಯಾಡಿಸನ್ ವರ್ಲ್ಡ್ ಸಂಸ್ಥೆಗೆ ಹೊಣೆಗಾರಿಕೆ

ರಾಷ್ಟ್ರ, ರಾಜ್ಯ ಹಾಗೂ ಪ್ರಾದೇಶಿಕ ಮಟ್ಟದಲ್ಲಿ ಪತ್ರಿಕೆ ಟಿವಿ, ಹೊರಾಂಗಣ, ಇಂಟರ್ ‌ನೆಟ್, ರೇಡಿಯೋ ಮೂಲಕ ಪ್ರಚಾರಕ್ಕೆ ಬಿಜೆಪಿ 4,500 ಕೋಟಿ ರೂ.ಗಳನ್ನು ನೀಡಿದೆ. ಇಲ್ಲದೇ ಹೆಚ್ಚುವರಿಯಾಗಿ ಇತರ ಪ್ರಚಾರ ವಿಧಾನಗಳಿಗಾಗಿ 500 ಕೋಟಿ ರೂ.ಗಳನ್ನು ನೀಡಿದೆ ಎನ್ನುವುದು ಹಿರಿಯ ಮಾಧ್ಯಮ ಸಲಹೆಗಾರರೊಬ್ಬರು ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ಈ ಎಲ್ಲಾ ಹೊಣೆಗಾರಿಕೆಯನ್ನು ಮ್ಯಾಡಿಸನ್ ವರ್ಲ್ಡ್ ಸಂಸ್ಥೆಗೆ ವಹಿಸಿಕೊಟ್ಟಿದ್ದೇವೆ ಎಂದು ಹೇಳಿದ್ದಾರೆ.

ಹೋರ್ಡಿಂಗ್ಸ್ ಮೇಲೆ ಹೆಚ್ಚಿನ ಒತ್ತು ನೀಡಲಾಗಿದೆ

ಹೋರ್ಡಿಂಗ್ಸ್ ಮೇಲೆ ಹೆಚ್ಚಿನ ಒತ್ತು ನೀಡಲಾಗಿದೆ

ದೇಶಾದ್ಯಂತ ಬಿಜೆಪಿ 15 ಸಾವಿರ ಹೋರ್ಡಿಂಗ್ಸ್ ಬಳಸಿದ್ದು, ತಲಾ ಒಂದು ಹೋರ್ಡಿಂಗ್ ‌ಗೆ ತಿಂಗಳಿಗೆ ಎರಡರಿಂದ ಮೂರು ಲಕ್ಷ ವೆಚ್ಚವಾಗುತ್ತದೆ. ಈ ದರ ಸ್ಥಳದಿಂದ ಸ್ಥಳಕ್ಕೆ ಬದಲಾವಣೆಯಿದೆ. ಮುಂಬೈನ ನಾರಿಮನ್ ಪಾಯಿಂಟ್ ನಲ್ಲಿ ನಿಲ್ಲಿಸುವ ಒಂದು ಹೋರ್ಡಿಂಗ್ಸ್ ಗೆ 20 ಲಕ್ಷ ವೆಚ್ಚವಾಗುತ್ತದೆ.

ಜಾಹಿರಾತುಗಳಿಗೆ ಹೆಚ್ಚುವರಿ ಹಣ

ಜಾಹಿರಾತುಗಳಿಗೆ ಹೆಚ್ಚುವರಿ ಹಣ

ಇಷ್ಟೇ ಅಲ್ಲದೇ ನಿಯತಕಾಲಿಕೆಗಳಲ್ಲಿ ಪ್ರಸಾರವಾಗುವ ಜಾಹಿರಾತುಗಳಿಗೆ ಹೆಚ್ಚುವರಿಯಾಗಿ 150 ಕೋಟಿ ನೀಡಲಾಗಿದೆ. ಹಿಂದಿ, ಇಂಗ್ಲಿಷ್ ಹಾಗೂ ಪ್ರಾದೇಶಿಕ ಭಾಷೆಗಳ ಟಿವಿಗಳಲ್ಲಿ ಪ್ರಚಾರವಾಗುವ ಜಾಹಿರಾತುಗಳಿಗೆ ಪ್ರತಿ ಮೂವತ್ತು ಸೆಕೆಂಡಿಗೆ 80 ಸಾವಿರ ರೂ. ವೆಚ್ಚವಾಗಲಿದ್ದು, ಇದಕ್ಕಾಗಿ ಒಂದು ಸಾವಿರ ಕೋಟಿ ರೂ. ನೀಡಲಾಗಿದೆ. ಚುನಾವಣೆ ವರೆಗೂ ಪ್ರತಿದಿನ ಎಲ್ಲಾ ಟಿವಿಗಳಿಂದ 2 ಸಾವಿರ ಸ್ಪಾಟ್ಸ್ ‌ಗಳನ್ನು ಕಾಯ್ದಿರಿಸಲಾಗಿದೆ.

ಟಿ-20 ವರ್ಲ್ಡ್ ಕಪ್ ‌ವೇಳೆ ಟಿವಿಗಳಲ್ಲಿ

ಟಿ-20 ವರ್ಲ್ಡ್ ಕಪ್ ‌ವೇಳೆ ಟಿವಿಗಳಲ್ಲಿ

ಟಿ-20 ವರ್ಲ್ಡ್ ಕಪ್ ‌ವೇಳೆ ಟಿವಿಗಳಲ್ಲಿ ಪ್ರಸಾರವಾಗುವ ಜಾಹಿರಾತಿಗೆ 150 ಕೋಟಿ ರೂ. ತೆಗೆದಿರಿಸಲಾಗಿತ್ತು. ಈ ಕುರಿತಂತೆ ಬಿಜೆಪಿ ಹಿರಿಯ ನಾಯಕರೊಬ್ಬರನ್ನು ಕೇಳಿದರೆ ಇದಕ್ಕೆಲ್ಲಾ 700 ರಿಂದ 750 ಕೋಟಿ ವೆಚ್ಚವಾಗಿರಬಹುದು ಎಂಬ ಉತ್ತರ ನೀಡಿದ್ದಾರೆ. ಐಪಿಎಲ್ ಏ.16ರಿಂದ ಯುಎಇನಲ್ಲಿ ಆರಂಭವಾಗಲಿದ್ದು, ಆಡ್ಸ್ ವಾರ್ ಮುಂದುವರೆಯಲಿದೆ.

ಬಿಜೆಪಿ ಈ ವೆಚ್ಚ ಕಾಂಗ್ರೆಸ್ ಪಕ್ಷದ ವೆಚ್ಚಕ್ಕಿಂತ ಅಧಿಕ?

ಬಿಜೆಪಿ ಈ ವೆಚ್ಚ ಕಾಂಗ್ರೆಸ್ ಪಕ್ಷದ ವೆಚ್ಚಕ್ಕಿಂತ ಅಧಿಕ?

ದೇಶದೆಲ್ಲೆಡೆ ಛಾಯ್ ಪೆ ಚರ್ಚಾ ಸಮಯದಲ್ಲಿ ಮೋದಿ ಚಹಾ ಅಂಗಡಿ ಸ್ಥಾಪನೆ, 3ಡಿ ಸಮಾವೇಶ ಆಯೋಜನೆ, ಪ್ರತಿ ಸಮಾವೇಶ(ಭಾರತ ಗೆಲ್ಲಿಸಿ, ಭಾರತ್ ವಿಜಯ್ ಯಾತ್ರೆ)ದ ಆಯೋಜನೆಗೆ ಪ್ರತ್ಯೇಕ ಹಣ ವಿನಿಯೋಗಿಸಲಾಗಿದೆ. ಬಿಜೆಪಿ ಈ ವೆಚ್ಚ ಕಾಂಗ್ರೆಸ್ ಪಕ್ಷದ ವೆಚ್ಚಕ್ಕಿಂತ ನಾಲ್ಕು ಪಟ್ಟು ಹೆಚ್ಚಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಆದರೆ, ಕಾಂಗ್ರೆಸ್ ಬ್ರ್ಯಾಂಡ್ ಅಭಿವೃದ್ಧಿ, ಚುನಾವಣಾ ಪ್ರಚಾರದ ವೆಚ್ಚ 10,000ಕೋಟಿ ದಾಟಲಿದೆ ಎಂದು ಸ್ವತಃ ಮೋದಿ ಅವರೇ ಆಪ್ ಕಿ ಅದಾಲತ್ ಟೆಲಿವಿಷನ್ ಕಟಕಟೆಯಲ್ಲಿ ಹೇಳಿದ್ದಾರೆ. [ಆಸಕ್ತರು ವಿಡಿಯೋ ನೋಡಿ]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+