Bittu Tabahi: ಬಿಜೆಪಿಗೆ ಟಾಂಗ್ ಕೊಡಲು 20ರ ಯುವಕ ಬಿಟ್ಟು ತಬಾಹಿ ಹೆಸರು ಬಳಕೆ; ಧ್ರುವ್ ರಾಠಿಗೆ ನಯವಾಗಿ ತಿರುಗೇಟು!
ಮಧ್ಯಪ್ರದೇಶದ 20 ವರ್ಷದ ವಿದ್ಯಾರ್ಥಿ, ಯುವಕ ಸುರೇಂದ್ರ ಸಿಂಗ್ ಚೌಧರಿ ದೇಶದಾದ್ಯಂತ ಸುದ್ದಿಯಲ್ಲಿದ್ದಾರೆ. ಸುರೇಂದ್ರ ಸಿಂಗ್ ಅವರು ಮಾಡಿರುವ ಸಾಧನೆ ಇದೀಗ ಕೇವಲ ಭಾರತ ಮಾತ್ರವಲ್ಲ, ಡಚ್ ವರೆಗೂ ಸಹ ತಲುಪಿದೆ. ಈ ನಡುವೆ ಖ್ಯಾತ ಯೂಟ್ಯೂಬರ್ ಧ್ರುವ ರಾಠಿ ಹಾಗೂ ಮಧ್ಯಪ್ರದೇಶದಲ್ಲಿ ಸ್ವಚ್ಛತೆಗೆ ಸಂಬಂಧಿಸಿದಂತೆ ದೊಡ್ಡ ಮಟ್ಟದಲ್ಲಿ ಕೆಲಸ ಮಾಡಿರುವ ಸುರೇಂದ್ರ ಸಿಂಗ್ ಚೌಧರಿ ಹಾಗೂ ಧ್ರುವ ರಾಠಿ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಚಕಮಕಿ ನಡೆದಿದೆ. ಸುರೇಂದ್ರ ಸಿಂಗ್‌ಗೆ ಸಪೋರ್ಟ್ ಮಾಡುವಂತೆ ಬಂದು ಬಿಜೆಪಿಗೆ ಟಾಂಗ್ ನೀಡಲು ಮುಂದಾದ ಧ್ರುವ್ ರಾಠಿಗೆ ಮುಖಭಂಗವಾದಂತೆ ಆಗಿದೆ. ಇಷ್ಟಕ್ಕೂ ಸುರೇಂದ್ರ ಸಿಂಗ್ ಯಾರು, ಈ ಯುವಕ ಮಾಡಿದ ಕೆಲಸವೇನು ಹಾಗೂ ಧ್ರುವ ರಾಠಿ ಕಾಮೆಂಟ್ ಮಾಡಿದ್ದೇನು ಎನ್ನುವ ಸಂಪೂರ್ಣ ವಿವರ ಈ ಲೇಖನದಲ್ಲಿದೆ.
ಮಧ್ಯಪ್ರದೇಶದ ಯುವಕ ಜೆನ್ ಜೀ ಸುರೇಂದ್ರ ಸಿಂಗ್ ಚೌಧರಿ ಈಗ ದೇಶದಾದ್ಯಂತ ಸುದ್ದಿಯಲ್ಲಿದ್ದಾರೆ. ಮಧ್ಯಪ್ರದೇಶದ ಬಿಯೋರಾದ ಅತ್ಯಂತ ಕಲುಷಿತಗೊಂಡಿರುವ ಅಜ್ನರ್ ನದಿಯನ್ನು ಏಕಾಂಗಿಯಾಗಿ ಸ್ವಚ್ಛತೆ ಮಾಡಿ, ಈ ಭಾಗದ ಪರಿಸರ ಸಂರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುವ ಮೂಲಕ ಸುರೇಂದ್ರ ಸಿಂಗ್ ಚೌಧರಿ ಇದೀಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಲ್ಲಿದ್ದಾರೆ. ಡಚ್ ಮೂಲಕ ಕಂಪನಿಗಳು ತಮ್ಮ ದೇಶಕ್ಕೆ ಬರುವಂತೆ ಸುರೇಂದ್ರ ಸಿಂಗ್ ಚೌಧರಿ ಅವರನ್ನು ಆಹ್ವಾನಿಸುತ್ತಿವೆ.!

ಸುರೇಂದ್ರ ಸಿಂಗ್ ಚೌಧರಿ ಅವರು ಸೋಶಿಯಲ್ ಮೀಡಿಯಾದಲ್ಲಿ "ಬಿಟ್ಟು ತಬಾಹಿ' ಅಂತಲೇ ಫೇಮಸ್ ಆಗಿದ್ದಾರೆ. ಜನವರಿ 26 ರಂದು ಗಣರಾಜ್ಯೋತ್ಸವದ ಸಮಯದಲ್ಲಿ, ಕೇವಲ ಒಂದೇ ಒಂದು ಸಲಾಕೆ, ಸಂಪೂರ್ಣ ಇಚ್ಛಾಶಕ್ತಿ ಹಾಗೂ ಯಾವುದೇ ಯಂತ್ರೋಪಕರಣಗಳ ಸಹಾಯವಿಲ್ಲದೆ ಅವರು, ನದಿಯ ಸ್ವಚ್ಛತೆಗೆ ಮುಂದಾದರು. ನದಿಯ ಸ್ವಚ್ಛತೆಗೂ ಮೊದಲು ಹಾಗೂ ಸ್ವಚ್ಛತೆ ನಂತರದ ನದಿಯ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಈ ಫೋಟೋಗಳು ಭಾರೀ ವೈರಲ್ ಆಗಿದ್ದು, ಸುರೇಂದ್ರ ಅವರ ಪ್ರಯತ್ನಗಳು ಮಧ್ಯಪ್ರದೇಶ ಸರ್ಕಾರವನ್ನು ತಲುಪಿತ್ತು.
ಬಿಟ್ಟು ತಬಾಹಿ ಅವರು ಶನಿವಾರ ಭೋಪಾಲ್‌ನಲ್ಲಿರುವ ಮುಖ್ಯಮಂತ್ರಿ ಮೋಹನ್ ಯಾದವ್ ಅವರನ್ನು ಅವರ ಮನೆಯಲ್ಲಿ ಭೇಟಿಯಾಗಿದ್ದರು. ಅಲ್ಲದೆ ಅವರ ಸಂವಾದದ ವೀಡಿಯೊವನ್ನು ನಂತರ ಮಧ್ಯಪ್ರದೇಶ ಸಿಎಂ ಅವರ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿತ್ತು.
Bittu Tabahi: ಫೋಟೋ ಶೂಟ್ - ಕ್ರೆಡಿಟ್‌ಗೆ ಧ್ರುವ್ ರಾಠಿ ಟೀಕೆ
ಪ್ರಮುಖ ಯೂಟ್ಯೂಬರ್ ಧ್ರುವ್ ರಾಠಿ ಅವರು ಈ ಸಭೆಯ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದರು. 20 ವರ್ಷದ ಯುವಕನ ನದಿ ಶುದ್ಧೀಕರಣ ಪ್ರಯತ್ನಗಳಿಗೆ ಸರ್ಕಾರ ಕ್ರೆಡಿಟ್ ಕೇಳುತ್ತಿದೆ ಎಂದು ಆರೋಪಿಸಿದ್ದರು. ವೀಡಿಯೋಗೆ ಪ್ರತಿಕ್ರಿಯಿಸಿದ್ದ ಧ್ರುವ್ ರಾಠಿ ಅವರು, ("ಆ ಗಯೇ ಕ್ರೆಡಿಟ್ ಲೇನೆ.. ಸಾರಾ ಕಾಮ್ ಏಕ್ ಲಡ್ಕೆ ನೆ ಕಿಯಾ ಔರ್ ಜಬ್ ವೈರಲ್ ಹುವಾ ತೋ ಉಸ್ ಬುಲಾ ಲಿಯಾ ಫೋಟೋಶೂಟ್ ಕೆ ಲಿಯೇ ಔರ್ ಬೇಶರ್ಮಿ ತೋ ದೇಖೋ, ಉಸ್ಸೆ ಕ್ಯಾ ಬುಲ್ವಾ ರಹೇ ಹೋ? 'ಸರ್ಕಾರ್ ತೋ ಕರ್, ಹೈ ಕರ್ಹೈ ಸಿರ್ಫ್ ಪಿಆರ್ ಕರ್ ರಾಹಿ.") ಒಬ್ಬ ಹುಡುಗ ಎಲ್ಲ ನದಿ ಸ್ವಚ್ಛತೆ ಕೆಲಸ ಮಾಡಿದ್ದಾನೆ, ಸರ್ಕಾರ ಈಗ ಪಿಆರ್ ಕೆಲಸ ಮಾಡುತ್ತಿದೆ ಇದರಲ್ಲೂ ಕ್ರೆಡಿಟ್ ತೆಗೆದುಕೊಳ್ಳುವುದಕ್ಕೆ ಬಂದಿದ್ದಾರೆ ಎಂದು ವ್ಯಂಗ್ಯವಾಗಿ ಕಾಮೆಂಟ್ ಮಾಡಿದ್ದಾರೆ.
Bittu Tabahi: ಧ್ರುವ್ ರಾಠಿ ಕಾಮೆಂಟ್‌ಗೆ ಬಿಟ್ಟು ತಬಾಹಿ ತಿರುಗೇಟು!
ಧ್ರುವ್ ರಾಠಿ ಅವರ ಕಾಮೆಂಟ್‌ಗೆ ಬಿಟ್ಟು ತಬಾಹಿ ಪ್ರತಿಕ್ರಿಯಿಸಿದ್ದಾರೆ. ಕಾಮೆಂಟ್‌ಗಳಲ್ಲಿ ನೇರವಾಗಿ ರಥಿಯನ್ನು ಉದ್ದೇಶಿಸಿ ಬಿಟ್ಟು ಅವರು, ಸಂವಾದವು ರಾಜಕೀಯಕ್ಕಿಂತಲೂ ನಾಗರಿಕರ ಕರ್ತವ್ಯವನ್ನು ಪ್ರೇರೇಪಿಸುತ್ತದೆ ಎಂದು ಸಮರ್ಥಿಸಿಕೊಂಡಿದ್ದಾರೆ.
"ಧ್ರುವ್ ಅಣ್ಣ, ಇದು ಕ್ರೆಡಿಟ್ ತೆಗೆದುಕೊಳ್ಳುವ ವಿಷಯ ಅಲ್ಲ. ಸರ್ಕಾರವು ನನ್ನ ಕೆಲಸವನ್ನು ಮೊದಲೇ ಮೆಚ್ಚಿದೆ. ಇಲ್ಲಿನ ಸಮಸ್ಯೆ ನಾಗರಿಕ ಪ್ರಜ್ಞೆಯಾಗಿದೆ. ಜನರು ತಮ್ಮ ಜವಾಬ್ದಾರಿಯನ್ನು ಅರ್ಥಮಾಡಿಕೊಳ್ಳಬೇಕು ಮತ್ತು ನಾನು ಮಾಡಿದಂತೆಯೇ ಸ್ವಚ್ಛತೆಗಾಗಿ ಮುಂದೆ ಬರಬೇಕೆಂದು ನಾನು ಬಯಸುತ್ತೇನೆ' ಎಂದಿದ್ದಾರೆ.


Click it and Unblock the Notifications
