Birth Death Certificate: ಜನನ – ಮರಣ ಪ್ರಮಾಣಪತ್ರದಲ್ಲಿ ಮಹತ್ವದ ಬದಲಾವಣೆ: ಈ ನೋಂದಣಿಗೆ ಇನ್ಮುಂದೆ ಕಠಿಣ ನಿಯಮ

Birth Death Certificate: ಭಾರತದಲ್ಲಿ ಜನನ ಮತ್ತು ಮರಣ ಪ್ರಮಾಣ ಪತ್ರಕ್ಕೆ ಸಂಬಂಧಿಸಿದಂತೆ ಮಹತ್ವದ ಬದಲಾವಣೆ ಆಗಿದೆ. ಕೇಂದ್ರ ಸರ್ಕಾರವು ಜನನ ಮತ್ತು ಮರಣ ಪ್ರಮಾಣ ಪತ್ರಕ್ಕೆ ಸಂಬಂಧಿಸಿದಂತೆ ಮಹತ್ವದ ಬದಲಾವಣೆಯನ್ನು ಮಾಡಿದೆ. ಕೇಂದ್ರ ಬಿಜೆಪಿ ಸರ್ಕಾರವು ಜನನ ಮತ್ತು ಮರಣ ನೋಂದಣಿ -1969ರ ಕಾಯಿದೆಗೆ ಸಂಬಂಧಿಸಿದಂತೆ 2023ನೇ ಸಾಲಿನಲ್ಲಿ ತಿದ್ದುಪಡಿ ತಂದಿತ್ತು. ಇದೀಗ ಕೌಟುಂಬಿಕ ಮತ್ತು ರಾಷ್ಟ್ರೀಯ ಹಿತಾಸಕ್ತಿಗೆ ಅನುಗುಣವಾಗಿ ಜನನ ಮತ್ತು ಮರಣ ನೋಂದಣಿ ಕಾಯ್ದೆಗೆ ಮತ್ತೊಮ್ಮೆ ತಿದ್ದುಪಡಿ ತರುವುದಕ್ಕೆ ಮುಂದಾಗಿದೆ. ಜುನ್27 ರಂದು ಈ ತಿದ್ದುಪಡಿ ಮಸೂದೆಯು ಮಂತ್ರಿಮಂಡಲದಲ್ಲಿ ಸ್ವೀಕಾರವಾಗಿದ್ದು, ಇದೀಗ ಲೋಕಸಭೆಯಲ್ಲಿ ಮಂಡನೆ ಮಾಡಲಾಗಿದೆ. ಇನ್ನು ಜನನ ಮತ್ತು ಮರಣ ನೋಂದಣಿ ಕಾಯ್ದೆಯಲ್ಲಿ ಆಗಿರುವ ಬದಲಾವಣೆಗಳೇನು ಎನ್ನುವ ಸಂಪೂರ್ಣ ವಿವರ ಈ ಲೇಖನದಲ್ಲಿ ಇದೆ.

ಜನನ ಮತ್ತು ಮರಣ ನೋಂದಾಣಿ ಕಾಯ್ದೆಯು ಭಾರತೀಯ ಶಾಸನಗಳಾಲ್ಲಿ ಪ್ರಮುಖವಾಗಿದೆ. ಈ ಕಾಯ್ದೆಯನ್ನು 1969ರಲ್ಲಿ ಜಾರಿಗೆ ತರಲಾಗಿದೆ. ಭಾರತದಲ್ಲಿ ಜನಿಸುವ ಹಾಗೂ ಮರಣ ಹೊಂದುವವರ ದಾಖಲೆಗಳನ್ನು ಸುರಕ್ಷಿತವಾಗಿ ಇರಿಸುವ ಉದ್ದೇಶದಿಂದ ಈ ಕಾಯ್ದೆಯನ್ನು ರೂಪಿಸಲಾಗಿದೆ. ಈ ಪ್ರಕ್ರಿಯೆಯು ಸಮರ್ಪಕವಾಗಿ ನಡೆಯುತ್ತಿದ್ದರೆ ಮಾತ್ರ ಜನಸಂಖ್ಯೆಗೆ ಸಂಬಂಧಿಸಿದಂತೆ ನಿಖರವಾದ ಮಾಹಿತಿ ಸಿಗಲು ಸಾಧ್ಯವಿದೆ. ಹೀಗಾಗಿ ಕೆಲವೊಂದು ಹೊಸ ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ.

Birth Death Certificate

ಇದೀಗ ಕೇಂದ್ರ ಸರ್ಕಾರವು ಜನನ ಮತ್ತು ಮರಣಗಳ ವಿಳಂಬ ನೋಂದಣಿ ಪ್ರಕ್ರಿಯೆಯನ್ನು ಇನ್ನಷ್ಟು ಬಿಗಿಗೊಳಿಸಲು ಮುಂದಾಗಿದೆ. 2 ವರ್ಷಗಳಿಗಿಂತ ಹಳೆಯ ಜನನ ಮತ್ತು ಮರಣ ಪ್ರಕರಣಗಳಿಗೆ ಕಟ್ಟುನಿಟ್ಟಿನ ಅನುಮೋದನೆ ನಿಯಮಗಳನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಕರಡು ತಿದ್ದುಪಡಿ ಮಸೂದೆ ಮಂಡಿಸಿದೆ. ಜನನ ಮತ್ತು ಮರಣಗಳ ನೋಂದಣಿ (ತಿದ್ದುಪಡಿ) ಮಸೂದೆ 2026ರ ಮೂಲಕ ಪ್ರಸ್ತಾಪಿಸಲಾದ ಈ ಕ್ರಮವು, ಭಾರತದ ನಾಗರಿಕ ನೋಂದಣಿ ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನು ಸುಧಾರಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಇದರಲ್ಲಿ ಮೋಸ ಅಥವಾ ನೋಂದಣಿಯನ್ನು ತಪ್ಪಿಸುವ ಉದ್ದೇಶದಿಂದ ಈ ಮಸೂದೆ ಮಂಡನೆ ಮಾಡಲಾಗಿದೆ.

ಜನನ ಮತ್ತು ಮರಣಗಳ ನೋಂದಣಿ ಕಾಯ್ದೆ 1969 ರ ಪ್ರಸ್ತುತ ನಿಬಂಧನೆಗಳ ಅಡಿಯಲ್ಲಿ, ಒಂದು ವರ್ಷಕ್ಕಿಂತ ಹೆಚ್ಚು ವಿಳಂಬವಾದ ನೋಂದಣಿಗಳನ್ನು ದಾಖಲಿಸುವ ಮೊದಲು ಜಿಲ್ಲಾ ಮ್ಯಾಜಿಸ್ಟ್ರೇಟ್ (DM), ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ (SDM) ಅಥವಾ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್‌ನಿಂದ ಅನುಮತಿ ಪಡೆದುಕೊಳ್ಳುವುದು ಅತ್ಯಗತ್ಯವಾಗಿದೆ.

ಆದಾಗ್ಯೂ, ಎರಡು ವರ್ಷಗಳಿಗಿಂತ ಹೆಚ್ಚು ವಿಳಂಬವಾದ ನೋಂದಣಿಗಳು ಗಮನಾರ್ಹವಾಗಿ ಕಠಿಣ ಪರಿಶೀಲನೆಗೆ ಒಳಪಡಿಸಲಾಗುತ್ತದೆ. ಅಂತಹ ಸಂದರ್ಭಗಳಲ್ಲಿ, ಪ್ರಥಮ ದರ್ಜೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್‌ನ ಆದೇಶದ ಮೇರೆಗೆ ಮಾತ್ರ ಅನುಮೋದನೆಯನ್ನು ನೀಡಲಾಗುತ್ತದೆ. ಬಹಳ ತಡವಾಗಿ ನೋಂದಣಿ ಮಾಡುವ ಅಧಿಕಾರವನ್ನು ಕಾರ್ಯನಿರ್ವಾಹಕರಿಂದ ನ್ಯಾಯಾಂಗಕ್ಕೆ ವರ್ಗಾಯಿಸಲಾಗುತ್ತದೆ ಎಂದು ಹೇಳಲಾಗಿದೆ.

ಇನ್ನು ಜನನ ಪ್ರಮಾಣಪತ್ರವು ಒಬ್ಬ ವ್ಯಕ್ತಿಯ ಗುರುತಿನ ಮೊದಲ ಅಧಿಕೃತ ಪುರಾವೆಯಾಗಿದೆ. ಶಾಲಾ ಪ್ರವೇಶ, ಆಧಾರ್ ದಾಖಲಾತಿ, ಪಾಸ್‌ಪೋರ್ಟ್‌ಗಳು, ಮತದಾರರ ನೋಂದಣಿ, ಉತ್ತರಾಧಿಕಾರ ಹಕ್ಕುಗಳು, ಸರ್ಕಾರಿ ಕಲ್ಯಾಣ ಯೋಜನೆಗಳಿಗೆ ಪ್ರವೇಶ ಮತ್ತು ಹಲವಾರು ಇತರ ಕಾನೂನು ಮತ್ತು ಆಡಳಿತಾತ್ಮಕ ಉದ್ದೇಶಗಳಿಗಾಗಿ ಇದು ಅಗತ್ಯ ದಾಖಲೆಯನ್ನಾಗಿ ಪರಿಗಣಿಸಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+