ಬಿಹಾರದಲ್ಲಿ ಭೀಕರ ರೈಲು ಅಪಘಾತ: ಹಳಿದಾಟುತ್ತಿದ್ದ ಐವರ ದುರ್ಮರಣ
ಕೈಮೂರ್(ಬಿಹಾರ), ಅಕ್ಟೋಬರ್ 13: ಹೊವ್ರೌನ್-ಲಾಲಕೌನ್ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲು ಬಿಹಾರದ ಭಾಭುವಾ ನಿಲ್ದಾಣವನ್ನು ದಾಟುತ್ತಿದ್ದ ಸಮಯದಲ್ಲಿ ರೈಲ್ವೇ ಹಳಿ ದಾಟಲು ಪ್ರಯತ್ನಿಸುತ್ತಿದ್ದ ಐವರು ರೈಲಿನಡಿ ಸಿಕ್ಕಿ ಮೃತರಾದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಸಾಮಾನ್ಯವಾಗಿ ಎಲ್ಲಾ ರೈಲುಗಳಲೂ ಭಾಭುವಾ ಸ್ಟೇಶನ್ನಿಲ್ಲಿ ನಿಲ್ಲುತ್ತದ್ದವು. ಹೊವ್ರೌನ್-ಲಾಲಕೌನ್ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲು ಸಹ ಅದೇ ನಿಲ್ದಾಣದಲ್ಲಿ ನಿಂತು ನಂತರ ಮುಂದೆ ಸಾಗುತ್ತದೆ ಎಂದುಕೊಂಡಿದ್ದ ಐವರು ಲಗುಬಗೆಯಲ್ಲಿ ಹಳಿ ದಾಟಲು ಪ್ರಯತ್ನಿಸಿದ್ದರು. ಆದರೆ ಅದು ಸೂಪ್ ಫಾಸ್ಟ್ ರೈಲಾಗಿದ್ದರಿಂದ ನಿಲ್ದಾಣದಲ್ಲಿ ನಿಲ್ಲದೆ ವೇಗವಾಗಿ ಧಾವಿಸಿದ್ದರಿಂದ ಐವರೂ ಮೃತರಾಗಿದ್ದಾರೆ.
ಮೃತರಲ್ಲಿ ಮೂವರು ಮಹಿಳೆಯರು ಮತ್ತು ಓರ್ವ ಮಗು ಸೇರಿದೆ.

ಇತ್ತೀಚೆಗಷ್ಟೇ ಉತ್ತರ ಪ್ರದೇಶದ ರಾಯ್ಬರೇಲಿಯಲ್ಲಿ ನ್ಯೂ ಫರಕ್ಕಾ ಎಕ್ಸ್ ಪ್ರೆಸ್ ರೈಲು ಹಳಿತಪ್ಪಿದ ಪರಿಣಾಮ 7 ಜನ ಮೃತರಾಗಿದ್ದರು. ಟ್ರೇನಿನ ಒಂಬತ್ತು ಬೋಗಿಗಳು ಹಳಿತಪ್ಪಿದ ಪರಿಣಾಮ ಈ ಘಟನೆ ನಡೆದಿತ್ತು.












Click it and Unblock the Notifications