Bihar Election Exit Poll Results 2025: ಬಿಹಾರದಲ್ಲಿ ಮತ್ತೊಮ್ಮೆ ಎನ್‌ಡಿಎಗೆ ಗೆಲುವು; ರಾಜಕೀಯ ಲೆಕ್ಕಾಚಾರ ಇಲ್ಲಿದೆ
ಪಾಟ್ನಾ, ನವೆಂಬರ್ 11: ದೇಶದ ರಾಜಕೀಯದ ದಿಕ್ಸೂಚಿ ಎಂದೇ ಪರಿಗಣಿಸಲಾಗುವ ಬಿಹಾರದ ಮಹಾ ಚುನಾವಣೆಯ ಮತದಾರ ಪ್ರಭು ಐತಿಹಾಸಿಕ ತೀರ್ಪನ್ನು ನೀಡಿದ್ದಾರೆ. ಈ ಬಾರಿ ದಾಖಲೆಯ ಪ್ರಮಾಣದಲ್ಲಿ ಮತದಾನವಾಗಿದ್ದು, ಇದು ರಾಜಕೀಯ ಪಡಸಾಲೆಯಲ್ಲಿ ಭಾರೀ ಸಂಚಲನವನ್ನು ಸೃಷ್ಟಿಸಿದೆ. ಮತ್ತೆ ಆಡಳಿತಾರೂಢ ಎನ್‌ಡಿಎಗೆ ವರದಾನವಾಗಲಿಯೇ ಅಥವಾ ಅಥವಾ ಯುವ ನಾಯಕ ತೇಜಸ್ವಿ ಯಾದವ್ ನೇತೃತ್ವದ ಮಹಾಘಟಬಂಧನ್‌ಗೆ ಅಧಿಕಾರದ ಬಾಗಿಲು ತೆರೆಯಲಿದೆಯೇ? ಎಂಬ ಪ್ರಶ್ನೆಗೆ ಚುನಾವಣೋತ್ತರ ಸಮೀಕ್ಷೆಗಳಿಂದ ಉತ್ತರ ಸಿಕ್ಕಿದೆ.
ಹೌದು, ನವೆಂಬರ್ 6 ರಂದು ಮೊದಲ ಹಂತದ ಚುನಾವಣೆ ನಡೆದಿದ್ದು, ಇಂದು ಬಿಹಾರದಲ್ಲಿ ಎರಡನೇ ಹಂತಗಳಲ್ಲಿ ವಿಧಾನಸಭಾ ಚುನಾವಣೆ ನಡೆದಿದೆ. ಈ ಬಾರಿ ಬಿಹಾರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಹಾಗೂ ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನ್ ನಡುವೆ ನೇರ ಸ್ಪರ್ಧೆ ಏರ್ಪಟ್ಟಿತ್ತು. ಇದರಲ್ಲಿ ಯಾವ ಮೈತ್ರಿಕೂಟ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಬಹುದು ಎಂಬ ಕಲ್ಪನೆಯನ್ನು ನೀಡಲು ಚನಾವಣೋತ್ತರ ಸಮೀಕ್ಷೆಗಳು ಸಹಾಯ ಮಾಡುತ್ತವೆ. ಇನ್ನೂ ಇಂದು ಎಕ್ಸಿಟ್ ಪೋಲ್ ಯಾವ ಪಕ್ಷಕ್ಕೆ ಎಷ್ಟು ಸ್ಥಾನಗಳು ಸಿಗಬಹುದು ಎಂದು ಲೆಕ್ಕಾಚಾರದ ಮಾಹಿತಿ ಇಲ್ಲಿದೆ.

ಇನ್ನೂ ಬಿಹಾರದಲ್ಲಿ ಮೊದಲ ಹಂತದಲ್ಲಿ, 18 ಜಿಲ್ಲೆಗಳ 121 ಕ್ಷೇತ್ರಗಳಿಗೆ ಚುನಾವಣೆ ನಡೆದರೆ, ಎರಡನೇ ಹಂತದಲ್ಲಿ 20 ಜಿಲ್ಲೆಗಳ 122 ಸ್ಥಾನಗಳಿಗೆ ಮತದಾನ ನಡೆಯಿತು. ಚುನಾವಣಾ ಫಲಿತಾಂಶ ನವೆಂಬರ್ 14ರಂದು ಹೊರಬೀಳಲಿದೆ. ಇಂದು ಎಕ್ಸಿಟ್ ಪೋಲ್ ಸಮೀಕ್ಷೆಗಳು ಬಿಹಾರದಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ ಈ ಬಾರಿ ಸ್ಪಷ್ಟ ಬಹುಮತ ಸಾಧಿಸಲಿವೆ ಎಂದು ಭವಿಷ್ಯ ನುಡಿದಿವೆ. ತೀವ್ರ ಪೈಪೋಟಿಯಿಂದ ಕೂಡಿರುವ ಈ ಸಮೀಕ್ಷೆಯಲ್ಲಿ ತೇಜಸ್ವಿ ಯಾದವ್ ನೇತೃತ್ವದ ಮಹಾಘಟಬಂಧನ್ ಬಣಕ್ಕೆ ತೀವ್ರ ಹಿನ್ನಡೆಯಾಗಲಿದೆ.
Poll Diary Exit Poll ಸಮೀಕ್ಷೆಯ ಪ್ರಕಾರ ಬಿಹಾರ ರಾಜ್ಯದಲ್ಲಿ ಒಟ್ಟು 243 ಕ್ಷೇತ್ರಗಳ ಪೈಕಿ ಅರ್ಧಕ್ಕಿಂತಲೂ ಹೆಚ್ಚಿನ ಸ್ಥಾನಗಳು ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಪಾಲಾಗಲಿವೆ. ಎನ್‌ಡಿಎ ಈ ಬಾರಿಯು ಪ್ರಚಂಡ ಬಹುಮತ ಪಡೆಯಲಿದೆ ಎಂದು ಸಮೀಕ್ಷೆ ಹೇಳಿದೆ. ಎನ್‌ಡಿಎ 184 ರಿಂದ 209 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದು, ಉಳಿದ ಸ್ಥಾನಗಳ ಪೈಕಿ ಕೇವಲ 32ರಿಂದ 49 ಸ್ಥಾನಗಳು ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟದ ಪಾಲಾಗಲಿವೆ. ಇತರೆ ಪಕ್ಷಗಳು ಸುಮಾರು 05 ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಲಿವೆ ಎಂದು ಸಮೀಕ್ಷೆ ತಿಳಿಸಿದೆ.
ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು 130ರಿಂದ 138 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನ್ 100ರಿಂದ108 ಸ್ಥಾನಗಳಲ್ಲಿ ಹಾಗೂ ಪಕ್ಷೇತರರು 3ರಿಂದ 5 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು Chanakyya ಸಮೀಕ್ಷೆಯ ವರದಿ ಮಾಡಿದೆ. ಬಿಹಾರ ವಿಧಾಸಭೆ ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶ ಹೊರಬಿದ್ದಿದೆ. ಪಿ-ಪಿ-ಮಾರ್ಕ್ ನಡೆಸಿದ ಸಮೀಕ್ಷೆ ಪ್ರಕಾರ, ಬಿಜೆಪಿ ನೇತೃತ್ವದ ಎನ್‌ಡಿಎ ಗೆಲುವಿನ ನಗೆ ಬೀರಲಿದೆ. ಎನ್‌ಡಿಎ 142-162 ಸೀಟುಗಳನ್ನು ಪಡೆಯಲಿದ್ದು, ಮಹಾಘಟಬಂಧನ್ (MGB) 80-98, JSP 1-4, ಪಕ್ಷೇತರ ಮೂರು ಸ್ಥಾನಗಳನ್ನು ಪಡೆಯಲಿದೆ.
ಈ ಬಾರಿ ಯಾರಿಗೆ ಲಾಭ.. ಯಾರಿಗೆ ನಷ್ಟ?
ಹೌದು, ಈ ಭಾರೀ ಮತದಾನವು ನಿತೀಶ್ ಕುಮಾರ್ ಅವರಿಗೆ ವರದಾನವಾಗಬಹುದು ಎಂದು ಅನೇಕ ತಜ್ಞರ ಹೇಳಿದ್ದಾರೆ. ಒಂದು ವೇಳೆ ಎನ್‌ಡಿಎ ಮೈತ್ರಿಕೂಟ ಉತ್ತಮ ಪ್ರದರ್ಶನ ನೀಡಿದರೆ, ನಿತೀಶ್ ಕುಮಾರ್ 2010ರಲ್ಲಿ ಹೊಂದಿದ್ದ ಪ್ರಾಬಲ್ಯವನ್ನು ಮರಳಿ ಪಡೆಯಬಹುದು. 2010ರಲ್ಲಿ ಅವರ ಪಕ್ಷ ಜೆಡಿಯು 115 ಸ್ಥಾನಗಳನ್ನು ಗೆದ್ದಿತ್ತು ಮತ್ತು ಬಿಜೆಪಿ ಸಹಾಯಕ ಪಾತ್ರದಲ್ಲಿತ್ತು. ಆದರೆ, 2020ರ ಚುನಾವಣೆಯಲ್ಲಿ ಜೆಡಿಯು ಕೇವಲ 43 ಸ್ಥಾನಗಳಿಗೆ ಕುಸಿದು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿತ್ತು. ಇದರಿಂದ ಎನ್‌ಡಿಎ ಸರ್ಕಾರದಲ್ಲಿ ಬಿಜೆಪಿಯ ಪ್ರಭಾವ ಹೆಚ್ಚಾಗಿತ್ತು. ಹೆಚ್ಚಿದ ಮತದಾನವು ನಿತೀಶ್ ಅವರ ಜನಪ್ರಿಯತೆಯ ಪ್ರತಿಫಲನವಾಗಿದ್ದರೆ, ಅದು ಮೈತ್ರಿಕೂಟದೊಳಗೆ ಅವರ ಅಧಿಕಾರವನ್ನು ಮರುಸ್ಥಾಪಿಸಲು ಸಹಾಯ ಮಾಡುತ್ತದೆ.












Click it and Unblock the Notifications