ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Bihar bypoll: ಮೊಕಾಮಾದಲ್ಲಿ ಆರ್‌ಜೆಡಿಗೆ ಜಯ, ಗೋಪಾಲ್‌ಗಂಜ್‌ನಲ್ಲಿ ಬಿಜೆಪಿ ಮುನ್ನಡೆ

|
Google Oneindia Kannada News

ಪಾಟ್ನಾ, ನ.06: ಬಿಹಾರದಲ್ಲಿ ನಡೆದ ಮೊಕಾಮಾ ವಿಧಾನಸಭಾ ಉಪಚುನಾವಣೆ ಮತ್ತು ಗೋಪಾಲ್‌ಗಂಜ್‌ ಚುನಾವಣೆಯ ಫಲಿತಾಂಶ ಇನ್ನೇನು ಘೋಷಣೆಯಾಗಲಿದೆ.

ಮೊಕಾಮಾ ವಿಧಾನಸಭಾ ಉಪಚುನಾವಣೆಯಲ್ಲಿ ರಾಷ್ಟ್ರೀಯ ಜನತಾ ದಳದ ನೀಲಮ್ ದೇವಿ 16,000 ಕ್ಕೂ ಹೆಚ್ಚು ಮತಗಳಿಂದ ಗೆಲುವು ದಾಖಲಿಸಿದ್ದಾರೆ. ಆರ್‌ಜೆಡಿಯ ನೀಲಮ್ ದೇವಿ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಸೋನಮ್ ದೇವಿ ಅವರನ್ನು ಸೋಲಿಸಿ ಜಯಗಳಿಸಿದ್ದಾರೆ. ಅಧಿಕೃತ ಫಲಿತಾಂಶಕ್ಕಾಗಿ ಕಾಯಲಾಗುತ್ತಿದೆ.

1 ಲೋಕಸಭೆ, 5 ವಿಧಾನಸಭೆ ಉಪಚುನಾವಣೆ ದಿನಾಂಕ ಪ್ರಕಟ: ವೇಳಾಪಟ್ಟಿ ತಿಳಿಯಿರಿ1 ಲೋಕಸಭೆ, 5 ವಿಧಾನಸಭೆ ಉಪಚುನಾವಣೆ ದಿನಾಂಕ ಪ್ರಕಟ: ವೇಳಾಪಟ್ಟಿ ತಿಳಿಯಿರಿ

ಈ ವರ್ಷದ ಆಗಸ್ಟ್‌ನಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಪಕ್ಷ ಜೆಡಿಯು ಬಿಜೆಪಿಯೊಂದಿಗೆ ಸಂಬಂಧವನ್ನು ಕಡಿದುಕೊಂಡ ನಂತರ ಬಿಹಾರದಲ್ಲಿ ಆಡಳಿತಾರೂಢ ಮಹಾಮೈತ್ರಿಕೂಟ ಮತ್ತು ಪ್ರತಿಪಕ್ಷ ಬಿಜೆಪಿ ನಡುವಿನ ಮೊದಲ ಚುನಾವಣಾ ಪೈಪೋಟಿ ಇದಾಗಿದೆ.

ಆರ್‌ಜೆಡಿ ಶಾಸಕ ಅನಂತ್ ಸಿಂಗ್ ಅವರನ್ನು ಶಸ್ತ್ರಾಸ್ತ್ರ ಕಾಯ್ದೆ ಪ್ರಕರಣದಲ್ಲಿ ದೋಷಿ ಎಂದು ಅನರ್ಹಗೊಳಿಸಿದ ನಂತರ ಮೊಕಾಮಾ ಸ್ಥಾನ ತೆರವಾಗಿತ್ತು. ಅನಂತ್ ಸಿಂಗ್ ಅವರ ಪತ್ನಿ ನೀಲಮ್ ದೇವಿ ಅವರನ್ನು ತೇಜಸ್ವಿ ಯಾದವ್ ಪಕ್ಷ ಕಣಕ್ಕೆ ಇಳಿಸಿತ್ತು.

ಮೊಕಾಮಾ ಉಪಚುನಾವಣೆಯಲ್ಲಿ ಆರ್‌ಜೆಡಿಗೆ ಜಯ

"ನನ್ನ ಗೆಲುವು ನಿಶ್ಚಿತವಾಗಿತ್ತು. ನನ್ನ ಸ್ಪರ್ಧೆಯಲ್ಲಿ ಬೇರೆ ಯಾರೂ ಇಲ್ಲ ಎಂದು ಮೊದಲೇ ಹೇಳಿದ್ದೆ. ಉಪಚುನಾವಣೆ ಕೇವಲ ಔಪಚಾರಿಕವಾಗಿತ್ತು. ಮೊಕಾಮಾ ಪರಶುರಾಮನ ಭೂಮಿ, ಇಲ್ಲಿನ ಜನರು ಆಮಿಷಕ್ಕೆ ಒಳಗಾಗುವುದಿಲ್ಲ. ವಿಧಾಯಕ್ ಜಿ (ಅನಂತ್ ಸಿಂಗ್) ಜನರ ಸೇವೆ ಮಾಡಿದರು. ಅದಕ್ಕಾಗಿ ಜನರ ಈಗ ಇಂತಹ ಫಲಿತಾಂಶವನ್ನು ನೀಡುತ್ತಿದ್ದಾರೆ"ಎಂದು ನೀಲಂ ದೇವಿ ಹೇಳಿದ್ದಾರೆ.

ಜೆಡಿಯು, ಆರ್‌ಜೆಡಿ ಟಿಕೆಟ್‌ನಲ್ಲಿ ಹಲವು ಬಾರಿ ಜಯ

ಜೆಡಿಯು, ಆರ್‌ಜೆಡಿ ಟಿಕೆಟ್‌ನಲ್ಲಿ ಹಲವು ಬಾರಿ ಜಯ

2005 ರಿಂದ ಮೊಕಾಮಾ ಅನಂತ್ ಸಿಂಗ್ ಅವರ ಭದ್ರಕೋಟೆಯಾಗಿದೆ. ಅವರು ಜೆಡಿಯು ಟಿಕೆಟ್‌ನಲ್ಲಿ ಎರಡು ಬಾರಿ ಮೊಕಾಮಾ ಸ್ಥಾನವನ್ನು ಗೆದ್ದಿದ್ದಾರೆ. ಬಳಿಕ ಅನಂತ್ ಸಿಂಗ್ ಅವರು 2020 ರ ಚುನಾವಣೆಯಲ್ಲಿ ಆರ್‌ಜೆಡಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸ್ಥಾನವನ್ನು ಉಳಿಸಿಕೊಂಡಿದ್ದರು. ಆದರೆ ಕ್ರಿಮಿನಲ್ ಪ್ರಕರಣದಲ್ಲಿ ಶಿಕ್ಷೆಯಾದ ನಂತರ ಅವರನ್ನು ವಿಧಾನಸಭೆಯಿಂದ ಅನರ್ಹಗೊಳಿಸಲಾಯಿತು.

ಮೊಕಾಮಾದಲ್ಲಿ ಬಿಜೆಪಿ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದೆ.

ಗೋಪಾಲ್‌ಗಂಜ್‌ನಲ್ಲಿ ಬಿಜೆಪಿಯ ಕುಸುಮ್ ದೇವಿ ಮುನ್ನಡೆ

ಗೋಪಾಲ್‌ಗಂಜ್‌ನಲ್ಲಿ ಬಿಜೆಪಿಯ ಕುಸುಮ್ ದೇವಿ ಮುನ್ನಡೆ

ಬಿಹಾರದ ಗೋಪಾಲ್‌ಗಂಜ್ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿಯ ಕುಸುಮ್ ದೇವಿ ಮುನ್ನಡೆ ಸಾಧಿಸಿದ್ದಾರೆ. ಕುಸುಮ್ ದೇವಿ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಆರ್‌ಜೆಡಿಯ ಮೋಹನ್ ಪ್ರಸಾದ್ ಗುಪ್ತಾ ಅವರಿಗಿಂತ ಮುನ್ನಡೆ ಸಾಧಿಸಿದ್ದಾರೆ ಎಂದು ಚುನಾವಣಾ ಆಯೋಗದ ಅಂಕಿ ಸಂಖ್ಯೆಗಳು ತೋರಿಸಿವೆ.

ಆರ್‌ಜೆಡಿಗೆ, ಗೋಪಾಲ್‌ಗಂಜ್ ಉಪಚುನಾವಣೆ ಪಕ್ಷದ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಲಾಲು ಯಾದವ್ ಅವರಿಗೆ ಪ್ರತಿಷ್ಠಯ ಕಣವಾಗಿದೆ . ಏಕೆಂದರೆ ಇದು ಅವರ ತವರು ಜಿಲ್ಲೆ.

ಆಡಳಿತ ಪಕ್ಷಕ್ಕೆ ಪ್ರತಿಷ್ಠಯ ಕಣವಾಗಿದೆ ಉಪಚುನಾವಣೆ

ಆಡಳಿತ ಪಕ್ಷಕ್ಕೆ ಪ್ರತಿಷ್ಠಯ ಕಣವಾಗಿದೆ ಉಪಚುನಾವಣೆ

6.10 ಲಕ್ಷ ಮತದಾರರಲ್ಲಿ ಈವರೆಗೆ ಗೋಪಾಲ್‌ಗಂಜ್ (3.31 ಲಕ್ಷ) ಮತ್ತು ಮೊಕಾಮಾ (2.70 ಲಕ್ಷ) - 52.3 ರಷ್ಟು ಜನರು ನವೆಂಬರ್ 3 ರಂದು ಎರಡು ಸ್ಥಾನಗಳಲ್ಲಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಎರಡು ಕ್ಷೇತ್ರಗಳಲ್ಲಿ ಒಟ್ಟು 619 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಎರಡು ಚುನಾವಣಾ ಕಣಗಳಲ್ಲಿ ಹದಿನೈದು ಅಭ್ಯರ್ಥಿಗಳು ಕಣದಲ್ಲಿದ್ದರು. ಗೋಪಾಲ್‌ಗಂಜ್‌ನಲ್ಲಿ ಒಂಬತ್ತು ಮತ್ತು ಮೊಕಾಮಾದಲ್ಲಿ ಆರು ಮಂದಿ ತಮ್ಮ ಅದೃಷ್ಟ ಪರೀಕ್ಷಗೆ ಇಳಿದಿದ್ದರು.

ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಬಿಜೆಪಿಯೊಂದಿಗಿನ ಮೈತ್ರಿಯನ್ನು ಮುರಿದುಕೊಂಡು ಆರ್‌ಜೆಡಿ, ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳೊಂದಿಗೆ ಸೇರಿ ಹೊಸ ಸರ್ಕಾರವನ್ನು ರಚಿಸಿದ್ದಾರೆ. ಹೀಗಾಗಿ ಈ ಎರಡು ಸ್ಥಾನಗಳಿಗೆ ನಡೆಯುತ್ತಿರುವ ಉಪ ಚುನಾವಣೆಯು ಹೆಚ್ಚು ಮಹತ್ವದ್ದಾಗಿದೆ. ಾಡಳಿತ ಪಕ್ಷದಲ್ಲಿ ಆರ್‌ಜೆಡಿಯ ತೇಜಸ್ವಿ ಯಾದವ್ ಉಪ ಮುಖ್ಯಮಂತ್ರಿಯಾಗಿದ್ದಾರೆ.

English summary
Bihar Bypoll: Rashtriya Janata Dal's Neelam Devi won Mokama assembly bypoll in Bihar, official result is awaited. BJP leading in the Gopalganj seat. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X