ಬಿಹಾರದಲ್ಲಿ ನಾಲ್ಕನೇ ಹಂತದ ಮತದಾನ, ಅಂಕಿ ಅಂಶ
ಪಾಟ್ನ, ನ.01: ಬಿಹಾರ ವಿಧಾನಸಭೆಯ ನಾಲ್ಕನೇ ಹಂತದ ಮತದಾನ ಭಾನುವಾರ ಆರಂಭಗೊಂಡಿದೆ. ಬೆಳಗ್ಗೆ 7 ಗಂಟೆಯಿಂದ 55 ಕ್ಷೇತ್ರಗಳಲ್ಲಿ ಮತದಾನ ಜಾರಿಯಲ್ಲಿದೆ. ಒಟ್ಟು 776 ಅಭ್ಯರ್ಥಿಗಳ ಅದೃಷ್ಟ ಪರೀಕ್ಷೆಯಾಗುತ್ತಿದೆ. ಫಲಿತಾಂಶಕ್ಕಾಗಿ ನವೆಂಬರ್ 8 (ಭಾನುವಾರ) ರ ತನಕ ಕಾಯಬೇಕಾಗಿದೆ.
ನಾಲ್ಕನೇ ಹಂತದ ಮತದಾನ ಬೆಳಗ್ಗೆ 10 ಗಂಟೆ ವೇಳೆಗೆ ಶೇ 18.97ರಷ್ಟು ಆಗಿದೆ. ಸಂಜೆ 4 ಗಂಟೆ ವೇಳೆ ಶೇ 55.35ರಷ್ಟು ಮತದಾನವಾಗಿತ್ತು.
ಬಿಹಾರ ವಿಧಾನಸಭೆಯ ಮೊದಲ ಹಂತದ ಮತದಾನ ಅಕ್ಟೋಬರ್ 12ರಂದು 49 ಕ್ಷೇತ್ರದಲ್ಲಿ ನಡೆಯಿತು. ಸುಮಾರು ಶೇ 57ರಷ್ಟು ಮತದಾನವಾಗಿತ್ತು. ಅಕ್ಟೋಬರ್ 16ರಂದು ನಡೆದ ಎರಡನೇ ಹಂತದ ಮತದಾನದಲ್ಲಿ ಶೇ 55ರಷ್ಟು ಮತದಾನವಾಗಿತ್ತು. ಅಕ್ಟೋಬರ್ 28ರಂದು 50 ಕ್ಷೇತ್ರಗಳಲ್ಲಿ ಮತದಾನ ಶೇ 53ರಷ್ಟು ಕಂಡು ಬಂದಿತ್ತು.

243 ಸದಸ್ಯರ ಬಿಹಾರ ವಿಧಾನಸಭೆಯ ಅಧಿಕಾರಾವಧಿ ನವೆಂಬರ್ 29ಕ್ಕೆ ಮುಕ್ತಾಯವಾಗಲಿದ್ದು, ಅದಕ್ಕೆ ಮುನ್ನ ಹೊಸ ಶಾಸಕರ ಆಯ್ಕೆ ಪ್ರಕ್ರಿಯೆ ಮುಕ್ತಾಯಗೊಳ್ಳಬೇಕಾಗಿದೆ. ಒಟ್ಟು ಐದು ಹಂತಗಳಲ್ಲಿ ಬಿಹಾರದಲ್ಲಿ ಚುನಾವಣಾ ಸಮರ ನಡೆಯಲಿದೆ.
Atmosphere in Bihar indicates people want change. People are seeing NDA as a ray of hope. Will campaign in Madhubani, Madhepura & Katihar.
— Narendra Modi (@narendramodi) ನವೆಂಬರ್ 1, 2015 ಜೆಡಿಯು, ಆರ್‌ಜೆಡಿ, ಕಾಂಗ್ರೆಸ್ ಒಳಗೊಂಡ ಮಹಾಮೈತ್ರಿಕೂಟ ಹಾಗೂ ಬಿಜೆಪಿ ನಡುವೆ ವಿಧಾನಸಭಾ ಚುನಾವಣೆಯಲ್ಲಿ ತೀವ್ರ ಪೈಪೋಟಿಯ ನಿರೀಕ್ಷೆ ಇದೆ. ಅದರೆ, ಇತ್ತೀಚೆಗೆ ಮಹಾ ಮೈತ್ರಿಕೂಟದಿಂದ ಸಮಾಜವಾದಿ ಪಕ್ಷ ಹಿಂದೆ ಸರಿದಿರುವುದು ಎನ್ ಡಿಎ ಮಿತ್ರ ಪಕ್ಷಗಳಿಗೆ ನೆರವಾಗುವ ಸಾಧ್ಯತೆಯಿದೆ.
ಒಟ್ಟು ಅಭ್ಯರ್ಥಿಗಳು: 776 (226 ಕ್ರಿಮಿನಲ್ ಹಿನ್ನೆಲೆಯುಳ್ಳವರು ಶೇ 33)
ಮತದಾನ ನಡೆಯುವ ಜಿಲ್ಲೆಗಳು: ಪೂರ್ವ ಚಂಪಾರಣ್, ಗೋಪಾಲ್ ಗಂಜ್, ಮುಜಾಫರ್ ನಗರ್,ಶೆಯೋಹಾರ್, ಸಿತಾಮರ್ಹಿ, ಸಿವಾನ್ ಹಾಗೂ ಪಶ್ಚಿಮ ಚಂಪಾರಣ್
* ಒಟ್ಟು 55 ಕ್ಷೇತ್ರಗಳು, 48 ಅತಿಸೂಕ್ಷ್ಮ ಮತಕ್ಷೇತಗಳು
* ಅತಿ ಶ್ರೀಮಂತ ಅಭ್ಯರ್ಥಿ 22 ಕೋಟಿ ರು, ಅತಿ ಕಡಿಮೆ ಆಸ್ತಿ ಹೊಂದಿರುವ ಅಭ್ಯರ್ಥಿ 2,000ರು.
(ಒನ್ ಇಂಡಿಯಾ ಸುದ್ದಿ)












Click it and Unblock the Notifications