ಪಾಕಿಸ್ತಾನಕ್ಕೆ ಹೋಗುತ್ತೇನೆ, ಸಾಧ್ಯವಾದರೆ ತಡೆಯಿರಿ: ಬಿಗ್ ಬಾಸ್ ವಿಜೇತೆ ಚಾಲೆಂಜ್
ಮುಂಬೈ, ಆ 25: ಪಾಕಿಸ್ತಾನದ ವಾಣಿಜ್ಯ ನಗರ ಕರಾಚಿಯಲ್ಲಿ ಕಾರ್ಯಕ್ರಮ ನೀಡಿ, ನಿಷೇಧಕ್ಕೆ ಒಳಗಾಗಿರುವ ಗಾಯಕ ಮಿಖಾ ಸಿಂಗ್ ಅವರ ಪರವಾಗಿ ಬಿಗ್ ಬಾಸ್ ವಿಜೇತೆಯೊಬ್ಬರು ನಿಂತಿದ್ದಾರೆ.
ಹಿಂದಿ ಬಿಗ್ ಬಾಸ್ ಹನ್ನೊಂದರ ವಿಜೇತೆ ಮತ್ತು 'ಭಾಭೀ ಜೀ ಘರ್ ಪೆ ಹೇ' ಖ್ಯಾತಿಯ ಶಿಲ್ಪಾ ಶಿಂಧೆ, ಫಿಲಂ ಫೆಡರೇಷನ್ ಅನ್ನು ಸಿಕ್ಕಾಪಟ್ಟೆ ತರಾಟೆಗೆ ತೆಗೆದುಕೊಂಡಿದ್ದಾರೆ.
ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದ ಶಿಂಧೆ, " ನಾನು ಪಾಕಿಸ್ತಾನಕ್ಕೆ ಹೋಗುತ್ತೇನೆ, ಸಾಧ್ಯವಾದರೆ ತಡೆಯಿರಿ" ಎಂದು ಫೆಡರೇಷನ್ ಗೆ ಚಾಲೆಂಜ್ ಮಾಡಿದ್ದಾರೆ.

"ದೇಶದ ಮೇಲಿನ ಪ್ರೀತಿ ತೋರಿಸಲು ಪಾಕಿಸ್ತಾನ ಮುರ್ದಾಬಾದ್" ಎಂದು ಹೇಳಬೇಕೇ ಎಂದು ಪ್ರಶ್ನಿಸಿರುವ ಶಿಂಧೆ, "ಮಿಖಾ ಸಿಂಗ್ ಉತ್ತಮ ಗಾಯಕರಾಗಿದ್ದರಿಂದಲೇ ಅಲ್ಲಿ ಕಾರ್ಯಕ್ರಮ ನೀಡುವ ಅವಕಾಶ ಅವರಿಗೆ ಸಿಕ್ಕಿತು" ಎಂದಿದ್ದಾರೆ.
" ಪಾಕಿಸ್ತಾನಕ್ಕೆ ಹೋಗಲು ಭಾರತ ಸರಕಾರ ವೀಸಾ ನೀಡಿದ್ದಲ್ಲವೇ" ಎಂದು ಹೇಳಿರುವ ಶಿಂಧೆ, " ಮಿಖಾ ಸಿಂಗ್ ಅಲ್ಲಿ ಕಾರ್ಯಕ್ರಮ ನೀಡಿದ್ದು, ನಮ್ಮ ದೇಶಕ್ಕಾಗದ ಹೆಮ್ಮೆ ಎಂದು ನಾವು ಭಾವಿಸಬೇಕು" ಎಂದು ಶಿಲ್ಪಾ ಶಿಂಧೆ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
" ನಾವು ನಮ್ಮ ದೇಶವನ್ನು, ಪ್ರೀತಿಸುತ್ತೇವೋ ಅಥವಾ ದ್ವೇಷಿಸುತ್ತೇವೋ ಎನ್ನುವುದನ್ನು ಇನ್ನೊಬ್ಬರು ನಿರ್ಧರಿಸುವುದಲ್ಲ" ಎಂದು ಶಿಂಧೆ, FWICE (Federation of Western India Cine Employees) ವಿರುದ್ದ ಹರಿಹಾಯ್ದಿದಿದ್ದಾರೆ.
ಗಾಯಕ ಮಿಖಾ ಸಿಂಗ್, ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರ ಹತ್ತಿರದ ಸಂಬಂಧಿಯೊಬ್ಬರ ಆರತಕ್ಷತೆಯಲ್ಲಿ ಕಾರ್ಯಕ್ರಮ ನೀಡಿದ್ದರು.












Click it and Unblock the Notifications