ಮಹಾರಾಷ್ಟ್ರದ ಭಿವಂಡಿಯಲ್ಲಿ ಮೂರಂತಸ್ತಿನ ಕಟ್ಟಡ ಕುಸಿತ: ಓರ್ವ ಸಾವು

ಭಿವಂಡಿ, ಜುಲೈ 25: ಮಹಾರಾಷ್ಟ್ರದ ಭಿವಂಡಿಯಲ್ಲಿ ಮೂರಂತಸ್ತಿನ ಕಟ್ಟಡ ಕುಸಿದ ಪರಿಣಾಮ ಓರ್ವ ವ್ಯಕ್ತಿ ಸಾವಿಗೀಡಾಗಿದ್ದು, ಆರು ಮಂದಿ ಗಾಯಗೊಂಡಿದ್ದಾರೆ.

ಮಹಾರಾಷ್ಟ್ರದ ಭಿವಂಡಿಯ ರಸಲಬಾಘ್ ಪ್ರದೇಶದಲ್ಲಿ ಮಂಗಳವಾರ ರಾತ್ರಿ ನಡೆದ ಈ ಘಟನೆಯಲ್ಲಿ ಹಲವರು ಕಟ್ಟಡದ ಕೆಳಗೆ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ ಸಿಬ್ಬಂದಿಯ ತಂಡ ರಕ್ಷಣಾ ಕಾರ್ಯ ನಡೆಸುತ್ತಿದ್ದು, ಕಟ್ಟಡದ ಕೆಳಗೆ ಸಿಲುಕಿರುವ ಆರು ಜನರನ್ನು ರಕ್ಷಿಸಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಮಹಾರಾಷ್ಟ್ರ ಸಚಿವ ಏಕನಾಥ್ ಶಿಂದೆ, "ಕಟ್ಟಡವನ್ನು ಆರು ವರ್ಷದ ಹಿಂದಷ್ಟೇ ಕಟ್ಟಲಾಗಿದ್ದರೂ, ಅದು ಕುಸಿದಿರುವುದು ಕಳಪೆ ಕಾಮಗಾರಿಗೆ ಸಾಕ್ಷಿ. ಈ ದುರ್ಘಟನೆಗೆ ಕಟ್ಟಡದ ಬಿಲ್ಡರ್ ಕಾರಣ" ಎಂದು ಅವರು ಹೇಳಿದ್ದಾರೆ.

Bhiwandi building collapse: 1 dead, 6 rescued

ಘಟನೆ ನಡೆಯುವ ಸಮಯದಲ್ಲಿ ಕಟ್ಟಡದ ಒಳಗೆ ಯಾರೂ ಇರಲಿಲ್ಲ. ಆದರೆ ಕಟ್ಟಡ ಕುಸಿದು, ಪಕ್ಕದಲ್ಲಿದ್ದ ವಠಾರಕ್ಕೆ ಬಿದ್ದಿದ್ದರಿಂದ ಅಲ್ಲಿದ್ದ ಕೆಲವರು ಕಟ್ಟದ ಕೆಳಗೆ ಸಿಲುಕಿದ್ದರು.

ಜುಲೈ 17 ರಂದು ಗ್ರೇಟರ್ ನೋಯ್ಡಾದಲ್ಲಿ ಕಟ್ಟಡವೊಂದು ಕುಸಿದ ಪರಿಣಾಮ 9 ಜನ ಸಾವಿಗೀಡಾಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+