Bharat Bandh Updates: ಕೃಷಿ ಕಾಯ್ದೆ ವಿರೋಧಿಸಿ ಇಂದು ಭಾರತ ಬಂದ್
ನವದೆಹಲಿ, ಡಿಸೆಂಬರ್ 08: ಕೇಂದ್ರ ಸರ್ಕಾರದ ಹೊಸ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಇಂದು ಭಾರತ ಬಂದ್‌ಗೆ ಕರೆ ನೀಡಿದ್ದಾರೆ. ಕಳೆದ 11 ದಿನಗಳಿಂದ ದೆಹಲಿಯ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ಕರೆ ನೀಡಿರುವ ಭಾರತ ಬಂದ್‌ಗೆ ದೇಶಾದ್ಯಂತ ಭಾರಿ ಬೆಂಬಲ ವ್ಯಕ್ತವಾಗಿದೆ.
ಕಾಂಗ್ರೆಸ್ ತೆಲಂಗಾಣ ರಾಷ್ಟ್ರಸಮಿತಿ, ಡಿಎಂಕೆ ಹಾಗೂ ಆಮ್ ಆದ್ಮಿ ಪಕ್ಷ ಸೇರಿ 15 ರಾಜಕೀಯ ಪಕ್ಷಗಳು ಬೆಂಬಲ ಸೂಚಿಸಿವೆ. ಭಾರತ ಬಂದ್ ಗೆ ಹತ್ತು ಕೇಂದ್ರ ಕಾರ್ಮಿಕ ಸಂಘಗಳ ಜಂಟಿ ವೇದಿಕೆ ನೈತಿಕ ಬೆಂಬಲ ಘೋಷಿಸಿದೆ. ಕಾರ್ಮಿಕ ಸಂಘಟನೆಗಳು ಮುಷ್ಕರಕ್ಕೆ ಇಳಿಯುವುದಿಲ್ಲ ಮತ್ತು ಕೆಲಸದಿಂದ ದೂರವಿರುವುದಿಲ್ಲ.
ಆದರೆ ರೈತರ ಆಂದೋಲನವನ್ನು ಬೆಂಬಲಿಸುತ್ತವೆ ಎಂದು ಹಿಂದ್ ಮಜ್ದೂರ್ ಸಭಾ ಪ್ರಧಾನ ಕಾರ್ಯದರ್ಶಿ ಹರ್ಭಜನ್ ಸಿಂಗ್ ಸಿಧು ಅವರು ತಿಳಿಸಿದ್ದಾರೆ.

ಕಾರ್ಮಿಕರು ಭಾರತ ಬಂದ್ ಬೆಂಬಲಿಸಿ ಕರ್ತವ್ಯದಲ್ಲಿರುವಾಗ ಕಪ್ಪು ಪಟ್ಟಿಗಳನ್ನು ಧರಿಸಲಿದ್ದಾರೆ ಮತ್ತು ಕೆಲಸದ ಸಮಯದ ನಂತರ ಅಥವಾ ಮೊದಲು ವೇದಿಕೆಯು ಪ್ರತಿಭಟನೆ ಮತ್ತು ಮೆರವಣಿಗೆ ನಡೆಸಲಿದೆ ಎಂದು ಅವರು ಹೇಳಿದ್ದಾರೆ. ಭಾರತ ಬಂದ್‌ನ ಕ್ಷಣ ಕ್ಷಣದ ಮಾಹಿತಿ 'ಒನ್ ಇಂಡಿಯಾ'ದಲ್ಲಿ ನೀಡಲಿದ್ದೇವೆ ನಿರೀಕ್ಷಿಸಿ.














Click it and Unblock the Notifications