• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಭಾರತ ಬಂದ್: ದೆಹಲಿ, ಹರ್ಯಾಣ ಬದಲಿ ಮಾರ್ಗಗಳ ವಿವರ

|
Google Oneindia Kannada News

ನವದೆಹಲಿ, ಡಿಸೆಂಬರ್ 08: ಭಾರತ ಬಂದ್ ಇರುವ ಕಾರಣ ಹರ್ಯಾಣ ಹಾಗೂ ದೆಹಲಿ ನಡುವೆ ಸಾಕಷ್ಟು ಹೆದ್ದಾರಿಗಳು ಬಂದ್ ಆಗಲಿದ್ದು, ಬದಲಿ ಮಾರ್ಗಗಳ ಕುರಿತು ಟ್ರಾಫಿಕ್ ಪೊಲೀಸರು ಮಾಹಿತಿ ನೀಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ದೆಹಲಿ-ಅಂಬಾಲಾ ಎನ್‌ಎಚ್ 44, ದೆಹಲಿ-ಹಿಸಾರ್ ಎನ್‌ಎಚ್ 9, ದೆಹಲಿ-ಪಲ್ವಾಲ್ ಎನ್‌ಎಚ್ 19, ದೆಹಲಿ ರೆವಾರಿ ಎನ್‌ಎಚ್ 48ನಲ್ಲಿ ಕೆಲವು ಗಂಟೆಗಳ ಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಲಿದೆ. ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ ತೊಂದರೆ ಉಂಟಾಗಲಿದೆ.

Bharat Bandh Live Updates: ಕೃಷಿ ಮಸೂದೆ ವಿರೋಧಿಸಿ ಇಂದು ಭಾರತ ಬಂದ್Bharat Bandh Live Updates: ಕೃಷಿ ಮಸೂದೆ ವಿರೋಧಿಸಿ ಇಂದು ಭಾರತ ಬಂದ್

ಹರ್ಯಾಣದ ಸಾರ್ವಜನಿಕರಿಗೆ ಈ ಕುರಿತು ಮಾಹಿತಿ ನೀಡಲಾಗಿದೆ. ಈ ಸಂದರ್ಭದಲ್ಲಿ ಮನೆಯಿಂದ ಹೊರಗೆ ಬಾರದಂತೆ ಸೂಚಿಸಲಾಗಿದೆ. ದೆಹಲಿ ಪೊಲೀಸರು ಕೂಡ ಕೆಲವು ಸೂಚನೆಗಳು ನೀಡಿದ್ದಾರೆ.

ಸಿಂಘು, ಔಚಂಡಿ, ಪಿಯಾಒ ಮನಿಯಾರಿ, ಮಂಗೇಶ್, ಟಕ್ರಿ, ಝರೋಡಾ ಗಡಿಗಳು ಬಂದ್ ಇವೆ. ರಾಷ್ಟ್ರೀಯ ಹೆದ್ದಾರಿ 44 ಎರಡೂ ಕಡೆಗಳಿಂದಲೂ ಬಂದ್ ಇರಲಿದೆ. ವಾಹನ ಸವಾರರು ಬದಲಿ ಮಾರ್ಗವನ್ನು ಬಳಸುವಂತೆ ಕೋರಲಾಗಿದೆ. ಲಾಂಪುರ್, ಸಫಿಯಾಬಾದ್, ಸಬೋಲಿ ಗಡಿಗೆ ಪ್ರವೇಶಿಸದೆ ಮುಕಾರ್ಬಾ ಹಾಗೂ ಜಿಟಿಕೆ ರಸ್ತೆಯಲ್ಲಿ ತೆರಳುವಂತೆ ಸೂಚಿಸಲಾಗಿದೆ.

ನೋಯ್ಡಾಕ್ಕೆ ತೆರಳುವವರು ಡಿಎನ್‌ಡಿ ಮಾರ್ಗವಾಗಿ ಚಳಿಸಬಹುದು, ನೋಯ್ಡಾಕ್ಕೆ ತೆರಳುವ ಚಿಲ್ಲಾ ಗಡಿ ಬಂದ್ ಆಗಿದೆ. ಘಾಜಿಪುರ್ ಗಡಿ ಬಂದ್ ಆಗಿದೆ. ಹೀಗಾಗಿ ದೆಹಲಿಗೆ ಬರುವವರು ಎನ್‌ಎಚ್ 24 ಬಳಸದೆ ಅಪ್ಸರಾ, ಭೋಪ್ರಾ, ಡಿಎನ್‌ಡಿ ಮೂಲಕ ಬರಲು ತಿಳಿಸಲಾಗಿದೆ.

ಹರ್ಯಾಣಕ್ಕೆ ಹೋಗುವವರು ಧಾನ್ಸಾ, ದೌರಾಲಾ, ಕಪಾಶೆರಾ, ರಾಜೋಕ್ರಿ, ಬಿಜ್ವಾಸನ್ ಮೂಲಕ ಬರಬಹುದು. ಕೇಂದ್ರ ಸರ್ಕಾರದ ಕೃಷಿ ಮಸೂದೆ ವಿರೋಧಿಸಿ ರೈತರು ಭಾರತ ಬಂದ್‌ಗೆ ಕರೆ ನೀಡಿದ್ದಾರೆ. ಹಲವು ಕಡೆ ಪ್ರತಿಭಟನೆಯ ಕಾವು ಹೆಚ್ಚಾಗಿದೆ.

English summary
The Haryana and Delhi Police have issued separate advisories on the traffic situation in view of the nation-wide "Bharat Bandh" called on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X