ಭಾರತ್ ಬಂದ್; ಎರಡು ದೊಡ್ಡ ರೈಲ್ವೆ ಒಕ್ಕೂಟದ ಬೆಂಬಲ

ನವದೆಹಲಿ, ಡಿಸೆಂಬರ್ 08 : ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ನೀತಿಗಳ ವಿರುದ್ಧ ರೈತರು ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಮಂಗಳವಾರ ಭಾರತ್ ಬಂದ್‌ಗೆ ಸಹ ಕರೆ ನೀಡಲಾಗಿದೆ. ಹಲವಾರು ಸಂಘಟನೆಗಳು ಬಂದ್‌ ಬೆಂಬಲಿಸಿವೆ.

ದೇಶದ ಎರಡು ದೊಡ್ಡ ರೈಲ್ವೆ ನೌಕರರ ಒಕ್ಕೂಟ ಮಂಗಳವಾರದ ಭಾರತ್ ಬಂದ್‌ಗೆ ಬೆಂಬಲ ಕೊಟ್ಟಿದೆ. ಭಾರತೀಯ ರೈಲ್ವೆ ನೌಕರರ ರಾಷ್ಟ್ರೀಯ ಒಕ್ಕೂಟ (ಎನ್‌ಎಫ್‌ಐಆರ್), ಅಖಿಲ ಭಾರತ ರೈಲ್ವೆಮೆನ್ಸ್ ಫೆಡರೇಶನ್(ಎಐಆರ್‌ಎಫ್) ಬಂದ್ ಬೆಂಬಲಿಸಿದೆ.

ರೈತರು ಕರೆ ನೀಡಿರುವ ಭಾರತ್ ಬಂದ್ ಬೆಂಬಲಿಸಿ ರೈಲ್ವೆ ನೌಕರರು ಬೆಳಗ್ಗೆ 11 ಗಂಟೆಯ ಬಳಿಕ ಪ್ರತಿಭಟನೆ ನಡೆಸಲಿದ್ದಾರೆ. ಎಐಆರ್‌ಎಫ್ ಪ್ರಧಾನ ಕಾರ್ಯದರ್ಶಿ ಶಿವಗೋಪಾಲ್ ಮಿಶ್ರಾ ಸಿಂಘು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಸೋಮವಾರ ಭೇಟಿ ಮಾಡಿದ್ದರು.

Two Biggest Railway Unions Support To Bharat Bandh

"ಮಂಗಳವಾರದ ಭಾರತ್ ಬಂದ್‌ಗೆ ಬೆಂಬಲ ನೀಡಬೇಕು ಎಂದು ಎಲ್ಲಾ ರಾಜ್ಯಗಳ ಘಟಕಗಳಿಗೆ ಪತ್ರದಲ್ಲಿ ಮಾಹಿತಿ ನೀಡಲಾಗಿದೆ. ನಾವು ಸಹ ಪ್ರತಿಭಟನೆ ನಡೆಸುವ ಮೂಲಕ ಬೆಂಬಲ ನೀಡುತ್ತೇವೆ" ಎಂದು ಶಿವಗೋಪಾ ಮಿಶ್ರಾ ಹೇಳಿದ್ದಾರೆ.

ಎನ್‌ಎಫ್‌ಐಆರ್ ಪ್ರಧಾನ ಕಾರ್ಯದರ್ಶಿ ಎಂ. ರಾಘವಯ್ಯ, "ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಬೇಡಿಕೆಯನ್ನು ಪರಿಗಣಿಸಬೇಕು. ರೈಲ್ವೆ ಅನ್ನದಾತರ ಜೊತೆ ಇದೆ" ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎನ್‌ಎಫ್‌ಐಆರ್ ಮತ್ತು ಎಐಆರ್‌ಎಫ್ ರೈಲ್ವೆ ನೌಕರರ ಎರಡು ದೊಡ್ಡ ಯೂನಿಯನ್‌ಗಳಾಗಿವೆ. 13 ಲಕ್ಷ ರೈಲ್ವೆ ನೌಕರರು, ರೈಲ್ವೆಯ ನಿವೃತ್ತ ನೌಕರರು ಸಹ ಈ ಯೂನಿಯನ್‌ಗಳಲ್ಲಿ ಇದ್ದಾರೆ.

ರೈತರು ಕರೆ ಕೊಟ್ಟಿರುವ ಭಾರತ್ ಬಂದ್‌ಗೆ ವರ್ತಕರ ಸಂಘ, ಲಾರಿ ಮಾಲೀಕರ ಸಂಘ ಈಗಾಗಲೇ ಬೆಂಬಲ ನೀಡಿವೆ. ಐಎನ್‌ಟಿಯುಸಿ, ಎಐಟಿಯುಸಿ, ಹೆಚ್‌ಎಂಎಸ್, ಹೆಚ್‌ಎಂಎಸ್, ಸಿಐಟಿಯು ಮತ್ತು ರಾಜಕೀಯ ಪಕ್ಷಗಳಾದ ಕಾಂಗ್ರೆಸ್, ಎನ್‌ಸಿಪಿ, ಎಸ್‌ಪಿ, ಐಎನ್‌ಎಲ್‌ಡಿ ಸಹ ಬೆಂಬಲವನ್ನು ಘೋಷಣೆ ಮಾಡಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+