• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತದಲ್ಲಿನ ತನ್ನ ತಂಡದ ಪುನರ್‌ರಚನೆಗೆ ಮುಂದಾದ ಟ್ವಿಟ್ಟರ್

|
Google Oneindia Kannada News

ನವದೆಹಲಿ, ಫೆಬ್ರವರಿ 12: ಭಾರತ ಸರ್ಕಾರದ ಜೊತೆಗೆ ಉತ್ತಮ ಸಂವಹನಕ್ಕಾಗಿ ಟ್ವಿಟ್ಟರ್ ಭಾರತದಲ್ಲಿನ ತನ್ನ ತಂಡದ ಪುನರ್‌ರಚನೆ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

ಭಾರತದಲ್ಲಿನ ತನ್ನ ಕಚೇರಿಯಲ್ಲಿ ಹೆಚ್ಚಿನ ಹಿರಿಯ ಅಧಿಕಾರಿಗಳನ್ನು ನಿಯೋಜಿಸಲು ಮತ್ತು ಕಾನೂನು ಅಡಚಣೆಗೆ ಎದುರಾಗುವ ಸಮಸ್ಯೆಗಳನ್ನು ಉತ್ತಮವಾಗಿ ನಿಭಾಯಿಸಲು ಹೊಸ ತಂಡ ರಚನೆಗೆ ಮುಂದಾಗಲಿದೆ ಎಂದು ಹಿರಿಯ ಸರ್ಕಾರಿ ಅಧಿಕಾರಿಗಳು ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

ಸಾಮಾಜಿಕ ಮಾಧ್ಯಮ ನಿಯಂತ್ರಣಕ್ಕೆ ಸರ್ಕಾರದಿಂದ ನೀತಿ ಸಂಹಿತೆ, ಕರಡು ನಿಯಮ ಸಿದ್ಧಸಾಮಾಜಿಕ ಮಾಧ್ಯಮ ನಿಯಂತ್ರಣಕ್ಕೆ ಸರ್ಕಾರದಿಂದ ನೀತಿ ಸಂಹಿತೆ, ಕರಡು ನಿಯಮ ಸಿದ್ಧ

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಅಧಿಕಾರಿಗಳೊಂದಿಗೆ ಬುಧವಾರ ನಡೆದ ಸಭೆಯಲ್ಲಿ ಟ್ವಿಟರ್‌ನ ಕಾರ್ಯ ನಿರ್ವಾಹಕ ಅಧಿಕಾರಿಗಳು ಕೆಲವೊಂದು ರಚನಾತ್ಮಕ ಬದಲಾವಣೆಗೆ ಒಪ್ಪಿದ್ದಾರೆ ಎನ್ನಲಾಗಿದೆ. ಭಾರತ ಸರ್ಕಾರ ಮತ್ತು ಟ್ವಿಟ್ಟರ್‌ನ ತಂಡದ ನಡುವೆ ಉತ್ತಮ ಸಂವಹನಕ್ಕಾಗಿ ಕೆಲವು ಬದಲಾವಣೆಗಳನ್ನು ತರಲು ಮುಂದಾಗಿದೆ.

ಭಾರತದಲ್ಲಿನ ಉನ್ನತ ನಿರ್ವಹಣೆಯಲ್ಲಿನ ರಚನಾತ್ಮಕ ಬದಲಾವಣೆಗಳಿಗೆ ಟ್ವಿಟರ್ ಮುಂದಾಗಿದೆಯೇ ಎಂದು ಕೇಳಿದ ಪ್ರಶ್ನೆಗೆ ಕಂಪನಿಯ ವಕ್ತಾರರು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

ಟ್ವಿಟ್ಟರ್ ಕೆಲವು ವಿಷಯವನ್ನು ಏಕೆ ನಿರ್ಬಂಧಿಸಿಲ್ಲ ಎಂದು ವಿವರಿಸಲು ಟ್ವಿಟರ್‌ನ ಜಾಗತಿಕ ಸಾರ್ವಜನಿಕ ನೀತಿಯ ಉಪಾಧ್ಯಕ್ಷ ಮೋನಿಕ್ ಮೆಚೆ ಮತ್ತು ಉಪ ಸಾಮಾನ್ಯ ಸಲಹೆಗಾರ ಮತ್ತು ಉಪಾಧ್ಯಕ್ಷ (ಕಾನೂನು) ಜಿಮ್ ಬೇಕರ್ ಅವರು ಐಟಿ ಸಚಿವಾಲಯದ ಹಿರಿಯ ಅಧಿಕಾರಿಗಳನ್ನು ಭೇಟಿಯಾಗಿದ್ದರು.

English summary
Twitter has extended a commitment to “restructure” its India team and assign more senior executives to its local offices
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X