Vande Bharat Sleeper: ಬೆಂಗಳೂರು-ಮುಂಬೈ ಮಾರ್ಗದಲ್ಲಿ ಟ್ರಯಲ್ ರನ್! ಅಪ್ಡೇಟ್ ಕೊಟ್ಟ ವಿಭಾಗೀಯ ಅಧಿಕಾರಿ

ಬೆಂಗಳೂರು: ದೇಶದ ಎರಡು ಪ್ರಮುಖ ರಾಜ್ಯಗಳ ನಡುವೆ ಐಶಾರಾಮಿ ಹಾಗೂ ಆರಾಮದಾಯಕ ಸೇವೆ ಒದಗಿಸುವ ವಂದೇ ಭಾರತ್ ಸ್ಲೀಪರ್ ಎಕ್ಸ್‌ಪ್ರೆಸ್ ರೈಲು ಬೆಂಗಳೂರು-ಮುಂಬೈ ಮಾರ್ಗದಲ್ಲಿ ಕಾರ್ಯಾಚರಣೆ ನಡೆಸಲು ಸಮಯ ಕೂಡಿ ಬಂದಿದೆ. ಈ ಕುರಿತು ಬೆಂಗಳೂರು ರೈಲ್ವೆ ವಿಭಾಗೀಯ ಅಧಿಕಾರಿಗಳು ಅಧಿಕೃತ ಮಾಹಿತಿ ನೀಡಿದ್ದಾರೆ. ಈ ಮೂಲಕ ಪ್ರಯಾಣಿಕರ ಕಾತರಿಕೆಯ ಕಾಯುವಿಕೆಗೆ ಶೀಘ್ರವೇ ತೆರೆ ಬೀಳಲಿದೆ.

ಬೆಂಗಳೂರು-ಮುಂಬೈ ನಡುವಿನ ಸ್ಲೀಪರ್ ರೈಲಿನ 16 ಬೋಗಿಗಳ ಒಂದು ರೇಕ್‌ನಂತೆ ಒಟ್ಟು ಎರಡು ವಂದೇ ಭಾರತ್ ಸ್ಲೀಪರ್ ರೈಲು ರೇಕ್‌ (ಸೆಟ್‌)ಗಳನ್ನು ನೈಋತ್ಯ ರೈಲ್ವೆ ಸ್ವೀಕರಿಸಿದೆ. ತಾಂತ್ರಿಕ ತಪಾಸಣೆ, ಅನೇಕ ಶಾಸನಬದ್ಧ ಪರೀಕ್ಷೆಗಳ ಬಳಿಕ ಇದೀಗ ಪ್ರಾಯೋಗಿಕ ಸಂಚಾರ ಆರಂಭಿಸಲು ನೈಋತ್ಯ ರೈಲ್ವೆ ಅಧಿಕಾರಿಗಳು ಸಜ್ಜಾಗಿದ್ದಾರೆ. ಇದು ಮುಗಿಯುತ್ತಿದ್ದಂತೆ ಈ ಮಾರ್ಗದ ಸ್ಲೀಪರ್ ವಂದೇ ಭಾರತ್ ರೈಲಿನ ಮೊದಲ ವಾಣಿಜ್ಯ ಸಂಚಾರಕ್ಕೆ ಶೀಘ್ರವೇ ಹಸಿರು ನಿಶಾನೆ ತೋರಿಸಲಾಗುತ್ತದೆ ಎಂದು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಶುತೋಷ್ ಕುಮಾರ್ ಸಿಂಗ್ ಅವರು ಖಚಿತಪಡಿಸಿದ್ದಾರೆ. ಮುಂದಿನ ಕೆಲವೇ ದಿನಗಳಲ್ಲಿ ಟ್ರಯಲ್ ರನ್ ನಡೆಯಲಿದೆ.

Bengaluru-Mumbai Vande Bharat Sleeper

ರಾತ್ರಿ ದೀರ್ಘ ಪ್ರಯಾಣದ ಪ್ರಯಾಣಿಕರನ್ನು ಗಮನದಲ್ಲಿಟ್ಟುಕೊಂಡು ಈ ಸ್ಲೀಪರ್ ವಂದೇ ಭಾರತ್ ರೈಲುಗಳ ಕಾರ್ಯಾಚರಣೆ ಆರಂಭಿಸುತ್ತಿರುವ ಭಾರತೀಯ ರೈಲ್ವೆ ಇಲಾಖೆಯು ಮುಂಬೈ-ಬೆಂಗಳೂರು ನಡುವೆ ಸ್ಲೀಪರ್ ರೈಲಿಗೆ ಅನುಮೋದನೆ ನೀಡಿದೆ. ಆದರೆ ಅನೇಕ ಪರೀಕ್ಷೆಗಳು ಬಾಕಿ ಇರುವ ಕಾರಣ ಕಲ್ಯಾಣ ಕರ್ನಾಟಕ ಮಾರ್ಗವಾಗಿ ಸಂಚರಿಸುವ ರೈಲಿನ ವಾಣಿಜ್ಯ ಸಂಚಾರ ತಡವಾಗಿತ್ತು.

ಪ್ರಾಯೋಗಿಕ ಸಂಚಾರಕ್ಕೆ ಸಜ್ಜು

ಅತ್ಯಾಧುನಿಕ ವ್ಯವಸ್ಥೆ, ಮೂಲಸೌಕರ್ಯ ಒಳಗೊಂಡ ಸ್ಲೀಪರ್ ವಂದೇ ಭಾರತ್ ರೈಲನ್ನು ಬೆಂಗಳೂರಿನ BEML ಕಂಪನಿ ತಯಾರಿಸಿದೆ. ಸಂಶೋಧಾನ ವಿನ್ಯಾಸ ಮತ್ತು ಗುಣಮಟ್ಟ ಸಂಸ್ಥೆ (RDSO) ವೇಗ ಪ್ರಯೋಗಗಳಿಗೆ ಅನುಕೂಲವಾಗುವಂತೆ ತಿಳಿಸಿದ ಮಾರ್ಗದಲ್ಲಿ ಪ್ರಾಯೋಗಿಕ ಸಂಚಾರ ಇನ್ನೇನು ಕೆಲವೇ ದಿನಗಳಲ್ಲಿ ನಡೆಸಲು ಅಧಿಕಾರಿಗಳು ಸಜ್ಜಾಗಿದ್ದಾರೆ. ಈ ರೈಲನ್ನು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ಅಥವಾ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಇಲ್ಲಿಂದ ಓಡಿಸಬೇಕೆ ಎಂಬುದನ್ನು ತಿಳಿಸಲಾಗುವುದು ಎಂದು ಸಿಂಗ್ ಹೇಳಿದ್ದಾರೆ.

16 ಗಂಟೆಯಲ್ಲೆ ಮುಂಬೈ ರೀಚ್

ಬೆಂಗಳೂರಿನಿಂದ ಮುಂಬೈಗೆ ಇರುವ ಲೋಕಮಾನ್ಯ ತಿಲಕ್ ಹಾಗೂ ಉದ್ಯಾನ್ ಎಕ್ಸ್‌ಪ್ರೆಸ್ ರೈಲುಗಳು ಬರೋಬ್ಬರಿ 22 ಗಂಟೆಗಳ ಸಮಯ ತೆಗೆದುಕೊಳ್ಳುತ್ತವೆ. ಆದರೆ ಈ ಸ್ಲೀಪರ್ ವಂದೇ ಭಾರತ್ ರೈಲು ಸುಮಾರು 16 ಗಂಟೆಯಲ್ಲಿ ಸಂಚಾರ ಮಾಡುತ್ತದೆ. ಇದರಿಂದ ಎರಡು ರಾಜ್ಯಗಳ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಸಮಯ ಉಳಿತಾಯದ ಜೊತೆಗೆ ಅತ್ಯುತ್ತಮ ದರ್ಜೆಯ ರೈಲು ಸಾರಿಗೆ ಸಿಕ್ಕಂತಾಗುತ್ತದೆ. ವಿಮಾನಯಾನಕ್ಕೆ ಹೋಲಿಸಿದರೆ ಅತ್ಯಂತ ಕಡಿಮೆ ದರದಲ್ಲಿ ಈ ರೈಲು ಸೇವೆ ಪಡೆಯಬಹುದಾಗಿದೆ.

ಒಟ್ಟು 16 ಬೋಗಿಗಳ ಈ ರೈಲಿನಲ್ಲಿ 11 3ಎಸಿ, ನಾಲ್ಕು 2ಎಸಿ ಹಾಗೂ ಒಂದು 1ಎಸಿ ಬೋಗಿಗಳಿವೆ. 3ಎಸಿ ಬೋಗಿಗಳಲ್ಲಿ ಒಬ್ಬರು ಊಟ ಸಹಿತ ಪ್ರಯಾಣಿಸಲು ಟಿಕೆಟ್ ದರವನ್ನು 3,000 ರೂಪಾಯಿ ನಿಗದಿಪಡಿಸಲಾಗಿದೆ. ಬೆಂಗಳೂರು ಮತ್ತು ಮುಂಬೈ ನಿಲ್ದಾಣಗಳಿಂದ ರಾತ್ರಿ ಹೊರಡುವ ಈ ಸ್ಲೀಪರ್ ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರ ಪೂರ್ಣಗೊಳ್ಳುತ್ತಿದ್ದಂತೆ ರೈಲ್ವೆ ಅಧಿಕಾರಿಗಳು ಸಂಚಾರದ ಸಮಯ, ನಿಲುಗಡೆ ಕುರಿತು ಅಧಿಕೃತ ವೆಳಾಪಟ್ಟಿ ಪ್ರಕಟಿಸಲಿದ್ದಾರೆ.

ಹಾವೇರಿ, ಹುಬ್ಬಳ್ಳಿ ಮಾರ್ಗದಲ್ಲಿ ಸಂಚಾರಕ್ಕೆ ಬೇಡಿಕೆ?

ಗಂಟೆಗೆ 130 ಕಿಲೋ ಮೀಟರ್ ವೇಗದಲ್ಲಿ ಸಂಚಾರ ಮಾಡುವ 'ವಿಬಿ' ಸ್ಲೀಪರ್ ರೈಲನ್ನು ಬೆಂಗಳೂರಿನಿಂದ ಹಾವೇರಿ, ಹುಬ್ಬಳ್ಳಿ ಮುಖೇನ ಓಡಿಸಲು ಸಾಮಾಜಿಕ ಕಾರ್ಯಕರ್ತರು, ಕೆಲವು ಜನಪ್ರತಿನಿಧಿಗಳು ಒತ್ತಾಯಿಸಿದ್ದರು. ಈ ಮಾರ್ಗ ಕೊಂಚ ದೂರವಾಗುವುದರಿಂದ ಹಾಗೂ ಹಾಲಿ ಎಕ್ಸ್‌ಪ್ರೆಸ್ ರೈಲುಗಳ ಈ ಮಾರ್ಗದಲ್ಲಿ ಸಂಚಾರ ಮಾಡುವ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆಯು ಬೆಂಗಳೂರಿನಿಂದ ಆಂಧ್ರ ಗಡಿ ಮಾರ್ಗವಾಗಿ ರಾಜ್ಯದ ಕಲಬುರಗಿ, ಬೀದರ್, ರಾಯಚೂರು ಮಾರ್ಗವಾಗಿ ಕಾರ್ಯಾಚರಣೆ ಮಾಡಲು ಪ್ಲ್ಯಾನ್ ಮಾಡಿಕೊಂಡಿದೆ.

ಬೆಂಗಳೂರು ಒಳಗೆ ಬರಲ್ಲವಾ 'ವಿಬಿ ಸ್ಲೀಪರ್' ರೈಲು?

ಒಂದು ವೇಳೆ ಈ ರೈಲು ಕಲಬುರಗಿ ಮಾರ್ಗವಾಗಿ SMVT ಟರ್ಮಿನಲ್ ರೈಲು ನಿಲ್ದಾಣದಿಂದ ಮುಂಬೈಗೆ ಕಾರ್ಯಾಚರಣೆ ಆರಂಭಿಸಿದ್ದೇ ಆದಲ್ಲಿ ಬೆಂಗಳೂರಿನ ಒಳಕ್ಕೆ ಈ ರೈಲು ಪ್ರವೇಶಿಸುವುದೇ ಇಲ್ಲ. ನಗರದ ಪ್ರಯಾಣಿಕರು ಎಸ್‌ಎಂವಿಟಿ ರೈಲು ನಿಲ್ದಾಣಕ್ಕೆ ತೆರಳಬೇಕಾದ ಅನಿವಾರ್ಯತೆ ಉಂಟಾಗಲಿದೆ, ಇದರಿಂದ ಪ್ರಯಾಣಿಕರಿಗೆ ತೊಂದರೆ ಆಗಲೂ ಬಹುದೆಂಬ ಮಾತುಗಳು ಕೇಳಿ ಬಂದಿವೆ. ಇದಕ್ಕೆಲ್ಲ ಶೀಘ್ರವೇ ಉತ್ತರ ಸಿಬಹುದು ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+