ಬೆಂಗಳೂರು–ಮುಂಬೈ ವಂದೇ ಭಾರತ್ ಸ್ಲೀಪರ್ ಶೀಘ್ರದಲ್ಲೇ ಆರಂಭ: ಪ್ರತಿದಿನ ಸೇವೆ, ಫಸ್ಟ್ ಎಸಿ ಕೋಚ್‌ಗೆ ಲಕ್ಸುರಿ ಟಚ್!

ಬೆಂಗಳೂರು ಮತ್ತು ಮುಂಬೈ ನಡುವಿನ ಬಹುನಿರೀಕ್ಷಿತ ವಂದೇ ಭಾರತ್ ಸ್ಲೀಪರ್ ರೈಲು ಸೇವೆ ಆರಂಭಕ್ಕೆ ಅಗತ್ಯವಿರುವ ಎಲ್ಲಾ ಸಿದ್ಧತೆಗಳು ಅಂತಿಮ ಹಂತದಲ್ಲಿವೆ. ರೈಲ್ವೆ ಇಲಾಖೆ ಶೀಘ್ರದಲ್ಲೇ ಅಧಿಕೃತ ವೇಳಾಪಟ್ಟಿ ಪ್ರಕಟಿಸುವ ಸಾಧ್ಯತೆ ಇದ್ದು, ಈ ರೈಲು ಆರಂಭವಾದರೆ ದೇಶದ ಎರಡು ಪ್ರಮುಖ ವಾಣಿಜ್ಯ ನಗರಗಳ ನಡುವಿನ ರಾತ್ರಿ ಪ್ರಯಾಣಕ್ಕೆ ಹೊಸ ಆಯಾಮ ಸಿಗಲಿದೆ.

ಈ ಹಿಂದೆ ವಾರದಲ್ಲಿ ಮೂರು ದಿನಗಳ ಸೇವೆ ನೀಡುವ ಕುರಿತು ಚರ್ಚೆಯಾಗಿದ್ದರೂ, ಇದೀಗ ಈ ರೈಲು ಪ್ರತಿದಿನ ಸಂಚಾರ ನಡೆಸುವ ಸಾಧ್ಯತೆ ಇದೆ. ಈಗಾಗಲೇ ಸ್ಲೀಪರ್ ಕೋಚ್ ರೈಲಿನ ತಯಾರಿಕಾ ಕಾರ್ಯ ಸಂಪೂರ್ಣಗೊಂಡಿದ್ದು, ಪ್ರಯಾಣಿಕರ ಸೇವೆ ಆರಂಭಿಸಲು ಅಂತಿಮ ಹಂತದ ಪ್ರಕ್ರಿಯೆಗಳು ನಡೆಯುತ್ತಿವೆ.

Bengaluru Mumbai Vande Bharat Sleeper

14-16 ಗಂಟೆಗಳಲ್ಲಿ ಮುಂಬೈ ತಲುಪುವ ಅವಕಾಶ

ಬೆಂಗಳೂರು-ಮುಂಬೈ ನಡುವೆ ಚಲಿಸುವ ವಂದೇ ಭಾರತ್ ಸ್ಲೀಪರ್ ರೈಲು ಕಲಬುರಗಿ ಮಾರ್ಗವಾಗಿ ಸಂಚರಿಸಲಿದ್ದು, ಸುಮಾರು 14 ರಿಂದ 16 ಗಂಟೆ ಪ್ರಯಾಣ ಸಮಯ ತೆಗೆದುಕೊಳ್ಳುವ ನಿರೀಕ್ಷೆಯಿದೆ. ಇದರಿಂದ ಉತ್ತರ ಕರ್ನಾಟಕ ಭಾಗದ ಪ್ರಯಾಣಿಕರಿಗೂ ಹೆಚ್ಚಿನ ಅನುಕೂಲವಾಗಲಿದೆ.

ಪ್ರಾರಂಭ ಹಂತದಲ್ಲಿ ಒಟ್ಟು 16 ಬೋಗಿಗಳ ರೈಲು ಸೇವೆ ದೊರೆಯಲಿದೆ, ಇದರಲ್ಲಿ 1 ಎಸಿ, 2 ಎಸಿ ಮತ್ತು 3 ಎಸಿ ವರ್ಗದ ಕೋಚ್‌ಗಳು ಇರಲಿವೆ. ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ಮುಂದಿನ ದಿನಗಳಲ್ಲಿ ಬೋಗಿಯ ಸಂಖ್ಯೆ ಹೆಚ್ಚಿಸುವ ಸಾಧ್ಯತೆಯೂ ಇದೆ.

ಫಸ್ಟ್ ಎಸಿ ಕೋಚ್‌ಗೆ ಐಷಾರಾಮಿ ಸ್ಪರ್ಶ

ಏನಿದರ ವಿಶೇಷ: ವಂದೇ ಭಾರತ್ ಸ್ಲೀಪರ್ ರೈಲಿನ ಫಸ್ಟ್ ಎಸಿ ಕೋಚ್್ನ ಒಳಾಂಗಣ ವಿನ್ಯಾಸದ ಅದ್ಬುತ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಐಷರಾಮಿ ವಿನ್ಯಾಸ: ಯೂಟ್ಯೂಬ್್ನಲ್ಲಿ ಲಕ್ಷಾಂತರ ವೀಕ್ಷಣೆ ಪಡೆದಿರುವ ಈ ವೀಡಿಯೂದಲ್ಲಿನ ಸೌಕರ್ಯಗಳನ್ನು ಕಂಡು ನೆಟ್ಟಿಗರು ಇದನ್ನು "ಚಕ್ರಗಳ ಮೇಲಿನ ಐಷಾರಾಮಿ ಹೋಟೆಲ್" ಎನ್ನುತ್ತಿದ್ದಾರೆ.

ಪ್ರಯಾಣಿಕರಿಗೆ ಅತ್ಯಾಧುನಿಕ ಸೌಲಭ್ಯ

ಹೊಸ ವಂದೇ ಭಾರತ್ ಸ್ಲೀಪರ್ ರೈಲಿನಲ್ಲಿ ಮಲಗುವ ವ್ಯವಸ್ಥೆಯ ಜೊತೆಗೆ ಸುಧಾರಿತ ಶೌಚಾಲಯಗಳು, ಡಿಜಿಟಲ್ ಮಾಹಿತಿ ಪ್ರದರ್ಶನ ವ್ಯವಸ್ಥೆ, ಸಿಸಿಟಿವಿ ಆಧಾರಿತ ಭದ್ರತೆ ಹಾಗೂ ಆಧುನಿಕ ತಂತ್ರಜ್ಞಾನ ಆಧಾರಿತ ಹಲವು ಸೌಲಭ್ಯಗಳು ಇರಲಿವೆ ಎಂದು ತಿಳಿದುಬಂದಿದೆ.

ಈವರೆಗೆ ಕಡಿಮೆ ದೂರದ ಪ್ರಯಾಣಗಳಿಗೆ ಚೇರ್ ಕಾರ್ ಮಾದರಿಯಲ್ಲಿ ಸಂಚರಿಸುತ್ತಿದ್ದ ವಂದೇ ಭಾರತ್ ರೈಲುಗಳು, ಇದೀಗ ಸ್ಲೀಪರ್ ಆವೃತ್ತಿಯ ಮೂಲಕ ದೂರದ ರಾತ್ರಿ ಪ್ರಯಾಣಕ್ಕೂ ಕಾಲಿಡುತ್ತಿವೆ. ಮುಂಬೈ-ಬೆಂಗಳೂರು ಮಾರ್ಗದಲ್ಲಿ ಈ ಸೇವೆ ಆರಂಭವಾದರೆ ವೇಗ, ಸುರಕ್ಷತೆ ಮತ್ತು ಆರಾಮದಾಯಕ ಪ್ರಯಾಣದ ಹೊಸ ಅನುಭವವನ್ನು ಪ್ರಯಾಣಿಕರು ಪಡೆಯಲಿದ್ದಾರೆ.

ಸೇವೆಯ ಆರಂಭದ ದಿನಾಂಕ, ಟಿಕೆಟ್ ದರ ರೈಲ್ವೆ ಇಲಾಖೆ ಅಧಿಕೃತ ಘೋಷಣೆ ಇನ್ನಷ್ಟೇ ಮಾಡಬೇಕಿದೆ, ಫಸ್ಟ್ ಎಸಿ ಕೋಚ್‌ನ ಮೊದಲ ನೋಟವೇ ಪ್ರಯಾಣಿಕರಲ್ಲಿ ಭಾರೀ ನಿರೀಕ್ಷೆ ಮೂಡಿಸಿದೆ. ಭಾರತೀಯ ರೈಲ್ವೆಯ ದೀರ್ಘದೂರದ ಪ್ರಯಾಣದ ಚಿತ್ರಣವನ್ನು ಬದಲಾಯಿಸುವ ಮಹತ್ವದ ಹೆಜ್ಜೆಯಾಗಿ ಈ ವಂದೇ ಭಾರತ್ ಸ್ಲೀಪರ್ ರೈಲು ಗಮನ ಸೆಳೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+