Airport: ತಮಿಳುನಾಡಿನಲ್ಲಿ ಒಂದಲ್ಲ.. ಎರಡು ವಿಮಾನ ನಿಲ್ದಾಣ ನಿರ್ಮಾಣ!
ಕರ್ನಾಟಕಕ್ಕೆ ಟಾಂಗ್ ಕೊಡುವುದಕ್ಕೆ ತಮಿಳುನಾಡು ಸರ್ಕಾರ ಮುಂದಾಗಿತ್ತು. ಬೆಂಗಳೂರಿನಲ್ಲಿ ಬೆಳೆಯುತ್ತಿರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪರ್ಯಾಯವಾಗಿ ಹೊಸೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದಕ್ಕೆ ತಮಿಳುನಾಡು ಸರ್ಕಾರ ಈಗಾಗಲೇ ಪ್ಲಾನ್ ಮಾಡಿಕೊಂಡಿದೆ. ಆದರೆ, ಹೊಸೂರಿನಲ್ಲಿ ಮಾತ್ರವಲ್ಲ ತಮಿಳುನಾಡಿನಲ್ಲಿ ಮತ್ತೊಂದು ಕಡೆಯೂ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ತಲೆ ಎತ್ತುತ್ತಿದೆ. ಹೌದು ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಭರ್ಜರಿ ರೆಸ್ಪಾನ್ಸ್ ಬರುತ್ತಿರುವ ಬೆನ್ನಲ್ಲೇ ಎರಡನೇ ವಿಮಾನ ನಿಲ್ದಾಣದ ಅವಶ್ಯಕತೆ ಇದೆ ಎನ್ನುವ ಬಗ್ಗೆ ಚರ್ಚೆಯಾಗಿತ್ತು. ಈಗಾಗಲೇ ಬೆಂಗಳೂರಿನಲ್ಲಿ ಎರಡನೇ ವಿಮಾನ ನಿಲ್ದಾಣ ನಿರ್ಮಾಣ ಮಾಡುವ ಬಗ್ಗೆ ಭಾರೀ ಚರ್ಚೆ ನಡೆದಿದೆ. ಈ ನಡುವೆ ತಮಿಳುನಾಡು ಹೊಸೂರಿನಲ್ಲಿ ಮಾತ್ರವಲ್ಲ. ಎರಡು ವಿಮಾನ ನಿಲ್ದಾಣ ನಿರ್ಮಾಣ ಮಾಡುವುದಕ್ಕೆ ಮುಂದಾಗಿದೆ. ಅದೇನು ಎನ್ನುವ ವಿವರ ಇಲ್ಲಿದೆ.
ತಮಿಳುನಾಡು ಸರ್ಕಾರವು ಹೊಸೂರಿನಲ್ಲಿ ಮಾತ್ರವಲ್ಲ ತಮಿಳುನಾಡಿನಲ್ಲಿ ಮತ್ತೊಂದು ಕಡೆಯೂ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದಕ್ಕೆ ಭರ್ಜರಿ ಪ್ಲಾನ್ ಮಾಡಿಕೊಳ್ಳುತ್ತಿದೆ. ಬೆಂಗಳೂರಿನಿಂದ ಕೆಲವೇ ಕಿ.ಮೀ ದೂರದಲ್ಲಿ ಇರುವ ಹೊಸೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದಕ್ಕೆ ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದರ ನಡುವೆ ತಮಿಳುನಾಡಿನ ಪರಂದೂರು ವಿಮಾನ ನಿಲ್ದಾಣಕ್ಕೂ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದಿಂದ ಅನುಮೋದನೆ ಪಡೆದುಕೊಳ್ಳುವುದಕ್ಕೆ ತಮಿಳುನಾಡು ಸರ್ಕಾರ ಮುಂದಾಗಿದೆ. ಈ ವಿಮಾನ ನಿಲ್ದಾಣದ ನಿರ್ಮಾಣ ಹಾಗೂ ಇದರ ಉದ್ದೇಶವೇನು ಎನ್ನುವುದನ್ನು ನೋಡೋಣ...

ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಅಭಿವೃದ್ಧಿಯಾಗುತ್ತಿದೆ. ಈ ವಿಮಾನ ನಿಲ್ದಾಣದ ಮೇಲೆ ಮುಂದಿನ ದಿನಗಳಲ್ಲಿ ಒತ್ತಡ ಬೀಳಲಿದೆ ಎನ್ನುವ ಕಾರಣಕ್ಕೆ ಬೆಂಗಳೂರಿನ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡಲಾಗುತ್ತಿದೆ. ಈ ರೀತಿ ಇರುವಾಗಲೇ ತಮಿಳುನಾಡು ಹೊಸೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದಕ್ಕೆ ಮುಂದೆ ಬಂದಿತ್ತು. ಇದೀಗ ಪರಂದೂರಲ್ಲೂ ವಿಮಾನ ನಿಲ್ದಾಣದ ಸಿದ್ಧತೆ ಜೋರಾಗಿರುವುದು ವರದಿಯಾಗಿದೆ.
ಪರಂದೂರು ಚೆನ್ನೈನ ಎರಡನೇ ವಿಮಾನ ನಿಲ್ದಾಣ: ಪರಂದೂರು ತಮಿಳುನಾಡಿನ ಕಾಂಚೀಪುರಂ ಜಿಲ್ಲೆಗೆ ಸಮೀಪದಲ್ಲಿದೆ. ಈಗ ತಮಿಳುನಾಡಿನ ರಾಜಧಾನಿ ಚೆನ್ನೈನ ವಿಮಾನ ನಿಲ್ದಾಣದ ಪರಿಸ್ಥಿತಿಯೂ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ರೀತಿಯಲ್ಲೇ ಇದೆ ಎಂದು ಹೇಳಲಾಗಿದೆ. ಚೆನ್ನೈನ ವಿಮಾನ ನಿಲ್ದಾಣದ ಮೇಲೂ ಒತ್ತಡ ಹೆಚ್ಚಾಗಲಿದ್ದು. ಭವಿಷ್ಯದ ದೃಷ್ಟಿಯಿಂದ ಹಾಗೂ ಎರಡನೇ ವಿಮಾನ ನಿಲ್ದಾಣವಾಗಿ ಪರಂದೂರು ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸುವುದಕ್ಕೆ ತಮಿಳುನಾಡು ಸರ್ಕಾರ ನಿರ್ಧರಿಸಿರುವುದು ವರದಿಯಾಗಿದೆ.
ಇನ್ನು ಈ ವಿಮಾನ ನಿಲ್ದಾಣವು ಚೆನ್ನೈನಿಂದ 60 ಕಿ.ಮೀ ದೂರದಲ್ಲಿ ಹಾಗೂ ಚೆನ್ನೈನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಂದಾಜು 70 ಕಿ.ಮೀ ದೂರದಲ್ಲಿ ಇದೆ. ಇದರಲ್ಲಿ ಎರಡು ರನ್‌ವೇ ಹಾಗೂ ಟರ್ಮಿನಲ್‌ಗಳು ಇವೆ. ಅಲ್ಲದೆ ಹಲವು ಸೇವೆಗಳು ಇರಲಿವೆ.
ರಿಯಲ್ ಎಸ್ಟೇಟ್‌ಗೆ ಧಮಾಕ: ಇನ್ನು ಈ ವಿಮಾನ ನಿಲ್ದಾಣದಿಂದ ಚೆನ್ನೈನಲ್ಲಿ ರಿಯಲ್ ಎಸ್ಟೇಟ್‌ಗೆ ಧಮಾಕ ಆಗಲಿದೆ ಎಂದು ಹೇಳಲಾಗಿದೆ. ಯಾಕೆಂದರೆ ಚೆನ್ನೈನಲ್ಲಿ ಈಗಾಗಲೇ ಭೂಮಿಗೆ ಚಿನ್ನದ ಬೆಲೆ ಇದೆ. ಇನ್ನು ಎರಡೆರಡು ವಿಮಾನ ನಿಲ್ದಾಣ ಇರುವುದರಿಂದ (ಈಗಾಗಲೇ ಒಂದು ಇದೆ ಇನ್ನೊಂದು ನಿರ್ಮಾಣವಾಗಲಿದೆ) ರಿಯಲ್ ಎಸ್ಟೇಟ್‌ಗೆ ಬಂಪರ್ ಅಂತಲೇ ನಿರೀಕ್ಷೆ ಮಾಡಲಾಗುತ್ತಿದೆ.
ತಮಿಳುನಾಡಿನ ಈ ವಿಮಾನ ನಿಲ್ದಾಣದಿಂದ ಬೆಂಗಳೂರು ವಿಮಾನ ನಿಲ್ದಾಣದ ಮೇಲೆ ಏನಾದರೂ ಪರಿಣಾಮ ಬೀರುವ ಸಾಧ್ಯತೆ ಕಡಿಮೆ ಅಂತಲೇ ಹೇಳಲಾಗುತ್ತಿದೆ. ಆದರೆ ತಮಿಳುನಾಡು ವಿಮಾನ ನಿಲ್ದಾಣ ನಿರ್ಮಾಣ ವಿಷಯದಲ್ಲಿ ಕರ್ನಾಟಕಕ್ಕೆ ಪೈಪೋಟಿ ನೀಡುತ್ತಿರುವುದಂತೂ ನಿಜ.
ತಮಿಳುನಾಡು ಟಕ್ಕರ್ ಪ್ಲಾನ್: ತಮಿಳುನಾಡಿನ ಟಕ್ಕರ್ ಪ್ಲಾನ್‌ಗಳನ್ನು ಮಾಡುತ್ತಿದೆ. ಇದಕ್ಕೆ ಕರ್ನಾಟಕ ಸರ್ಕಾರ ಯಾವ ರೀತಿ ರಿಯಾಕ್ಟ್ ಮಾಡಲಿದೆ ಎನ್ನುವುದು ಈಗ ಇರುವ ಕುತೂಹಲವಾಗಿದೆ.












Click it and Unblock the Notifications