ಭಾರತದಲ್ಲಿ 22,272 ಹೊಸ ಕೋವಿಡ್ ಪ್ರಕರಣ ಪತ್ತೆ
ನವದೆಹಲಿ, ಡಿಸೆಂಬರ್ 26: ದೇಶದಲ್ಲಿ ಜೂನ್ ತಿಂಗಳಿನಿಂದ ಇದೇ ಮೊದಲ ಬಾರಿ ಒಂದು ದಿನದಲ್ಲಿ 300ಕ್ಕಿಂತ ಕಡಿಮೆ ಕೊರೊನಾ ವೈರಸ್ ಸಾವು ದಾಖಲಾಗಿದೆ. ಕೊರೊನಾ ನಿಯಂತ್ರಣದ ಪ್ರಯತ್ನದಲ್ಲಿ ಇದು ಗಮನಾರ್ಹ ಸಾಧನೆಯಾಗಿದೆ.
ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 22,272 ಹೊಸ ಕೋವಿಡ್ ಪ್ರಕರಣ ಪತ್ತೆಯಾಗಿವೆ. ದಾಖಲಾದ ಒಟ್ಟು ಪ್ರಕರಣಗಳಿಗಿಂತ ಎರಡು ಹೆಚ್ಚಿನ ಬಿಡುಗಡೆ ವರದಿಯಾಗಿದೆ. ದೇಶದಲ್ಲಿ ಶುಕ್ರವಾರ 251 ಮಂದಿ ಸೋಂಕಿತರು ಸಾವಿಗೀಡಾಗಿದ್ದಾರೆ. ಕಳೆದ ಜೂನ್ ತಿಂಗಳಿನಿಂದ ಇದೇ ಮೊದಲ ಬಾರಿ 300ಕ್ಕಿಂತ ಕಡಿಮೆ ಪ್ರಕರಣ ದಾಖಲಾಗಿದೆ.
ಭಾರತದ ಒಟ್ಟು ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ 1,01,69,118ಕ್ಕೆ ಏರಿಕೆಯಾಗಿದೆ. ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 22,274 ಮಂದಿ ಸೋಂಕಿತರು ಬಿಡುಗಡೆಯಾಗಿದ್ದಾರೆ. ಇದರಿಂದ ಒಟ್ಟು ಬಿಡುಗಡೆಯಾದವರ ಸಂಖ್ಯೆ 97,40,108ಕ್ಕೆ ತಲುಪಿದೆ. ಸಕ್ರಿಯ ಪ್ರಕರಣಗಳು 2,81,667 ಇದ್ದು, ಒಟ್ಟು ಸಾವು 1,47,343ಕ್ಕೆ ಹೆಚ್ಚಳವಾಗಿದೆ.

ದೇಶದಲ್ಲಿ ಡಿಸೆಂಬರ್ 25ರವರೆಗೂ 16,71,59,289 ಮಾದರಿಯನ್ನು ತಪಾಸಣೆಗೆ ಒಳಪಡಿಸಲಾಗಿದೆ. ಶುಕ್ರವಾರ ಒಂದೇ ದಿನ 8,53,527 ಮಂದಿಯನ್ನು ತಪಾಸಣೆಗೆ ಒಳಪಡಿಸಲಾಗಿದೆ.
ದೇಶದ ಒಟ್ಟಾರೆ ಚೇತರಿಕೆ ಪ್ರಮಾಣ ಶೇ 95.77ಕ್ಕೆ ಸುಧಾರಣೆಯಾಗಿದೆ. ಮುಂಬೈನಲ್ಲಿ ಅತಿ ಹೆಚ್ಚು ಸಂಕಷ್ಟಕ್ಕೆ ಒಳಗಾಗಿದ್ದ ಧಾರಾವಿಯಲ್ಲಿ ಕಳೆದ ಎಂಟು ತಿಂಗಳಿನಲ್ಲಿಯೇ ಮೊದಲ ಬಾರಿಗೆ ಒಂದೂ ಪ್ರಕರಣ ದಾಖಲಾಗಿಲ್ಲ.












Click it and Unblock the Notifications