Donald Trump: ಬೋಯಿಂಗ್ ಡೀಲ್ ಕ್ಯಾನ್ಸಲ್, ಟ್ರಂಪ್‌ಗೆ ಶಾಕ್ ಕೊಟ್ಟ ಚೀನಾ!
ಚೀನಾ ಆಕ್ರೋಶದ ಕಹಳೆ ಮೊಳಗಿಸಿದ್ದು, ಏನಾದರೂ ಮಾಡಿ ಅಮೆರಿಕ ಎಂಬ ದೈತ್ಯವಾದ ದೇಶವನ್ನು ಮುಳುಗಿಸುವ ಶಪಥ ಮಾಡಿದೆ. ಚೀನಾ & ಅಮೆರಿಕ ನಡುವೆ ಘೋರ ತೆರಿಗೆಯ ಯುದ್ಧ ಶುರುವಾಗಿದ್ದು, ಒಬ್ಬರ ಮೇಲೆ ಮತ್ತೊಬ್ಬರು ಗುಟುರು ಹಾಕುವ ಸ್ಥಿತಿ ಇದೆ. ಹೀಗೆ ಎರಡೂ ದೇಶಗಳ ನಡುವೆ ಭಾರಿ ದೊಡ್ಡ ಕಾಳಗವೇ ನಡೆಯುತ್ತಿರುವ ಸಮಯದಲ್ಲೇ ಭಾರಿ ಸ್ಫೋಟಕ ನಿರ್ಧಾರಕ್ಕೆ ಚೀನಾ ಇದೀಗ ಮುಂದಾಗಿದೆ.
ಚೀನಾ ಮತ್ತು ಅಮೆರಿಕ ನಡುವೆ ಬಹುದೊಡ್ಡ ವ್ಯಾಪಾರ ನಡೆಯುತ್ತಲೇ ಬಂದಿದ್ದು, ಹೀಗೆ ಎರಡೂ ದೇಶಗಳು ಹಲವು ದಶಕಗಳಿಂದ ಒಪ್ಪಂದದ ವ್ಯಾಪಾರ ನಡೆಸುತ್ತಿವೆ. ಆದರೆ ಟ್ರಂಪ್ ಅಧಿಕಾರಕ್ಕೆ ಬಂದ ನಂತರ ಎಲ್ಲಾ ಉಲ್ಟಾ ಆಗಿದ್ದು, ಚೀನಾ ಹಾಗೂ ಅಮೆರಿಕ ಬಡಿದಾಟ ನಡೆಸಲು ಮುಂದಾಗಿವೆ. ಒಂದು ಕಡೆ ಅಮೆರಿಕ ಹೆಚ್ಚಿನ ತೆರಿಗೆ ಹಾಕುತ್ತಿದೆ ಎಂಬ ಆರೋಪ ಹಿನ್ನೆಲೆ ಇನ್ನೊಂದು ಕಡೆ ಚೀನಾ ಕೂಡ ತನ್ನ ನಿಲುವು ಬಿಗಿ ಮಾಡುತ್ತಿದೆ. ಈಗ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಒಪ್ಪಂದಕ್ಕೆ ಎಳ್ಳು & ನೀರು ಬಿಡಲು ಮುಂದಾಗಿದೆ ಚೀನಾ. ಈ ಮೂಲಕ ಅಮೆರಿಕಗೆ ಮರ್ಮಾಘಾತ ಎದುರಾಗಿದೆ.

ಬೋಯಿಂಗ್ ಡೀಲ್ ಕ್ಯಾನ್ಸಲ್ ಆಯ್ತು!
ಹೌದು, ಚೀನಾ ತನ್ನ ವಿಮಾನಯಾನ ಸಂಸ್ಥೆಗಳಿಗೆ ಮಹತ್ವದ ಸೂಚನೆ ನೀಡಿದೆ. ಹೀಗಾಗಿ ಚೀನಾದ ವಿಮಾನಯಾನ ಸಂಸ್ಥೆಗಳು, ಇನ್ನು ಮುಂದೆ ಅಮೆರಿಕದ ಬೋಯಿಂಗ್ ಮೂಲಕ ಯಾವುದೇ ರೀತಿ ವ್ಯವಹಾರ ನಡೆಸುವುದು ಅನುಮಾನವೇ ಆಗಿದೆ. ಡೊನಾಲ್ಡ್ ಟ್ರಂಪ್ ಅವರು ಚೀನಾ ವಿರುದ್ಧ ಶೇಕಡಾ 145 ರಷ್ಟು ತೆರಿಗೆಯ ಹೇರಿಕೆ ಮಾಡಿದ ನಂತರ ಈ ಬೆಳವಣಿಗೆಯು ನಡೆದಿದೆ. ಚೀನಾ ಈಗಾಗಲೇ ಅಮೆರಿಕ ವಿರುದ್ಧ ಹಲವು ಕಠಿಣ ಕ್ರಮ ಜಾರಿಗೆ ತಂದ ನಂತರ ಇದೀಗ ಬೋಯಿಂಗ್ ಜೊತೆಗಿನ ಡೀಲ್ ಕೂಡ ಕ್ಯಾನ್ಸಲ್ ಆಗುತ್ತಿದೆ.












Click it and Unblock the Notifications