Bank Holidays In April 2023 : ಏಪ್ರಿಲ್ ತಿಂಗಳಿನಲ್ಲಿ 15 ದಿನ ಬ್ಯಾಂಕುಗಳಿಗೆ ರಜೆ, ಇಲ್ಲಿದೆ ರಜಾ ದಿನಗಳ ಪಟ್ಟಿ
ಬೆಂಗಳೂರು, ಮಾರ್ಚ್ 26; ತಿಂಗಳ ಅಂತ್ಯ ಸಮೀಪಿಸುತ್ತಿದ್ದಂತೆಯೇ ಜನರು ಮುಂದಿನ ತಿಂಗಳ ಲೆಕ್ಕಾಚಾರದಲ್ಲಿ ತೊಡಗುತ್ತಾರೆ. ಮಾರ್ಚ್ ಹಣಕಾಸು ವರ್ಷದ ಕೊನೆಯ ತಿಂಗಳು. ಏಪ್ರಿಲ್ 1ರಿಂದ ಹೊಸ ಹಣಕಾಸು ವರ್ಷ ಆರಂಭವಾಗುತ್ತದೆ. ಆದರೆ ಏಪ್ರಿಲ್ 1ರಂದು ಬ್ಯಾಂಕುಗಳಿಗೆ ರಜೆ ಇರುತ್ತದೆ. ಈ ವರ್ಷದ ಏಪ್ರಿಲ್‌ನಲ್ಲಿ ಒಟ್ಟು 15 ದಿನಗಳ ಕಾಲ ಬ್ಯಾಂಕ್ಗಳಿಗೆ ರಜೆ ಇರುತ್ತದೆ. ಬ್ಯಾಂಕುಗಳಿಗೆ ಹೋಗುವ ಮುನ್ನ ಯಾವಾಗ ರಜೆ ಇದೆ ಎಂಬ ಮಾಹಿತಿ ತಿಳಿಯುವುದು ಉತ್ತಮ.
ಸಾಮಾನ್ಯವಾಗಿ ಎಲ್ಲರ ಕೈಯಲ್ಲಿ ಸ್ಮಾರ್ಟ್ ಫೋನ್ ಇದೆ. ನೆಟ್, ಮೊಬೈಲ್ ಬ್ಯಾಂಕಿಂಗ್ ಇದೆ. ಡಿಜಿಟಲ್ ಪೇಮೆಂಟ್ ಬಳಕೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಆದರೆ ಕೆಲವು ಕೆಲಸಗಳಿಗೆ ಬ್ಯಾಂಕುಗಳಿಗೆ ಹೋಗುವುದು ಅನಿವಾರ್ಯವಾಗಿದೆ. ಆದ್ದರಿಂದ ಮುಂದಿನ ತಿಂಗಳಿನಲ್ಲಿ ಯಾವಾಗ ಬ್ಯಾಂಕ್ ರಜೆ ಇರುತ್ತದೆ? ಎಂಬ ಮಾಹಿತಿಯನ್ನು ಪ್ರತಿ ತಿಂಗಳ ಅಂತ್ಯದಲ್ಲಿ ಪಡೆಯಬೇಕು.

ಚೆಕ್, ಡಿಡಿ, ದೊಡ್ಡ ಮೊತ್ತದ ನಗದು ಜಮಾ, ಸಾಲದ ಅರ್ಜಿ ಸಲ್ಲಿಕೆ, ದಾಖಲೆಗಳ ಸಂಗ್ರಹ ಮುಂತಾದ ಸೇವೆಗಳಿಗಾಗಿ ಬ್ಯಾಂಕ್‌ಗಳಿಗೆ ಹೋಗುವುದು ಅನಿವಾರ್ಯವಾಗಿದೆ. ಏಪ್ರಿಲ್ 1ರಂದು ಬ್ಯಾಂಕ್‌ಗಳ ವಾರ್ಷಿಕ ಕ್ಲೋಸಿಂಗ್ ಹಿನ್ನಲೆಯಲ್ಲಿ ರಜೆ ಇರುತ್ತದೆ. ಇದಲ್ಲದೇ ಒಟ್ಟು 15 ದಿನಗಳ ಕಾಲ ಏಪ್ರಿಲ್ ತಿಂಗಳಲ್ಲಿ ಬ್ಯಾಂಕ್ ರಜೆ ಇರುತ್ತದೆ. ತಿಂಗಳ 30 ದಿನದಲ್ಲಿ 15 ದಿನ ಬ್ಯಾಂಕ್ ರಜೆ ಇರುತ್ತದೆ, ಆದ್ದರಿಂದ ಜನರು ಭೇಟಿ ನೀಡುವ ಮುನ್ನ ಈ ಕುರಿತು ಅರಿತಿದ್ದರೆ ಉತ್ತಮ. ಏಪ್ರಿಲ್ ತಿಂಗಳಲ್ಲಿ ಭಾರತದ ಬ್ಯಾಂಕ್ ರಜೆಗಳು, ಕರ್ನಾಟಕದ ಬ್ಯಾಂಕ್ ರಜೆಗಳ ಪಟ್ಟಿ ಇಲ್ಲಿದೆ.
ಏಪ್ರಿಲ್ 1ರ ಶನಿವಾರ ಅಜ್ವಾಲ್, ಶಿಲ್ಲಾಂಗ್, ಶಿಮ್ಲಾ, ಚಂಡೀಗಢ ಹೊರತುಪಡಿಸಿ ಹಣಕಾಸು ವರ್ಷದ ಆರಂಭದ ದಿನವಾದ ಕಾರಣ ದೇಶಾದ್ಯಂತ ಬ್ಯಾಂಕುಗಳಿಗೆ ರಜೆ ಇರುತ್ತದೆ. ಏಪ್ರಿಲ್ 2 ಭಾನುವಾರ ದೇಶಾದ್ಯಂತ ರಜೆ. ಏಪ್ರಿಲ್ 4ರಂದು ಮಹಾವೀರ ಜಯಂತಿ, ಹಲವು ನಗರದಲ್ಲಿ ಬ್ಯಾಂಕ್‌ಗಳು ಮುಚ್ಚಿರುತ್ತವೆ. ಏಪ್ರಿಲ್ 5 ಬಾಬು ಜಗ್‌ಜೀವನ್‌ರಾಮ್ ಜನ್ಮದಿನ, ಹೈದರಾಬಾದ್‌ನಲ್ಲಿ ಬ್ಯಾಂಕ್‌ಗಳಿಗೆ ರಜೆ.

ಏಪ್ರಿಲ್ 7ರಂದು ಗುಡ್‌ಫ್ರೈಡೆ, ಅಗರ್ತಾಲ, ಅಹಮದಾಬಾದ್, ಗೌಹಾತಿ, ಜೈಪುರ, ಜಮ್ಮು, ಶ್ರೀನಗರ ಬಿಟ್ಟು ಬೇರೆ ಕಡೆ ಬ್ಯಾಂಕ್‌ಗಳಿಗೆ ರಜೆ. ಏಪ್ರಿಲ್ 8ರಂದು 2ನೇ ಶನವಾರವಾಗಿದ್ದು, ಬ್ಯಾಂಕ್‌ಗಳು ತೆರೆದಿರುವುದಿಲ್ಲ. ಏಪ್ರಿಲ್ 9ರಂದು ಭಾನುವಾರ ಬ್ಯಾಂಕ್‌ಗಳಿಗೆ ರಜೆ. ಏಪ್ರಿಲ್ 14ರಂದು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ. ಅಜ್ವಾಲ್, ಭೋಪಾಲ್, ನವದೆಹಲಿ, ರಾಯಪುರ, ಶಿಲ್ಲಾಂಗ್, ಶಿಮ್ಲಾ ಹೊರತುಡಿಸಿ ಉಳಿದ ಕಡೆ ಬ್ಯಾಂಕ್ ಬಂದ್ ಆಗಿರುತ್ತದೆ.
ಏಪ್ರಿಲ್ 15ರಂದು ಅಗರ್ತಾಲ, ಗೌಹಾತಿ, ಕೊಚ್ಚಿ, ಕೋಲ್ಕತ್ತಾ, ಶಿಮ್ಲಾ, ತಿರುವನಂತಪುರಂನಲ್ಲಿ ವಿಷು ಹಬ್ಬದ ಪ್ರಯುಕ್ತ ಬ್ಯಾಂಕ್‌ಗಳಿಗೆ ರಜೆ. ಇದೇ ದಿನ ಬೊಹಾಂಗ್ ಬಿಹು, ಹಿಮಾಚಲ ದಿನ, ಬೆಂಗಾಳಿ ಹೊಸ ವರ್ಷದ ಹಿನ್ನಲೆ ಬ್ಯಾಂಕುಗಳು ಬಂದ್. ಏಪ್ರಿಲ್ 16ರಂದು ಭಾನುವಾರ ವಾರದ ರಜೆ ಕಾರಣ ದೇಶಾದ್ಯಂತ ಬ್ಯಾಂಕ್ ಬಂದ್. ಏಪ್ರಿಲ್ 18ರಂದು ಶಾಬ್-ಇ-ಕ್ವಾದ್ರ್, ಜಮ್ಮು ಮತ್ತು ಶ್ರೀನಗರದಲ್ಲಿ ಬ್ಯಾಂಕ್ ಬಾಗಿಲು ಮುಚ್ಚಿರಲಿದೆ.
ಏಪ್ರಿಲ್ 21ರಂದು ಈದ್-ಉಲ್-ಫಿತ್ರ್, ಅಗರ್ತಾಲ, ಜಮ್ಮು, ಕೊಚ್ಚಿ, ಶ್ರೀನಗರ, ತಿರುವನಂತಪುರದಲ್ಲಿ ಬ್ಯಾಂಕುಗಳಿಗೆ ರಜೆ. ಏಪ್ರಿಲ್ 22ರಂದು ಈದ್-ಉಲ್-ಫಿತ್ರ್ ಪ್ರಯುಕ್ತ ಹಲವಾರು ರಾಜ್ಯಗಳಲ್ಲಿ ಬ್ಯಾಂಕ್‌ಗಳಿಗೆ ರಜೆ ಇದೆ. ಅಂದು 2ನೇ ಶನಿವಾರವಾರವೂ ಹೌದು. ಏಪ್ರಿಲ್ 23 ವಾರದ ರಜೆ. ಏಪ್ರಿಲ್ 30 ಭಾನುವಾರ ವಾರದ ರಜೆ ಪ್ರಯುಕ್ತ ಬ್ಯಾಂಕ್ ಬಂದ್.
ಕರ್ನಾಟಕದಲ್ಲಿ ಬ್ಯಾಂಕ್ ರಜೆಗಳ ಪಟ್ಟಿ
* ಏಪ್ರಿಲ್ 1; ಹಣಕಾಸು ವರ್ಷದ ಆರಂಭ ಬ್ಯಾಂಕ್ ರಜೆ
* ಏಪ್ರಿಲ್ 2; ಭಾನುವಾರ, ವಾರದ ರಜೆ
* ಏಪ್ರಿಲ್ 4; ಮಹಾವೀರ ಜಯಂತಿ
* ಏಪ್ರಿಲ್ 7; ಗುಡ್‌ಫ್ರೈಡೆ
* ಏಪ್ರಿಲ್ 8 ; 2ನೇ ಶನಿವಾರ
* ಏಪ್ರಿಲ್ 9 ; ಭಾನುವಾರ
* ಏಪ್ರಿಲ್ 14; ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ
* ಏಪ್ರಿಲ್ 22; ಈದ್-ಉಲ್-ಫಿತ್ರ್, ಎರಡನೇ ಶನಿವಾರ
* ಏಪ್ರಿಲ್ 23; ಭಾನುವಾರ
* ಏಪ್ರಿಲ್ 30; ಭಾನುವಾರ












Click it and Unblock the Notifications