Bank Holiday: ಇಂದು ಬ್ಯಾಂಕ್‌ಗಳು ರಜೆನಾ? or ಓಪನ್ ಇರುತ್ತಾ? ರಜಾದಿನದ ಪಟ್ಟಿ
Bank Holiday Today: ಯಾರೆಲ್ಲ ಇಂದು ತಮ್ಮ ಹಣಕಾಸು ವಹೀವಾಟಿಗಾಗಿ ಹತ್ತಿರದ ಬ್ಯಾಂಕ್ ಗಳಿಗೆ ಭೇಟಿ ನೀಡಲು ಯೋಜಿಸಿದ್ಧೀರಾ ನೀವೆಲ್ಲ ಗಮನಿಸಬೇಕು. ರಾಷ್ಟ್ರೀಯ ರಜಾದಿನಗಳು, ಪ್ರಾದೇಶಿಕ ರಜಾದಿನಗಳಿಂದ ಹಿಡಿದು ಆರ್‌ಬಿಐ ಆದೇಶ ಸೂಚನೆ ಮೇರೆಗೆ ಬಂದ್ ಆಗುವ ಬ್ಯಾಂಕ್‌ಗಳು ವಿವಿಧ ಕಾರಣಗಳಿಗೂ, ಸ್ಥಳೀಯ ಕೆಲವು ವಿಶೇಷ ದಿನಗಳಂದು ಮುಚ್ಚಲ್ಪಡುತ್ತವೆ. ತಿಂಗಳಲ್ಲಿ ನಿರ್ದಿಷ್ಟ ಶನಿವಾರಗಳು ಬ್ಯಾಂಕ್ ಸ್ಥಗಿತಗೊಳ್ಳುತ್ತವೆ. ಹಾಗಾದರೆ ಇಂದು ಜೂಣ್ 14ರಂದು ಶನಿವಾರ ಬ್ಯಾಂಕ್ ತೆರೆದಿರುತ್ತದೆಯೇ? ಇಲ್ಲ ಕ್ಲೋಸ್ ಆಗಿರುತ್ತಾ? ಇಲ್ಲಿದೆ ಮಾಹಿತಿ.
ಸಾಮಾನ್ಯವಾಗಿ ಎರಡನೇ ಮತ್ತು ನಾಲ್ಕನೇ ಶನಿವಾರಗಳಂದು ಸಾರ್ವಜನಿಕ ರಜಾದಿನಗಳಾಗಿರುತ್ತವೆ. ಹೀಗಾಗಿ ಈ ದಿನ ರಾಷ್ಟ್ರೀಕೃತ ಬ್ಯಾಂಕ್‌ಗಳು ವಹೀವಾಟು ಸ್ಥಗಿತಗೊಳಿಸಿರುತ್ತವೆ. ಅಂದು ವಹೀವಾಟು ನಡೆಸುವುದಿಲ್ಲ. ಈ ನಿಗದಿತ ಶನಿವಾರ ಬಿಟ್ಟರೆ ಉಳಿದಂತೆ ಭಾನುವಾರ ರಜಾ ದಿನಗಳಾಗಿರುತ್ತವೆ. ಆರ್‌ಬಿಐ ಮಾರ್ಗಸೂಚಿ ಪ್ರಕಾರ, ದೇಶಾದ್ಯಂತ ಎರಡು ಮತ್ತು ನಾಲ್ಕನೇ ಶನಿವಾರದಂದು ಬ್ಯಾಂಕುಗಳು ಬಂದ್ ಆಗಿರುತ್ತವೆ. ಇದನ್ನು ನೋಡಿಕೊಂಡು ಗ್ರಾಹಕರು ಹಣಕಾಸು ವಹೀವಾಟು ಮಾಡಬೇಕಾಗುತ್ತದೆ.

ಕರ್ನಾಟಕದ ಬೆಂಗಳೂರು ಸೇರಿದಂತೆ ವಿವಿಧೆಡೆ ಎರಡನೇ ಶನಿವಾರ ಬ್ಯಾಂಕ್‌ಗಳು ( ಇಂದು ಜೂನ್ 14) ಬ್ಯಾಂಕ್ ಬಂದ್ ಇವೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದು ಬ್ಯಾಂಕುಗಳು ತೆರೆದಿರುವುದಿಲ್ಲ. 2025 ರ ಈ ಜೂನ್ ತಿಂಗಳ ಬ್ಯಾಂಕ್ ರಜಾದಿನಗಳ ಪೂರ್ಣ ಮಾಹಿತಿ ಇಲ್ಲಿದೆ.
ಜೂನ್ 2025 ರಜಾ ದಿನಗಳ ಪಟ್ಟಿ
ಜೂನ್ 15: ಭಾನುವಾರ
ಜೂನ್ 22: ಭಾನುವಾರ
ಜೂನ್ 27: ಶುಕ್ರವಾರ (ರಥ ಯಾತ್ರೆ/ಕಾಂಗ್ (ರಥಜಾತ್ರ)
ಜೂನ್ 28: ನಾಲ್ಕನೇ ಶನಿವಾರ
ಜೂನ್ 29: ಭಾನುವಾರ
ಜೂನ್ 30: ಸೋಮವಾರ (ರೆಮ್ನಾ ನಿ)
ಬ್ಯಾಂಕ್ ನಲ್ಲಿಹಣಕಾಸು ವಹೀವಾಟು ಮಾಡುವವರು ಸದಾ ಪ್ರಿಪ್ಲಾನ್ ಮಾಡಿಕೊಂಡಿದ್ದರೆ ಒಳಿತು. ಬ್ಯಾಂಕ್‌ಗಳು ಬಂದ್ ಆಗಿದ್ದರು ಸಹಿತ ಡಿಜಿಟಲ್ ಹಣಕಾಸು ವ್ಯವಸ್ಥೆ, ಮೊಬೈಲ್ ಅಪ್ಲಿಕೇಷನ್, ಇಂಟರ್‌ನೆಟ್ ಬ್ಯಾಂಕಿಂಗ್ ಸೇವೆಯಲ್ಲಿ ಯಾವುದೇ ವ್ಯತ್ಯಯ ಇರುವುದಿಲ್ಲ. ಎಟಿಎಂ ಮೂಲಕ ಹಣ ಡ್ರಾ ಮಾಡಲು, ಜಮೆಗೆ ಅವಕಾಶ ಇರುತ್ತದೆ.












Click it and Unblock the Notifications