Bank Holiday: ಇಂದು ಎಲ್ಲ ಬ್ಯಾಂಕ್‌ಗಳಿಗೆ ರಜೆ, ಗ್ರಾಹಕರೇ ಎಚ್ಚರ
Holiday Updates: ಬ್ಯಾಂಕ್‌ಗಳಿಗೆ ಸಾಮಾನ್ಯವಾಗಿ ಭಾನುವಾರ ಹಾಗೂ ನಿಗದಿತ ಶನಿವಾರದಂದು ರಜೆ ಇರುತ್ತದೆ. ಇದೀಗ ಗುರುವಾರವು ರಜೆ ಘೋಷಣೆ ಆಗಿದೆ. ಯಾರದರೂ ಬ್ಯಾಂಕಿಗೆ ಸಂಬಂಧಿಸಿದ ಹಣಕಾಸು ಇತರ ಕೆಲಸು ಕಾರ್ಯಗಳು ಇದ್ದರೇ ಅದು ಪೋಸ್ಟ್ ಪೋನ್ ಆಗಲಿದೆ. ಗುರುವಾರ ಬ್ಯಾಂಕಿಗೆ ಹೋಗಬೇಕು ಎಂದುಕೊಂಡವರು ಈ ಸುದ್ದಿ ಓಡಿ ಮುಂದುವರಿಯುವುದು ಉತ್ತಮ. ಪ್ರತಿ ತಿಂಗಳಂತೆ ಜುಲೈ 2025 ರಲ್ಲೂ ಬ್ಯಾಂಕ್‌ಗಳಿಗೆ ಒಂದಷ್ಟು ರಜೆಗಳು ಸಿಕ್ಕಿವೆ.
ನಾಳೆ ಗುರುವಾರ ಜುಲೈ 3ರಂದು ಬ್ಯಾಂಕ್‌ಗಳಿಗೆ ರಜೆ ಘೋಷಣೆ ಆಗಿದೆ. ಎಲ್ಲಾ ಸರ್ಕಾರಿ ಮತ್ತು ಖಾಸಗಿ ವಲಯದ ಬ್ಯಾಂಕುಗಳು ಜುಲೈ 3ರಂದು ಮುಚ್ಚಲ್ಪಡುತ್ತವೆ. ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಮಾರ್ಗಸೂಚಿಯನ್ವಯ ಇಲ್ಲಿನ ಬ್ಯಾಂಕ್‌ಗಳಿಗೆ ರಜೆ ಘೋಷಣೆ ಮಾಡಿದೆ. ಯಾವ ಕಾರಣಕ್ಕೆ ರಜೆ ಘೋಷಣೆ ಮಾಡಿದೆ. ಎಲ್ಲಿ ಘೋಷಣೆ ಆಗಿದೆ ಎಂಬ ಮಾಹಿತಿ ಇಲ್ಲಿದೆ ನೋಡಿದೆ.

ಜುಲೈ 03ರಂದು ತ್ರಿಪುರದಲ್ಲಿ ಬ್ಯಾಂಕ್‌ಗಳು ಬಂದ್ ಆಗಿರಲಿವೆ. ನಿಮ್ಮ ಹಣಕಾಸಿನ ವ್ಯವಹಾರ, ಇಂದು ಇಲ್ಲವೇ ಶುಕ್ರವಾರಕ್ಕೆ ಮುಂದೂಡಬೇಕಾಗುತ್ತದೆ. ಗುರುವಾರ ತೆರಳುವವರಿಗೆ ಬ್ಯಾಂಕ್ ಬಂದ್ ಎಂಬ ನಾಮಫಲಕ, ಮುಚ್ಚಿದ ಬ್ಯಾಂಕ್ ಗೇಟುಗಳು ಗೋಚರಿಸುತ್ತವೆ. ತ್ರಿಪುರದಲ್ಲಿ ಖಾರ್ಚಿ ಪೂಜೆಯ ಹಬ್ಬವನ್ನು ಗುರುವಾರ ಆಚರಣೆ ಮಾಡಲಾಗುತ್ತದೆ. ಹೀಗಾಗಿ ಪ್ರತಿ ವರ್ಷ ಜುಲೈನಲ್ಲಿ ಈ ಹಬ್ಬ ಸಂಭ್ರಮ, ಸಡಗರದಿಂದ ನಡೆಯುತ್ತದೆ. ಹೀಗಾಗಿ ರಜೆ ಘೋಷಣೆ ಆಗಿದೆ.
'ಚತುರ್ದಶ್ ದೇವತೆ' ಎಂದು ಕರೆಯಲ್ಪಡುವ ತ್ರಿಪುರದ 14 ದೇವತೆಗಳಿಗೆ ಈ ಪೂಜೆ, ಭಕ್ತಿ ಭಾವವನ್ನು ಅರ್ಪಿಸಲಾಗುತ್ತದೆ. ಅಪಾರ ಪ್ರಮಾಣದಲ್ಲಿ ಭಕ್ತರು ಸೇರಲಿದ್ದಾರೆ. ಒಟ್ಟು ಒಂದು ವಾರದ ಈ ಖಾರ್ಚಿ ಪೂಜೆ ನಡೆಯುತ್ತದೆ. ಈ ವೇಳೆ ಭಕ್ತರ ಸೇವೆ, ದೇವತೆಗಳ ಮೆರವಣಿಗೆ ಇನ್ನಿತರ ಕಾರ್ಯಕ್ರಮ ಇರಲಿವೆ. ತ್ರಿಪುರ ರಾಜ್ಯದಲ್ಲಿ ಈ ಹಬ್ಬಕ್ಕೆ ಎಲ್ಲ ಬ್ಯಾಂಕ್‌ಗಳು ಬಂದ್ ಆಗಿರುತ್ತವೆ. ಶುಕ್ರವಾರ ಎಂದಿನಂತೆ ತೆರೆಯಲಿವೆ.
ಪ್ರತಿ ಭಾನುವಾರ ಮತ್ತು ಎರಡನೇ ಹಾಗೂ ನಾಲ್ಕನೇ ಭಾನುವಾರ ಸಹ ಈ ಜುಲೈನಲ್ಲಿ ಒಟ್ಟು 13 ದಿನಗಳ ಕಾಲ ದೇಶದ ಬ್ಯಾಂಕ್‌ಗಳಿಗೆ ರಜೆ ಸಿಕ್ಕಿವೆ. ಪ್ರತಿ ರಾಜ್ಯದಲ್ಲೂ ಅಲ್ಲಿಯ ಬಿನ್ನ ಆಚರಣೆ, ಜಯಂತಿ ಆಧಾರದಲ್ಲಿ ಬ್ಯಾಂಕ್‌ಗಳ ರಜೆ ಘೋಷಿಸಲಾಗಿದೆ. ಜುಲೈ ತಿಂಗಳ ಬ್ಯಾಂಕ್ ರಜೆ ಪಟ್ಟಿ ಇಲ್ಲಿದೆ.
ಬ್ಯಾಂಕ್ ರಜೆ ಜುಲೈ 2025 ಪಟ್ಟಿ
* ಜುಲೈ 3 ಗುರುವಾರ : ತ್ರಿಪುರದಲ್ಲಿ ಬ್ಯಾಂಕ್ ರಜೆ
* ಜುಲೈ 5 ಶನಿವಾರ : ಜಮ್ಮು ಮತ್ತು ಶ್ರೀನಗರದಲ್ಲಿ ಬ್ಯಾಂಕ್‌ಗಳು ಬಂದ್
* ಜುಲೈ 14 ಸೋಮವಾರ : ಮೇಘಾಲಯ ರಾಜ್ಯದಲ್ಲಿ ಬ್ಯಾಂಕ್ ಸ್ಥಗಿತ
* ಜುಲೈ 16 ಬುಧವಾರ : ಉತ್ತರಾಖಂಡದಲ್ಲಿ ರಜೆ
* ಜುಲೈ 17 ಗುರುವಾರ : ಮೇಘಾಲಯದಲ್ಲಿ ಬ್ಯಾಂಕ್‌ಗಳು ಸ್ಥಗಿತ
* ಜುಲೈ 19 ಶನಿವಾರ : ತ್ರಿಪುರದಲ್ಲಿ ಮತ್ತೊಂದು ಪೂಜೆ ಪ್ರಯುಕ್ತ ಬ್ಯಾಂಕ್‌ಗಳಿಗೆ ರಜೆಮುಚ್ಚಲ್ಪಡುತ್ತವೆ.
* ಜುಲೈ 28 ಸೋಮವಾರ : ಸಿಕ್ಕಿಂ ಡ್ರುಕ್ಪಾ ಛೇ-ಜಿ ಹಬ್ಬದ ಕಾರಣ ಬ್ಯಾಂಕ್‌ಗಳು ಸ್ಥಗಿತ
* ಜುಲೈ 13 ಎರಡನೇ ಶನಿವಾರ ಮತ್ತು ಜುಲೈ 27 ನಾಲ್ಕನೇ ಶನಿವಾರ ಭಾರತದಲ್ಲಿ ಎಲ್ಲ ವಿಧದ ಬ್ಯಾಂಕ್‌ಗಳು ರಜೆ. ಬ್ಯಾಂಕ್ ರಜೆಗಳು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಭಿನ್ನವಾಗಿರುತ್ತವೆ. ಸ್ಥಳೀಯ ಆಚರಣೆಗಳ ಮೇಲೆ ಆಯಾ ರಾಜ್ಯಗಳಲ್ಲಿ ಬ್ಯಾಂಕ್ ಬಂದ್ ಆಗಿರುತ್ತವೆ.












Click it and Unblock the Notifications