ಉದ್ಯಾನ ನಗರಿ ಈಗ ಅತಿ ಹೆಚ್ಚು ಮರೆಗುಳಿಗಳ ನಗರ!!

ಉಬರ್ ಸಂಸ್ಥೆಯು, ತನ್ನ ಲಾಸ್ಟ್ ಆ್ಯಡ್ ಫೌಂಡ್ ಎಂಬ ವಿಶೇಷ ಆ್ಯಪ್ ಮೂಲಕ ಉಬರ್ ಸಂಸ್ಥೆಯು ದೇಶದ ಐದು ಮಹಾ ನಗರಗಳಲ್ಲಿ ಈ ಸಮೀಕ್ಷೆಯನ್ನು ನಡೆಸಿತ್ತು.

ಬೆಂಗಳೂರು, ಏಪ್ರಿಲ್ 1: ಖ್ಯಾತ ಟ್ಯಾಕ್ಸಿ ಸೇವಾ ಸಂಸ್ಥೆಯಾದ 'ಉಬರ್' ನಡೆಸಿರುವ ಸಮೀಕ್ಷೆಯೊಂದರಲ್ಲಿ ಬೆಂಗಳೂರು, ಅತ್ಯಧಿಕ ಸಂಖ್ಯೆಯಲ್ಲಿ ಮರೆಗುಳಿತನ ಇರುವವರನ್ನು ಹೊಂದಿರುವ ನಗರ ಎಂದು ಪರಿಗಣಿಸಲ್ಪಟ್ಟಿದೆ.

ತನ್ನ ಲಾಸ್ಟ್ ಆ್ಯಡ್ ಫೌಂಡ್ ಎಂಬ ವಿಶೇಷ ಆ್ಯಪ್ ಮೂಲಕ ಉಬರ್ ಸಂಸ್ಥೆಯು ದೇಶದ ಐದು ಮಹಾ ನಗರಗಳಲ್ಲಿ ಈ ಸಮೀಕ್ಷೆಯನ್ನು ನಡೆಸಿತ್ತು. ಬೆಂಗಳೂರು ಸೇರಿದಂತೆ, ದೆಹಲಿ, ಮುಂಬೈ ಹಾಗೂ ಹೈದರಾಬಾದ್ ಗಳಲ್ಲಿ ಈ ಸರ್ವೆ ನಡೆಸಲಾಗಿತ್ತು.

Bangalore Most, Kolkata Least Forgetful Cities, Says Uber Survey

ಈ ಎಲ್ಲಾ ನಗರಗಳಲ್ಲಿ ಅತಿ ಹೆಚ್ಚು ಮರೆಗುಳಿಗಳು ಇರುವ ನಗರವಾಗಿ ಬೆಂಗಳೂರು ಹೊರಹೊಮ್ಮಿದ್ದರೆ, ಅತಿ ಕಡಿಮೆ ಮರೆಗುಳಿಗಳ ನಗರವಾಗಿ ಕೋಲ್ಕತಾ ಬಿಂಬಿಸಲ್ಪಟ್ಟಿದೆ.

ಅಂದಹಾಗೆ, ಉಬರ್ ಕ್ಯಾಬ್ ಗಳಲ್ಲಿ ಪ್ರಯಾಣಿಸುವವರ ನೆನಪಿನ ಶಕ್ತಿಯನ್ನು ಆಧಾರಿಸಿದ ಸಮೀಕ್ಷೆ ಇದಾಗಿದೆ ಎಂದು ಕಂಪನಿ ಸ್ಪಷ್ಟಪಡಿಸಿದೆ. ಕಳೆದ ವರ್ಷ ನವೆಂಬರ್ ಹಾಗೂ ಡಿಸೆಂಬರ್ ತಿಂಗಳ ಕಾಲಘಟ್ಟದಲ್ಲಿ ಈ ಸಮೀಕ್ಷೆ ನಡೆಸಲಾಗಿತ್ತು ಎಂದು ಉಬರ್ ಹೇಳಿದೆ.

ಸಮೀಕ್ಷಾ ವರದಿಯಂತೆ, ಬೆಂಗಳೂರಿಗರು ಮೊಬೈಲ್, ಕಂಪ್ಯೂಟರ್ ಸಾಮಗ್ರಿಗಳು, ದುಬಾರಿ ಗಡಿಯಾರ, ದುಬಾರಿ ಪಾದರಕ್ಷೆ, ಮದ್ಯದ ಬಾಟಲಿಗಳು, ತರಕಾರಿ ಅಥವಾ ದಿನಸಿ ಬ್ಯಾಗುಗಳನ್ನು ಹೆಚ್ಚಾಗಿ ಬಿಟ್ಟು ಹೋಗಿದ್ದರಂತೆ. ಯಾರೊ ಒಬ್ಬ ಮಹಾಶಯ ತನಗೆ ಮತ್ಯಾರೋ ನೀಡಿದ್ದ 15 ಲಕ್ಷ ರು. ಮೊತ್ತದ ಚೆಕ್ ಅನ್ನೇ ಬೀಳಿಸಿಕೊಂಡು ಹೋಗಿದ್ದನಂತೆ!

(ಚಿತ್ರ ಕೃಪೆ: ಝೀ ನ್ಯೂಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+