ಕಾಶ್ಮೀರದ ಬಂಡಿಪೊರದಲ್ಲಿ ಓರ್ವ ಭಯೋತ್ಪಾದಕ ಬಲಿ
ಬಂಡಿಪೊರ, ಫೆಬ್ರವರಿ 27: ಜಮ್ಮು ಮತ್ತು ಕಾಶ್ಮೀರದ ಬಂಡಿಪೊರ ಜಿಲ್ಲೆಯಲ್ಲಿ ನಿನ್ನೆ(ಫೆ.26) ಭಾರತೀಯ ಸೇನೆ ಮತ್ತು ಭಯೋತ್ಪಾದಕರ ನಡುವೆ ನಡೆದ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದ ಭಯೋತ್ಪಾದಕನೊಬ್ಬ ಇಂದು ಮೃತನಾಗಿದ್ದಾನೆ.
ನಿನ್ನೆ ಸಂಜೆ ಸುಮಾರು 5:15 ರಿಂದ ಭಾರತೀಯ ಸೈನಿಕರ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಲು ಆರಂಭಿಸಿದ್ದರು. ಇಲ್ಲಿನ ಬೋನ್ ಮೊಹಲ್ಲಾ ಎಂಬಲ್ಲಿ ಭಾರತೀಯ ಸೈನಿಕರು ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆ ಆರಂಭಿಸಿದ್ದರು.
ಈ ಸಂದರ್ಭದಲ್ಲಿ ಗಾಯಗೊಂಡಿದ್ದ ಓರ್ವ ಭಯೋತ್ಪಾದಕ ಇಂದು ಬೆಳಿಗ್ಗೆ ಮೃತನಾಗಿದ್ದಾನೆಂದು ಸೇನಾ ಮೂಲಗಳು ತಿಳಿಸಿವೆ.

ಫೆ.10 ರಂದು ಇಲ್ಲಿನ ಸುಜ್ವಾನ್ ಎಂಬಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 6 ಜನ ಭಾರತೀಯ ಸೈನಿಕರು ಮೃತರಾಗಿದ್ದನ್ನು ಇಲ್ಲಿನ ಉಲ್ಲೇಖಿಸಬಹುದು.












Click it and Unblock the Notifications