ಪಾಪುಲರ್ ಫ್ರಂಟ್ ಆಫ್ ಇಂಡಿಯಾ ನಿಷೇಧಕ್ಕೆ ಚಿಂತನೆ?
ನವದೆಹಲಿ, ಅಕ್ಟೋಬರ್ 03: ಪಾಪುಲರ್ ಫ್ರಂಟ್ ಆಫ್ ಇಂಡಿಯಾ ನಿಷೇಧಿಸುವ ಬಗ್ಗೆ ಗೃಹ ಸಚಿವಾಲಯ ಈ ಬಾರಿ ಗಂಭೀರ ಚಿಂತನೆ ನಡೆಸುವ ಸುದ್ದಿ ಬಂದಿದೆ.
ಈ ಬಗ್ಗೆ ಸರಣಿ ಸಭೆಗಳು ಜಾರಿಯಲ್ಲಿದ್ದು, ನಿಷೇಧದ ಪರಿಣಾಮದ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ ಎಂದು ಗೃಹ ಸಚಿವಾಲಯಕ್ಕೆ ರಾಷ್ಟ್ರೀಯ ತನಿಖಾ ಸಂಸ್ಥೆ ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಮೂಲಭೂತವಾದಿ ಇಸ್ಲಾಮಿಕ್ ಸಂಘಟನೆ ಪಾಪುಲರ್ ಫ್ರಂಟ್ ಆಫ್ ಇಂಡಿಯಾ ಮೇಲೆ ಹಿಂದೂ ಪರ ಸಂಘಟನೆಗಳ ಮುಖಂಡರ ಹತ್ಯೆ ಮಾಡಿದ ಆರೋಪವನ್ನು ಎದುರಿಸುತ್ತಿದೆ. ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಆರೆಸ್ಸೆಸ್ ಮುಖಂಡ ಶರತ್ ಹತ್ಯೆ, ಕೇರಳದ ಕಣ್ಣೂರು ಹಾಗೂ ಇತರೆಡೆ ನಡೆದಿರುವ ಹತ್ಯಾ ಸರಣಿಗೂ ಪಿಎಫ್ಐಗೂ ನಂಟಿದೆ ಎಂಬ ಸುದ್ದಿಯಿದೆ. ಈ ಬಗ್ಗೆ ಕೂಡಾ ಪರಿಶೀಲನೆ ಜಾರಿಯಲ್ಲಿದೆ.












Click it and Unblock the Notifications