Chandrayaan-3: ಬಾಹ್ಯಾಕಾಶ ನೌಕೆಯನ್ನು ನಭಕ್ಕೆ ಹಾರಿಸಲಿರುವ ಬಾಹುಬಲಿ LVM-3, ಇದರ ಕಾರ್ಯ ಹೇಗಿದೆ?
ಬೆಂಗಳೂರು, ಜುಲೈ 12: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಚಂದ್ರಯಾನ-3 ಮಿಷನ್‌ನ ಉಡಾವಣೆಗೆ ಎರಡು ದಿನ ಮಾತ್ರವೇ ಬಾಕಿ ಉಳಿದಿದೆ. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬಾಹ್ಯಾಕಾಶ ನೌಕೆಯು ಭಾರತದ ಪ್ರಬಲ ರಾಕೆಟ್ ಲಾಂಚ್ ವೆಹಿಕಲ್ Mk-III (LVM-3) ಮೂಲಕ ನಭಕ್ಕೆ ಜಿಗಿಯಲಿದೆ.
ಬಹುನಿರೀಕ್ಷೆಯ 'ಚಂದ್ರಯಾನ 3' ಇದೇ ಶುಕ್ರವಾರ ಜುಲೈ 14 ರಂದು ಮಧ್ಯಾಹ್ನ 2.35 ಕ್ಕೆ ಉಡಾವಣೆಗೊಳ್ಳಲು ಸಿದ್ಧವಾಗಿದೆ. ಇತ್ತ ಭಾರತೀಯ ಬಾಹ್ಯಾಕಾಶ ಸಂಸ್ಥೆ ಉಡಾವಣಾ ವಾಹನ ಮತ್ತು ಬಾಹ್ಯಾಕಾಶ ನೌಕೆ ಉಡಾವಣಾ ಪ್ಯಾಡ್‌ನಲ್ಲಿ ಯಾವ ರೀತಿ ಸುವ್ಯವಸ್ಥಿತವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಿದ್ದಾರೆ.

LVM-3 ಇದೊಂದು ಹೆವಿ-ಲಿಫ್ಟ್ ಲಾಂಚ್ ವೆಹಿಕಲ್ ಆಗಿದ್ದು, ಇದು ದೊಡ್ಡ ಪೇಲೋಡ್ ಅನ್ನು ಬಾಹ್ಯಾಕಾಶಕ್ಕೆ ಸಾಗಿಸಬಲ್ಲ ಶಕ್ತಿ ಹೊಂದಿದೆ. ಇದಕ್ಕೆ 'ಬಾಹುಬಲಿ' ಎಂದು ಕರೆಯಲಾಗುತ್ತದೆ. ISRO ಈವರೆಗೆ ಅಭಿವೃದ್ಧಿಪಡಿಸಿದ ಅತ್ಯಂತ ಶಕ್ತಿಶಾಲಿ ರಾಕೆಟ್ ಗಳಲ್ಲಿ ಇದು ಅಗ್ರಸ್ಥಾನದಲ್ಲಿದೆ.
ಮೂರು ಹಂತದ ಸಾಮರ್ಥ್ಯದ LVM-3
ರಾಕೆಟ್‌ಗಳ 'ಬಾಹುಬಲಿ' ಎಂದು ಕರೆಯಲ್ಪಡುವ LVM-3 ಮೂರು-ಹಂತದ ಸಾಮರ್ಥ್ಯ ಹೊಂದಿದೆ. ಇದು ಎರಡು ಘನ -ಇಂಧನ ಬೂಸ್ಟರ್‌ಗಳನ್ನು ಒಳಗೊಂಡಿರುತ್ತದೆ. ಈ ಎಲ್‌ವಿಎಂ 3 ಘನ-ಇಂಧನ ಬೂಸ್ಟರ್‌ಗಳು ಆರಂಭಿಕ ಒತ್ತಡವನ್ನು ಒದಗಿಸುತ್ತದೆ. ಆದರೆ ದ್ರವ-ಇಂಧನ ಕೋರ್ ಹಂತವು ರಾಕೆಟ್ ಅನ್ನು ಕಕ್ಷೆಗೆ ಮುಂದೂಡುವಲ್ಲಿ ಒತ್ತಡ ಹಾಕುತ್ತದೆ ಎಂದು ಇಸ್ರೋ ಮಾಹಿತಿ ನೀಡಿದೆ.
ಈ ರಾಕೆಟ್ ಘನ ಸ್ಟ್ರಾಪ್-ಆನ್ ಮೋಟಾರ್‌ಗಳು (S200) ಮತ್ತೊಂದು ಲಿಕ್ವಿಡ್ ಕೋರ್ ಸ್ಟೇಜ್ (L110) 28 ಟನ್‌ಗಳ ಲೋಡಿಂಗ್ ನೊಂದಿಗೆ ಚಾಲನೆಯಾಗಲಿದೆ. LVM-3 ಇದು 640 ಟನ್‌ಗಳ ಲಿಫ್ಟ್-ಆಫ್ ದ್ರವ್ಯರಾಶಿ ಹೊಂದಿದೆ. ಇದು 4,000 ಕಿಲೋಗ್ರಾಂಗಳಷ್ಟು ಪೇಲೋಡ್ ಅನ್ನು ಜಿಯೋಸಿಂಕ್ರೊನಸ್ ಟ್ರಾನ್ಸ್‌ಫರ್ ಆರ್ಬಿಟ್ (GTO) ಅನ್ನು ನಭಕ್ಕೆ ಜಿಗಿಸುವ ಸಾಮರ್ಥ್ಯ ಹೊಂದಿದೆ.

ಮಾನವ ಸಹಿತ ಬಾಹ್ಯಾಕಾಶ ಕಾರ್ಯಾಚರಣೆಗೂ ಬಳಕೆ
ಇಸ್ರೋ ಈಗಾಗಲೇ GSAT-19 ಸಂವಹನ ಉಪಗ್ರಹ, ಆಸ್ಟ್ರೋಸ್ಯಾಟ್ ಖಗೋಳ ಉಪಗ್ರಹ ಹಾಗೂ ಚಂದ್ರಯಾನ-2 ಉಡಾವಣೆ ಸೇರಿದಂತೆ ಹಲವು ವಿಭಿನ್ನ ಉಪಗ್ರಹಗಳನ್ನು ಉಡಾವಣೆಗೆ ಎಲ್‌ವಿಎಂ-3 ಅನ್ನು ಹಿಂದೆ ಬಳಸಲಾಗಿದೆ. ಭಾರತದ ಮೊದಲ ಮಾನವ ಸಹಿತ ಬಾಹ್ಯಾಕಾಶ ಯಾನವಾಗಿರುವ ಗಗನ್ಯಾನ್ ಸಿಬ್ಬಂದಿಯ ಮಿಷನ್ ಅನ್ನು ಪ್ರಾರಂಭಿಸಲು ಸಹ ಇದನ್ನು ಬಳಕೆಗೆ ತೀರ್ಮಾನಿಸಲಾಗಿದೆ.
ರಾಕೆಟ್ ತನ್ನ ಕೋರ್ ಹಾಗೂ ಸ್ಟ್ರಾಪ್-ಆನ್ ಬೂಸ್ಟರ್‌ಗಳಿಗಾಗಿ ದ್ರವ-ಇಂಧನದ ಎಂಜಿನ್‌ಗಳನ್ನು ಬಳಸಿಕೊಂಡು ಕೆಲಸ ಮಾಡುತ್ತದೆ. ಇಸ್ರೋ ಪ್ರಕಾರ, ರಾಕೇಟ್ ಎರಡು ಬೂಸ್ಟರ್‌ಗಳ ಏಕಕಾಲದಲ್ಲಿ ಉರಿಯಲು ಆರಂಭವಾಗುತ್ತದೆ. ನಂತರ ಕೋರ್ ಹಂತ (L110)ವು ರಾಕೇಟ್ ಉಡಾವಣೆಗೊಂಡ 113 ಸೆಕೆಂಡುಗಳಲ್ಲಿ ಒತ್ತಡ ಸೃಷ್ಟಿಸಲು ಆರಂಭಿಸುತ್ತದೆ.
ಒಟ್ಟು 43.5 ಮೀ ಎತ್ತರದ ಮೂರು-ಹಂತದ ಉಡಾವಣಾ ವಾಹನವು GTOನಲ್ಲಿ 4,000 ಕೆಜಿ ತೂಕದ ಸಂವಹನ ಉಪಗ್ರಹ ಉಡಾವಣೆ ಯಶಸ್ವಿಯಾಗುವಲ್ಲಿ ಸಹಾಯ ಮಾಡುತ್ತದೆ. ರಾಕೆಟ್ ಅನ್ನು ಹಿಂದೆ GSLV-MkIII ಎಂದು ಕರೆಯಲಾಗುತ್ತಿತ್ತು. ಇತ್ತೀಚೆಗೆ ಭಾರತೀಯ ಬಾಹ್ಯಾಕಾಶ ಸಂಸ್ಥೆ ಅದನ್ನು LVM-3 ಎಂದು ಮರುನಾಮಕರಣ ಮಾಡಿದ್ದು, ಇದು ಈವರೆಗೆ ಮೂರು ಯಶಸ್ವಿ ಕಾರ್ಯಾಚರಣೆ ಮಾಡಿದೆ.












Click it and Unblock the Notifications