ಶ್ರೀರಾಮಲು 'ಫೊಟೋ ಆಲ್ಬಂ': ಸುಷ್ಮಾ ಸ್ವರಾಜ್‌ಗೆ ಹೀಗೊಂದು ಸಂತಾಪ

ಬೆಂಗಳೂರು, ಆಗಸ್ಟ್ 07 : ಮಾಜಿ ವಿದೇಶಾಂಗ ಸಚಿವೆ, ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ವಿಧಿವಶರಾಗಿದ್ದಾರೆ. ಕರ್ನಾಟಕದೊಂದಿಗೆ ಸುಷ್ಮಾ ಸ್ವರಾಜ್‌ ಉತ್ತಮ ಬಾಂಧವ್ಯ ಹೊಂದಿದ್ದರು. ಮೊಳಕಾಲ್ಮೂರು ಶಾಸಕ ಬಿ. ಶ್ರೀರಾಮುಲು ಸುಷ್ಮಾ ಸ್ವರಾಜ್ ಸಾವಿಗೆ ಕಂಬನಿ ಮಿಡಿದಿದ್ದಾರೆ.

ಸುಷ್ಮಾ ಸ್ವರಾಜ್ (67) ಮಂಗಳವಾರ ರಾತ್ರಿ ದೆಹಲಿಯಲ್ಲಿ ವಿಧಿವಶರಾದರು. ಬಿಜೆಪಿ ನಾಯಕ ಬಿ. ಶ್ರೀರಾಮುಲು ಸುಷ್ಮಾ ಸ್ವರಾಜ್ ನಿಧನಕ್ಕೆ ಸಂತಾಪ ಸೂಚಿಸಿದರು. ಹಳೆಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

"ಮರೆಯಲಾಗದ ಸಾಧನೆ, ವ್ಯಕ್ತಿತ್ವ ಮತ್ತು ನೆನಪುಗಳನ್ನು ಬಿಟ್ಟು ಹೋಗಿರುವ ತಾಯಿ ಸುಷ್ಮಾಜೀಗೆ ನನ್ನ ಕೋಟಿಕೋಟಿ ನಮನಗಳು" ಎಂದು ಫೇಸ್‌ಬುಕ್ ಪುಟದಲ್ಲಿ ಶ್ರೀರಾಮುಲು ಬರೆದಿದ್ದಾರೆ.

"ಮರೆಯಲಾಗದ ಸಾಧನೆ, ವ್ಯಕ್ತಿತ್ವ ಮತ್ತು ನೆನಪುಗಳನ್ನು ಬಿಟ್ಟು ಹೋಗಿರುವ ತಾಯಿ ಸುಷ್ಮಾಜೀಗೆ ನನ್ನ ಕೋಟಿಕೋಟಿ ನಮನಗಳು" ಎಂದು ಫೇಸ್‌ಬುಕ್ ಪುಟದಲ್ಲಿ ಬರೆದಿದ್ದಾರೆ.

ಮಾಜಿ ಸಚಿವರಾದ ಜನಾರ್ದನ ರೆಡ್ಡಿ ಮತ್ತು ಬಿ.ಶ್ರೀರಾಮುಲುಗೆ ಸುಷ್ಮಾ ಸ್ವರಾಜ್ ತಾಯಿ ಸಮಾನವಾಗಿದ್ದರು. ಬಳ್ಳಾರಿಯಲ್ಲಿ ಚುನಾವಣೆಗೆ ನಿಂತು ಸೋಲು ಕಂಡಿದ್ದರು. ಇಬ್ಬರು ನಾಯಕರು ಸುಷ್ಮಾ ಸ್ವರಾಜ್‌ ಬಗ್ಗೆ ಅಪಾರ ಗೌರವ ಹೊಂದಿದ್ದರು.

ಮಾತೃ ಹೃದಯದ ಸುಷ್ಮಾ ಸ್ವರಾಜ್

ಮಾತೃ ಹೃದಯದ ಸುಷ್ಮಾ ಸ್ವರಾಜ್

ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿ ಶಾಸಕ ಬಿ. ಶ್ರೀರಾಮುಲು, "ಭಾರತ ಅನೇಕ ಶ್ರೇಷ್ಠ ನೇತಾರರನ್ನು ಕಂಡಿದೆ, ಆದರೆ, ಮಾತೃ ಹೃದಯದ, ಮಮತೆಯ ವ್ಯಕ್ತಿರೂಪವಾಗಿದ್ದ, ತಾಯಿ ಪ್ರತೀಕವಾಗಿದ್ದ ಸುಷ್ಮಾಜೀ ಅವರಿಗೆ ಸರಿಸಾಟಿಯಾಗಬಲ್ಲವರು ಯಾರೂ ಇಲ್ಲ" ಎಂದು ನೆನಪು ಮಾಡಿಕೊಂಡಿದ್ದಾರೆ.

ಇಂದು ಅನಾಥರಾಗಿದ್ದೇವೆ

ಇಂದು ಅನಾಥರಾಗಿದ್ದೇವೆ

ಬಿ. ಶ್ರೀರಾಮುಲು ತಮ್ಮ ಫೇಸ್‌ ಬುಕ್ ಖಾತೆಯಲ್ಲಿ, "ಇಂದು ಸುಷ್ಮಾಜೀ ಅವರನ್ನು ಕಳೆದುಕೊಂಡು ನಾನು ಮಾತ್ರವಲ್ಲ, ನನ್ನಂಥ ಲಕ್ಷಾಂತರ ಬಿಜೆಪಿ ಕಾರ್ಯಕರ್ತರು ಮಾತೃ ಶೋಕದಲ್ಲಿದ್ದೇವೆ, ಅನಾಥರಾಗಿದ್ದೇವೆ" ಎಂದು ಕಂಬನಿ ಮಿಡಿದಿದ್ದಾರೆ.

ದುಃಖ ಹೇಳಲು ಪದಗಳು ಸಿಗುತ್ತಿಲ್ಲ

ದುಃಖ ಹೇಳಲು ಪದಗಳು ಸಿಗುತ್ತಿಲ್ಲ

ಬಿ. ಶ್ರೀರಾಮುಲು ಸುಷ್ಮಾ ಸ್ವರಾಜ್ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದರು. "ನನ್ನನ್ನು ಸದಾ ಆಶೀರ್ವದಿಸುತ್ತಾ, ಕೈಹಿಡಿದು ನಡೆಸಿದ ತಾಯಿ ಸ್ವರೂಪರು ಇಂದು ನಮ್ಮೊಂದಿಗೆ ಇಲ್ಲ. ದುಃಖವನ್ನು ಹೇಳಲು ಪದಗಳು ಸಿಗುತ್ತಿಲ್ಲ" ಎಂದು ಸಂತಾಪ ಸೂಚಿಸಿದ್ದಾರೆ.

ಕೋಟಿ ಕೋಟಿ ನಮನ

ಕೋಟಿ ಕೋಟಿ ನಮನ

ಬಿ. ಶ್ರೀರಾಮುಲು, "ಇತಿಹಾಸದಲ್ಲಿ ಮರೆಯಲಾಗದ ಸಾಧನೆ, ವ್ಯಕ್ತಿತ್ವ ಮತ್ತು ನೆನಪುಗಳನ್ನು ಬಿಟ್ಟು ಹೋಗಿರುವ ತಾಯಿ ಸುಷ್ಮಾಜೀಗೆ ನನ್ನ ಕೋಟಿ ಕೋಟಿ ನಮನಗಳು. ಅಮ್ಮ, ದೇವರು ನಿಮಗೆ ಸದ್ಗತಿಯನ್ನು ಕೊಡುವುದು ಖಂಡಿತ. ಓಂ ಶಾಂತಿ" ಎಂದು ಬರೆದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+