Maharashtra Assembly Election 2024: ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆ, ಯಾರಿಗೆ ಜಯ
ಮುಂಬೈ, ನವೆಂಬರ್ 21: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ-2024ರ ಮತದಾನ ಬುಧವಾರ ಪೂರ್ಣಗೊಂಡಿದೆ. ಶೇ 65.1 ರಷ್ಟು ಮತದಾನವಾಗಿದೆ. ಮತದಾನದ ಬಳಿಕ ಚುನಾವಣೋತ್ತರ ಸಮೀಕ್ಷೆಗಳು ಪ್ರಕಟವಾಗುತ್ತಿವೆ. ಚುನಾವಣಾ ಫಲಿತಾಂಶ ನವೆಂಬರ್ 23ರ ಶನಿವಾರ ಪ್ರಕಟವಾಗಲಿದೆ. ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 145 ಸೀಟುಗಳು.
ಮಹಾರಾಷ್ಟ್ರ ರಾಜ್ಯದ ವಿಧಾನಸಭೆ ಚುನಾವಣೆ 2024ರ ಕುರಿತು Axis My India ಚುನಾವಣೋತ್ತರ ಸಮೀಕ್ಷೆಯನ್ನು ನಡೆಸಿದೆ. ರಾಜ್ಯದ ಚುನಾವಣಾ ಕಣದಲ್ಲಿ 4,136 ಅಭ್ಯರ್ಥಿಗಳಿದ್ದಾರೆ. ಇವರಲ್ಲಿ 3771 ಪುರುಷ ಅಭ್ಯರ್ಥಿಗಳು, ಮಹಿಳಾ ಅಭ್ಯರ್ಥಿಗಳು 363, ಇತರ ಅಭ್ಯರ್ಥಿಗಳು 2.

ಬಿಜೆಪಿ, ಶಿವಸೇನೆ (ಏಕನಾಥ್ ಶಿಂಧೆ ಬಣ), ಎನ್‌ಸಿಪಿ (ಅಜಿತ್ ಪವಾರ್ ಬಣ) ಸೇರಿರುವ 'ಮಹಾಯುತಿ' ಮೈತ್ರಿಕೂಟ ಮತ್ತು ಕಾಂಗ್ರೆಸ್, ಶಿವಸೇನೆ (ಉದ್ಧವ್ ಠಾಕ್ರೆ ಬಣ), ಎನ್‌ಸಿಪಿ (ಶರದ್ ಪವಾರ್) ನೇತೃತ್ವದ ಪಕ್ಷಗಳ ಮಹಾವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟದ ನಡುವೆ ಚುನಾವಣೆಯಲ್ಲಿ ಪೈಪೋಟಿ ಇದೆ.
Axis My India ಚುನಾವಣೋತ್ತರ ಸಮೀಕ್ಷೆ: ಚುನಾವಣೋತ್ತರ ಸಮೀಕ್ಷೆಯ ಪ್ರಕಾರ ಮಹಾಯತಿ ಮೈತ್ರಿಕೂಟ 178-200, ಎಂವಿಎ 82-102, ವಿಬಿಎ-0 ಮತ್ತು ಇತರರು 6-12 ಸೀಟುಗಳಲ್ಲಿ ಜಯಗಳಿಸಲಿದ್ದಾರೆ. ಮಹಾಯತಿ ಮೈತ್ರಿಕೂಟ ಶೇ 48, ಎಂವಿಎ ಶೇ 37, ವಿಬಿಎ ಶೇ 3 ಮತ್ತು ಇತರರು ಶೇ 12ರಷ್ಟು ಸೀಟುಗಳಲ್ಲಿ ಜಯಗಳಿಸಲಿದ್ದಾರೆ.
ಸಮೀಕ್ಷೆಯ ಪ್ರಕಾರ ಮುಂಬೈ ಭಾಗದ 36 ಸೀಟುಗಳ ಪೈಕಿ ಮಹಾಯತಿ 22, ಎಂವಿಎ 14, ವಿಬಿಎ 0, ಇತರರು 0 ಕ್ಷೇತ್ರಗಳಲ್ಲಿ ಜಯಗಳಿಸಲಿದ್ದಾರೆ. ಮಹಾಯತಿ ಶೇ 45, ಎಂವಿಎ ಶೇ 43, ವಿಬಿಎ ಶೇ 2 ಮತ್ತು ಇತರರು ಶೇ 10ರಷ್ಟು ಮತಗಳನ್ನು ಪಡೆಯಲಿದ್ದಾರೆ.
ಉತ್ತರ ಮಹಾರಾಷ್ಟ್ರದ 47 ಸೀಟುಗಳ ಪೈಕಿ ಮಹಾಯತಿ 38, ಎಂವಿಎ 7, ವಿಬಿಎ 0, ಇತರರು 2 ಸೀಟುಗಳಲ್ಲಿ ಗೆಲ್ಲಲಿದ್ದಾರೆ. ಮಹಾಯತಿ ಶೇ 53, ಎಂವಿಎ 32 ಮತ್ತು ವಿಬಿಎ ಶೇ 2 ಮತ್ತು ಇತರರು ಶೇ 13ರಷ್ಟು ಮತಗಳನ್ನು ಪಡೆಯಲಿದ್ದಾರೆ.
ಪಶ್ಚಿಮ ಮಹಾರಾಷ್ಟ್ರದ 58 ಸೀಟುಗಳಲ್ಲಿ ಮಹಾಯತಿ 36, ಎಂವಿಎ 21, ವಿಬಿಎ 0, ಇತರರು 1 ಸೀಟುಗಳಲ್ಲಿ ಜಯಗಳಿಸಲಿದ್ದಾರೆ. ಮಹಾಯತಿ ಶೇ 48, ಎಂವಿಎ 41, ವಿಬಿಎ 2 ಮತ್ತು ಇತರರು ಶೇ 9ರಷ್ಟು ಮತಗಳನ್ನು ಪಡೆಯಲಿದ್ದಾರೆ.
1/14
— Axis My India (@AxisMyIndia) November 21, 2024
Maharashtra - Exit Poll - Objective, Methodology & Disclaimer#MaharahstraElection2024 #Election2024 #ExitPoll pic.twitter.com/MWACuTyt4e
ಮರಾಠವಾಡ ಪ್ರಾಂತ್ಯದ 46 ಸೀಟುಗಳಲ್ಲಿ ಮಹಾಯತಿ 30, ಎಂವಿಎ 15, ವಿಬಿಎ 0, ಇತರರು 1 ಸೀಟುಗಳಲ್ಲಿ ಜಯಗಳಿಸಲಿದ್ದಾರೆ. ಮಹಾಯತಿ ಶೇ 45, ಎಂವಿಎ 38, ವಿಬಿಎ 5 ಮತ್ತು ಇತರರು ಶೇ 12ರಷ್ಟು ಮತಗಳಿಸಲಿದ್ದಾರೆ.
ಕೊಂಕಣ & ಥಾಣೆ ಪ್ರಾಂತ್ಯದ 39 ಸೀಟುಗಳ ಪೈಕಿ ಮಹಾಯತಿ 24, ಎಂವಿಎ 13, ವಿಬಿಎ 0, ಇತರರು 2 ಸೀಟುಗಳಲ್ಲಿ ಜಯಗಳಿಸಲಿದ್ದಾರೆ. ಮಹಾಯತಿ ಶೇ 50, ಎಂವಿಎ 33, ವಿಬಿಎ 2 ಮತ್ತು ಇತರರು ಶೇ 15ರಷ್ಟು ಮತಗಳಿಸಲಿದ್ದಾರೆ.
ವಿದರ್ಭ ಪ್ರಾಂತ್ಯದ 62 ಸೀಟುಗಳ ಪೈಕಿ ಮಹಾಯತಿ 39, ಎಂವಿಎ 20, ವಿಬಿಎ 0, ಇತರರು 3 ಸೀಟುಗಳಲ್ಲಿ ಜಯಗಳಿಸಲಿದ್ದಾರೆ. ಮಹಾಯತಿ ಶೇ 48, ಎಂವಿಎ 36, ವಿಬಿಎ 3 ಮತ್ತು ಇತರರು ಶೇ 13ರಷ್ಟು ಮತಗಳನ್ನು ಪಡೆಯಲಿದ್ದಾರೆ.
ವಯಸ್ಸಿನವಾರು ಮತಗಳಿಕೆ ಲೆಕ್ಕಾಚಾರದ ಅನ್ವಯ ಮಹಾಯತಿ 48, ಎಂವಿಎ 37, ವಿಬಿಎ 3, ಇತರರು ಶೇ 12ರಷ್ಟು ಮತಗಳನ್ನು ಪಡೆಯಲಿದ್ದಾರೆ. ಮಹಾಯತಿಗೆ 18-25 ವಯೋಮಿತಿಯ ಶೇ 44, 26-35 ಶೇ 47, 36-50 ಶೇ 50, 51-60 ಶೇ 49, 61 ಮತ್ತು ಹೆಚ್ಚಿನ ವಯೋಮಿತಿಯ ಶೇ 47ರಷ್ಟು ಜನರು ಮತ ನೀಡಿದ್ದಾರೆ ಎಂದು ಅಂದಾಜಿಸಲಾಗಿದೆ.
ಎಂವಿಎ ಮೈತ್ರಿಕೂಟಕ್ಕೆ 18-25 ವಯೋಮಿತಿಯ ಶೇ 39, 26-35 ಶೇ 37, 36-50 ಶೇ 35, 51-60 ಶೇ 38, 61 ಮತ್ತು ಹೆಚ್ಚಿನ ವಯೋಮಿತಿಯ ಶೇ 40ರಷ್ಟು ಜನರು ಮತ ನೀಡಿದ್ದಾರೆ ಎಂದು ನಿರೀಕ್ಷೆ ಮಾಡಲಾಗಿದೆ.












Click it and Unblock the Notifications