ವಾಜಪೇಯಿ ಜೀವನಾಧಾರಿತ ಚಿತ್ರ ಶೀಘ್ರ ತೆರೆಗೆ

ನವದೆಹಲಿ, ಆಗಸ್ಟ್ 28: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಕುರಿತು ಚಿತ್ರ ಶೀಘ್ರವೇ ಪರದೆ ಮೇಲೆ ಮೂಡಿಬರಲಿದೆ.

ವಾಜಪೇಯಿ ಅವರ ಜೀವನಾಧಾರಿತ ಚಿತ್ರ ನಿರ್ಮಾಣ ಹಂತದಲ್ಲಿದೆ. ಭಾರತೀಯ ಜನ ಸಂಘ ಸಂಸ್ಥಾಪಕರಲ್ಲೊಬ್ಬರಾಗಿದ್ದ ವಾಜಪೇಯಿ ಅವರು ದೀರ್ಘ ಅನಾರೋಗ್ಯದ ಕಾರಣದಿಂದ 2018ರ ಆಗಸ್ಟ್ 16 ರಂದು ನಿಧನ ಹೊಂದಿದ್ದರು.

ವಾಜಪೇಯಿ ಅವರ ಜೀವನದ ಹಲವಾರು ಸನ್ನಿವೇಶಗಳು ನಿಜಕ್ಕೂ ಸ್ಫೂರ್ತಿದಾಯಕವಾಗಿದೆ. ಈ ವಿಷಯವನ್ನು ಪುಸ್ತಕದಿಂದ ತಿಳಿದುಕೊಂಡು ಅವರ ಕುರಿತ ಚಿತ್ರ ಮಾಡಲು ನಿರ್ಧರಿಸಿದ್ದೇವೆ ಎಂದು ಶರ್ಮಾ ಹೇಳಿದ್ದಾರೆ.

Atal Bihari Vajpayee Life To Hit Big Screen Soon

ಲೇಖಕ ಎನ್‌ಪಿ ಉಲ್ಲೇಖ್ ಅವರು ಬರೆದಿರುವ 'ದಿ ಅನ್‌ಟೋಲ್ಡ್ ವಾಜಪೇಯಿ' ಪುಸ್ತಕದ ಅಧಿಕೃತ ಹಕ್ಕನ್ನು ಪಡೆದುಕೊಂಡಿರುವ ಅಮಾಶ್ ಫಿಲ್ಮ್ಸ್ ಮಾಲೀಕರಾದ ಶಿವಾ ಶರ್ಮಾ ಮತ್ತು ಝೀಶಾನ್ ಅಹಮದ್ ಅವರು, ಅಟಲ್‌ಜೀ ಅವರ ಬಾಲ್ಯ , ಕಾಲೇಜು ಜೀವನ ಹಾಗೂ ರಾಜಕಾರಣಿಯಾಗಿ ರೂಪಾಂತರಗೊಂಡ ಹಲವಾರು ಘಟನೆಗಳ ಕುರಿತು ಸಿನಿಮಾ ಮಾಡಲು ಮುಂದಾಗಿದ್ದಾರೆ. ಈ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರ 'ಪಿಎಂ ನರೇಂದ್ರ ಮೋದಿ' ಚಿತ್ರ ಬಿಡುಗಡೆಯಾಗಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+