ಸಂಸದ, ಶಾಸಕರ ಆಸ್ತಿ ಹೆಚ್ಚಳ, ಐಟಿಯಿಂದ ತನಿಖೆ
ನವದೆಹಲಿ, ಸೆಪ್ಟೆಂಬರ್ 11 : ಏಳು ಲೋಕಸಭಾ ಸದಸ್ಯರು, 98 ಶಾಸಕರ ಆದಾಯ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಈ ಬಗ್ಗೆ ಆದಾಯ ತೆರಿಗೆ ಇಲಾಖೆ ತನಿಖೆ ನಡೆಸಲಿದೆ ಎಂದು ಸಿಬಿಡಿಟಿ ಸುಪ್ರೀಂಕೋರ್ಟ್‌ಗೆ ಮಾಹಿತಿ ನೀಡಿದೆ.
ಕೇಂದ್ರಿಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) 26 ಎಂಪಿಗಳು, 11ರಾಜ್ಯಸಭಾ ಸದಸ್ಯರು, 257 ಶಾಸಕರ ಆಸ್ತಿ ವಿವರ ಸಂಗ್ರಹಣೆ ಮಾಡಿದೆ. ಚುನಾವಣೆ ವೇಳೆ ಸಲ್ಲಿಸಿದ ಪ್ರಮಾಣ ಪತ್ರಕ್ಕಿಂತ ಶಾಸಕರ, ಸಂಸದರ ಆಸ್ತಿ ದುಪಟ್ಟಾಗಿದ್ದು, ಅದರ ಬಗ್ಗೆ ತನಿಖೆ ನಡೆಯಲಿದೆ.

7 ಸಂಸದರ ಆಸ್ತಿ ಹೆಚ್ಚಳ ವಾಗಿರುವ ಕುರಿತು ಮೊದಲು ತನಿಖೆ ನಡೆಯಲಿದೆ. 257 ಶಾಸಕರ ಪೈಕಿ 98 ಶಾಸಕರ ಆಸ್ತಿ ದುಪ್ಪಟ್ಟಾಗಿದೆ. ಮೊದಲ ಹಂತದಲ್ಲಿ 7 ಸಂಸದರು, 98 ಶಾಸಕರ ಆಸ್ತಿಯ ಬಗ್ಗೆ ಆದಾಯ ತೆರಿಗೆ ಇಲಾಖೆ ತನಿಖೆ ನಡೆಸಲಿದೆ.
42 ಶಾಸಕರ ಆಸ್ತಿ ಮೌಲ್ಯದ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಸುಪ್ರೀಂಕೋರ್ಟ್‌ಗೆ ಸಿಬಿಟಿಡಿ ಪ್ರಮಾಣ ಪತ್ರ ಸಲ್ಲಿಸಿದೆ. ಮಂಗಳವಾರ ಸುಪ್ರೀಂಕೋರ್ಟ್‌ಗೆ ಸಿಬಿಟಿಡಿ ಯಾವ ಸಂಸದರು, ಶಾಸಕರ ಆಸ್ತಿ ಹೆಚ್ಚಳವಾಗಿದೆ? ಎಂದು ಹೆಸರುಗಳನ್ನು ತಿಳಿಸಲಿದೆ.












Click it and Unblock the Notifications