ನವದೆಹಲಿ, ಜನವರಿ 8: ಕೇಂದ್ರ ಚುನಾವಣಾ ಆಯೋಗವು ಉತ್ತರ ಪ್ರದೇಶ, ಪಂಜಾಬ್, ಗೋವಾ, ಮಣಿಪುರ ಮತ್ತು ಉತ್ತರಾಖಂಡದ ವಿಧಾನಸಭಾ ಚುನಾವಣೆಯ ದಿನಾಂಕವನ್ನು ಶನಿವಾರ ಮಧ್ಯಾಹ್ನ 3.30ಕ್ಕೆ ಪ್ರಕಟಿಸಲಿದೆ ಎಂದು ಉನ್ನತ ಚುನಾವಣಾ ಸಂಸ್ಥೆಯ ಹೇಳಿಕೆ ತಿಳಿಸಿದೆ.
ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಸಂದರ್ಭದಲ್ಲಿಯೇ ಕೇಂದ್ರ ಚುನಾವಣಾ ಆಯೋಗ 5 ರಾಜ್ಯಗಳ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ ಮಾಡಲು ಸಿದ್ಧತೆ ಮಾಡಿಕೊಂಡಿದೆ.
Uttar Pradesh to go to poll in 7 phases from 10th Feb to 7th March; Punjab, Uttarakhand and Goa to vote on 14th February & Manipur to vote on 27th Feb & 3 March; Counting of votes on 10th March: ECI pic.twitter.com/hxKms5e8hi
ಚುನಾವಣಾ ಆಯೋಗದ ಅಧಿಕಾರಿಗಳು ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ಜೊತೆ ಗುರುವಾರ ಮಹತ್ವದ ಸಭೆ ನಡೆಸಿದ್ದು, ರಾಜ್ಯಗಳಲ್ಲಿನ ಕೋವಿಡ್ ಪರಿಸ್ಥಿತಿ ಕುರಿತು ಮಾಹಿತಿಯನ್ನು ಪಡೆದರು.
403 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶದಲ್ಲಿ ಹಲವು ಹಂತಗಳಲ್ಲಿ ಚುನಾವಣೆ ನಡೆಯುವ ನಿರೀಕ್ಷೆ ಇದೆ.
ಉತ್ತರ ಪ್ರದೇಶ (403), ಗೋವಾ (40), ಪಂಜಾಬ್ (117), ಉತ್ತರಾಖಂಡ (70), ಮಣಿಪುರ (60) ರಾಜ್ಯಗಳ ವಿಧಾನಸಭೆ ಚುನಾವಣೆ ಫೆಬ್ರವರಿ ಅಂತ್ಯ ಅಥವಾ ಮಾರ್ಚ್ ತಿಂಗಳಿನಲ್ಲಿ ನಡೆಯಬೇಕಿದೆ.
ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ ಆರೋಗ್ಯ ಸಚಿವಾಲಯದ ಜೊತೆ ಚರ್ಚಿಸಿರುವ ಚುನಾವಣಾ ಆಯೋಗ ವೇಳಾಪಟ್ಟಿ ಘೋಷಣೆ ಮಾಡಲಿದೆ. ಗುರುವಾರ ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ಮತ್ತು ತಜ್ಞರ ಜೊತೆ ಚುನಾವಣಾ ಆಯೋಗದ ಅಧಿಕಾರಿಗಳು ಸಭೆ ನಡೆಸಿದ್ದರು. ಚುನಾವಣೆ ನಡೆಯುವ 5 ರಾಜ್ಯಗಳಲ್ಲಿ ಲಸಿಕೆ ನೀಡುವ ಕುರಿತು ಹೆಚ್ಚು ಗಮನ ಹರಿಸಬೇಕು ಎಂದು ಆಯೋಗ ಹೇಳಿದೆ.
ಭಾರತದ ಪುಟ್ಟ ರಾಜ್ಯ ಎನಿಸಿರುವ ಗೋವಾದಲ್ಲಿ ವಿಧಾನಸಭೆ ಚುನಾವಣೆಗೆ ದಿನಾಂಕ ಪ್ರಕಟಿಸಲಾಗಿದೆ. ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ ಸುಶೀಲ್ ಚಂದ್ರ, ಪಂಚರಾಜ್ಯಗಳ ಚುನಾವಣೆ, ನಾಮಪತ್ರ ಸಲ್ಲಿಕೆ, ನಾಮಪತ್ರ ಮರುಪರಿಶೀಲನೆ, ನಾಮಪತ್ರ ವಾಪಸ್, ಮತದಾನ ಹಾಗೂ ಫಲಿತಾಂಶದ ದಿನಾಂಕವನ್ನು ಪ್ರಕಟಿಸಿದ್ದಾರೆ.
5 ರಾಜ್ಯಗಳ ವಿಧಾನಸಭಾ ಚುನಾವಣೆ: ಮತದಾರರ ತಾಪಮಾನವು ಕೇಂದ್ರ ಆರೋಗ್ಯ ಸಚಿವಾಲಯದ ನಿಗದಿತ ಮಾನದಂಡಗಳಿಗಿಂತ ಹೆಚ್ಚಿದ್ದರೆ, ಮತದಾರರಿಗೆ ಟೋಕನ್ ನೀಡಲಾಗುತ್ತದೆ ಮತ್ತು ಮತದಾನದ ಕೊನೆಯ ಗಂಟೆಯಲ್ಲಿ ಮತದಾನಕ್ಕೆ ಬರುವಂತೆ ಕೇಳಲಾಗುತ್ತದೆ: ಚುನಾವಣಾ ಆಯೋಗ
Jan 08, 2022, 6:00 pm IST
ಉತ್ತರಪ್ರದೇಶದ ಜನರು ಬಿಜೆಪಿ ಸರ್ಕಾರಕ್ಕೆ ವಿದಾಯ ಹೇಳಲು ಸಜ್ಜಾಗಿದ್ದಾರೆ. ಈ ದಿನಾಂಕಗಳು ರಾಜ್ಯದಲ್ಲಿ ದೊಡ್ಡ ಬದಲಾವಣೆಯನ್ನು ಸೂಚಿಸುತ್ತವೆ. ಸಮಾಜವಾದಿ ಪಕ್ಷವು ನಿಯಮಗಳನ್ನು ಅನುಸರಿಸುತ್ತದೆ, ಆದರೆ ಆಡಳಿತ ಪಕ್ಷವು ಈ ಮಾರ್ಗಸೂಚಿಗಳನ್ನು ಅನುಸರಿಸುತ್ತದೆ ಎಂಬುದನ್ನು ಚುನಾವಣಾ ಆಯೋಗ ಖಚಿತಪಡಿಸಿಕೊಳ್ಳಬೇಕು: ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್
Jan 08, 2022, 5:58 pm IST
ಉತ್ತರಾಖಂಡದ ಚುನಾವಣಾ ದಿನಾಂಕ ಘೋಷಣೆಯನ್ನು ನಾವು ಸ್ವಾಗತಿಸುತ್ತೇವೆ. ಕಾಂಗ್ರೆಸ್ ಯಾವಾಗಲೂ ನೀತಿ ಸಂಹಿತೆ ಮತ್ತು ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಪಾಲಿಸುತ್ತದೆ: ಕಾಂಗ್ರೆಸ್ ನಾಯಕ ಹರೀಶ್ ರಾವತ್
Jan 08, 2022, 5:57 pm IST
ಮಾರ್ಚ್ 10ರಂದು ಉತ್ತರಪ್ರದೇಶ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದಾಗ ಬಿಜೆಪಿ ಪ್ರಚಂಡ ಬಹುಮತದೊಂದಿಗೆ ಮತ್ತೆ ಸರ್ಕಾರ ರಚಿಸುವಲ್ಲಿ ಯಶಸ್ವಿಯಾಗಲಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಚುನಾವಣಾ ಸಂದರ್ಭದಲ್ಲಿ ಮತಗಳನ್ನು ಸೆಳೆಯಲು ಮತದಾರರಿಗೆ ಹಣ, ಹೆಂಡ ಹಾಗೂ ಇತರೆ ಆಸೆ, ಆಮಿಷ ತೋರಿಸುವುದು ಸಹಜ. ಇಂತಹ ಚುನಾವಣಾ ಅಕ್ರಮಗಳ ತಡೆಗೆ ಕೇಂದ್ರ ಚುನಾವಣಾ ಆಯೋಗವು ಸಿ-ವಿಜಿಲ್(cVIGIL) ಆ್ಯಪ್ ಬಿಡುಗಡೆ ಮಾಡಿದೆ.
ಪಂಜಾಬ್‌ನ 117 ವಿಧಾನಸಭಾ ಕ್ಷೇತ್ರಗಳಿಗೆ ಫೆಬ್ರವರಿ 14ರಂದು ಚುನಾವಣೆ ನಡೆಯಲಿದೆ.
Jan 08, 2022, 4:27 pm IST
ಗೋವಾದ ಒಟ್ಟು 40 ವಿಧಾನಸಭಾ ಕ್ಷೇತ್ರಗಳಿಗೆ ಫೆಬ್ರವರಿ 14ರಂದು ಚುನಾವಣೆ ನಡೆಯಲಿದೆ.
Jan 08, 2022, 4:13 pm IST
ಮಾರ್ಚ್ 10ರಂದು ಪಂಚರಾಜ್ಯಗಳ ಚುನಾವಣಾ ಫಲಿತಾಂಶ: ಸಿಇಸಿ ಸುಶೀಲ್ ಚಂದ್ರ
Jan 08, 2022, 4:12 pm IST
ಉತ್ತರಪ್ರದೇಶದಲ್ಲಿ ಏಳು ಹಂತದ ಚುನಾವಣೆ ಮತ್ತು ಮಣಿಪುರದಲ್ಲಿ ಎರಡು ಹಂತದ ಚುನಾವಣೆ: ಸಿಇಸಿ ಸುಶೀಲ್ ಚಂದ್ರ
Jan 08, 2022, 4:11 pm IST
ಪಂಜಾಬ್, ಉತ್ತರಾಖಂಡ ಮತ್ತು ಗೋವಾದಲ್ಲಿ ಒಂದೇ ಹಂತದ ಚುನಾವಣೆ: ಕೇಂದ್ರ ಚುನಾವಣಾ ಆಯೋಗ
Jan 08, 2022, 4:10 pm IST
ಫೆಬ್ರವರಿ 10ರಂದು ಮೊದಲ ಹಂತದ ಮತದಾನ
Jan 08, 2022, 4:09 pm IST
ಉತ್ತರಪ್ರದೇಶದಲ್ಲಿ ಜನವರಿ 14ರಿಂದ ಚುನಾವಣಾ ಅಧಿಸೂಚನೆ: ಸಿಇಸಿ ಸುಶೀಲ್ ಚಂದ್ರ
Jan 08, 2022, 4:08 pm IST
ಪಂಚರಾಜ್ಯಗಳಲ್ಲಿ ಏಳು ಹಂತದ ಚುನಾವಣೆ: ಕೇಂದ್ರ ಚುನಾವಣಾ ಆಯೋಗ
Jan 08, 2022, 4:07 pm IST
ಪಂಚರಾಜ್ಯಗಳ ಚುನಾವಣೆಯ ಫಲಿತಾಂಶ ನಂತರ ವಿಜಯೋತ್ಸವ, ಸಂಭ್ರಮಾಚರಣೆಗೆ ನಿರ್ಬಂಧ: ಕೇಂದ್ರ ಚುನಾವಣಾ ಆಯೋಗ
Jan 08, 2022, 4:06 pm IST
ನಾಮಪತ್ರ ಸಲ್ಲಿಕೆ ವೇಳೆ ರೋಡ್‌ಶೋ, ಮೆರವಣಿಗೆ ಮಾಡುವಂತಿಲ್ಲ: ಕೇಂದ್ರ ಚುನಾವಣಾ ಆಯೋಗ
Jan 08, 2022, 4:05 pm IST
ಜನವರಿ 15ರ ಬಳಿಕ ರೋಡ್‌ಶೋ, ಪಾದಯಾತ್ರೆಗೆ ಅವಕಾಶ ಕುರಿತು ತೀರ್ಮಾನ: ಕೇಂದ್ರ ಚುನಾವಣಾ ಆಯೋಗ
Jan 08, 2022, 4:04 pm IST
ಜನವರಿ 15ರವರೆಗೆ ರೋಡ್‌ಶೋ, ಪಾದಯಾತ್ರೆಗೆ ಅವಕಾಶವಿಲ್ಲ: ಕೇಂದ್ರ ಚುನಾವಣಾ ಆಯೋಗ
Jan 08, 2022, 4:03 pm IST
ಪಂಚರಾಜ್ಯಗಳ ಚುನಾವಣೆಯಲ್ಲಿ ಚುನಾವಣಾ ಮೆರವಣಿಗೆಗೆ ಅವಕಾಶವಿಲ್ಲ: ಸಿಇಸಿ ಸುಶೀಲ್ ಚಂದ್ರ
Jan 08, 2022, 4:03 pm IST
ಗೋವಾ, ಮಣಿಪುರ, ಪಂಜಾಬ್, ಉತ್ತರ ಪ್ರದೇಶ, ಉತ್ತರಾಖಂಡ್ ರಾಜ್ಯಗಳ ವಿಧಾನಸಭಾ ಚುನಾವಣೆ ನಡೆಸಲಾಗುವುದು. ಚುನಾವಣೆ ಸಂಬಂಧ ಕೇಂದ್ರ, ರಾಜ್ಯ ಸರ್ಕಾರಗಳ ಜತೆ ಚರ್ಚೆ ನಡೆಸಲಾಗಿದೆ ಎಂದು ಸಿಇಸಿ ಸುಶೀಲ್ ಚಂದ್ರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
Jan 08, 2022, 4:01 pm IST
ಅಗತ್ಯ ಬಿದ್ದರೆ ಚುನಾವಣಾ ಸಿಬ್ಬಂದಿಗಳಿಗೆ ಬೂಸ್ಟರ್ ಡೋಸ್ ನೀಡಲಾಗುವುದು; ಸಿಇಸಿ ಸುಶೀಲ್ ಚಂದ್ರ
Jan 08, 2022, 3:59 pm IST
ಉತ್ತರಪ್ರದೇಶದಲ್ಲಿ ಶೇ.29ರಷ್ಟು ಹೊಸ ಮತದಾರರು ಸೇರ್ಪಡೆ
Jan 08, 2022, 3:57 pm IST
ಪಂಚರಾಜ್ಯಗಳ ಚುನಾವಣೆಯಲ್ಲಿ ಎಲ್ಲಾ ಚುನಾವಣಾ ಅಧಿಕಾರಿಗಳಿಗೆ ಎರಡು ಬಾರಿ ಲಸಿಕೆ ಹಾಕಲಾಗುತ್ತದೆ ಮತ್ತು ಮುನ್ನೆಚ್ಚರಿಕೆಯ ಕ್ರಮ ಕೈಗೊಳ್ಳಲಾಗುತ್ತದೆ: ಸಿಇಸಿ ಸುಶೀಲ್ ಚಂದ್ರ
Jan 08, 2022, 3:56 pm IST
ಪಂಜಾಬ್, ಉತ್ತರಾಖಂಡ ಮತ್ತು ಉತ್ತರಪ್ರದೇಶ ಅಭ್ಯರ್ಥಿಗಳ ವೆಚ್ಚದ ಮಿತಿ 40 ಲಕ್ಷ ರೂ. ಇರುತ್ತದೆ. ಗೋವಾ ಮತ್ತು ಮಣಿಪುರ ಅಭ್ಯರ್ಥಿಗಳ ವೆಚ್ಚದ ಮಿತಿ 28 ಲಕ್ಷ ರೂ. ಇರುತ್ತದೆ: ಸಿಇಸಿ ಸುಶೀಲ್ ಚಂದ್ರ
READ MORE
12:25 PM, 8 Jan
ಕೋವಿಡ್ -19 ಪ್ರಕರಣಗಳು ಹೆಚ್ಚುತ್ತಿರುವುದರಿಂದ ಕಾಂಗ್ರೆಸ್ ಉತ್ತರ ಪ್ರದೇಶದಲ್ಲಿ ಯಾವುದೇ ರಾಜಕೀಯ ಸಭೆ ನಡೆಸುವುದಿಲ್ಲ ಎಂದು ಘೋಷಿಸಿದೆ ಮತ್ತು ರಾಜ್ಯದಲ್ಲಿ ದೊಡ್ಡ ಸಾರ್ವಜನಿಕ ಕಾರ್ಯಕ್ರಮಗಳನ್ನು ನಡೆಸದಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಒತ್ತಾಯಿಸಿದೆ.
12:46 PM, 8 Jan
ಉತ್ತರ ಪ್ರದೇಶ, ಪಂಜಾಬ್, ಗೋವಾ, ಮಣಿಪುರ ಮತ್ತು ಉತ್ತರಾಖಂಡ ಈ ಐದು ರಾಜ್ಯಗಳಲ್ಲಿ ಪಂಜಾಬ್ ಹೊರತುಪಡಿಸಿ ಉಳಿದೆಲ್ಲ ರಾಜ್ಯಗಳಲ್ಲೂ ಸದ್ಯ ಬಿಜೆಪಿ ನೇತೃತ್ವದ ಸರ್ಕಾರವೇ ಇದೆ.
12:46 PM, 8 Jan
ಬಿಜೆಪಿಗೆ ನಾಲ್ಕು ರಾಜ್ಯಗಳಲ್ಲಿ ಅಧಿಕಾರ ಉಳಿಸಿಕೊಳ್ಳುವ ಜೊತೆಗೆ, ಪಂಜಾಬ್ನಲ್ಲಿ ಸರ್ಕಾರ ರಚಿಸುವ ಒತ್ತಡವಿದೆ. ಕಾಂಗ್ರೆಸ್ ಕೂಡ ತನ್ನ ಪ್ರಯತ್ನ ಮಾಡುತ್ತಿದೆ. ಅದರಲ್ಲೂ 403 ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡ ದೊಡ್ಡ ರಾಜ್ಯ ಉತ್ತರಪ್ರದೇಶ ಕೇಂದ್ರ ಬಿಂದುವಾಗಿದೆ.
1:46 PM, 8 Jan
ಚುನಾವಣೆಗೆ ದಿನಾಂಕ ಘೋಷಣೆಯಾದ ನಂತರ ಇಂದಿನಿಂದಲೇ ಮಾದರಿ ನೀತಿ ಸಂಹಿತೆ ಜಾರಿಗೆ ಬರಲಿದೆ. ಉತ್ತರಪ್ರದೇಶ ವಿಧಾನಸಭೆಯ ಅವಧಿ ಮಾರ್ಚ್ 15ರಂದು ಕೊನೆಗೊಂಡರೆ, ಪಂಜಾಬ್ ವಿಧಾನಸಭೆ ಅಧಿಕಾರಾವಧಿಯು ಮಾರ್ಚ್ 27ರಂದು, ಮಣಿಪುರ ಮಾರ್ಚ್ 19ರಂದು, ಗೋವಾ ಮಾರ್ಚ್ 15 ಮತ್ತು ಉತ್ತರಾಖಂಡ್ ಮಾರ್ಚ್ 23ರಂದು ಕೊನೆಗೊಳ್ಳುತ್ತದೆ.
2:06 PM, 8 Jan
ಉತ್ತರಪ್ರದೇಶದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (ಸಿಎಪಿಎಫ್) ಒಟ್ಟು 150 ಸಿಬ್ಬಂದಿಯನ್ನು ಕೇಂದ್ರವು ಮೊದಲ ಹಂತದಲ್ಲಿ ರಾಜ್ಯಕ್ಕೆ ಒದಗಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇವುಗಳಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (CRPF) 50, 30 ಗಡಿ ಭದ್ರತಾ ಪಡೆ (BSF), ಸಶಸ್ತ್ರ ಸೀಮಾ ಬಾಲ್ (SSB) ಮತ್ತು 20 ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (CISF) ಇರಲಿವೆ.
2:32 PM, 8 Jan
ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಉತ್ತರಪ್ರದೇಶದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ. ಅಲ್ಲದೆ, ಕಾಂಗ್ರೆಸ್, ಆಪ್, ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಾರ್ಟಿಗಳೂ ಕೂಡ ಉತ್ತರಪ್ರದೇಶ ಚುನಾವಣೆಯ ಸಿದ್ಧತೆಯಲ್ಲಿ ತೊಡಗಿವೆ.
3:18 PM, 8 Jan
ಮುಂಬರುವ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಉತ್ಸುಕರಾಗಿರುವ ಯಾವುದೇ ಪಕ್ಷದ ಬೆಂಬಲವನ್ನು ಸ್ವೀಕರಿಸಲು ಕಾಂಗ್ರೆಸ್ ಸಿದ್ಧವಿದೆ ಎಂದು ಹಿರಿಯ ನಾಯಕ ಪಿ ಚಿದಂಬರಂ ಶನಿವಾರ ಹೇಳಿದ್ದಾರೆ. ತೃಣಮೂಲ ಕಾಂಗ್ರೆಸ್ ಪಕ್ಷದ ಗೋವಾ ಡೆಸ್ಕ್ ಉಸ್ತುವಾರಿ ಮಹುವಾ ಮೊಯಿತ್ರಾ ಅವರು ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷವು ಗೋವಾ ಫಾರ್ವರ್ಡ್ ಪಾರ್ಟಿ (ಜಿಎಫ್ಪಿ) ಮತ್ತು ಕಾಂಗ್ರೆಸ್ನೊಂದಿಗೆ ಚುನಾವಣಾ ಪೂರ್ವ ಮೈತ್ರಿಗೆ ಮುಕ್ತವಾಗಿದೆ ಎಂದು ಸೂಚಿಸಿದ ಬೆನ್ನಲ್ಲೇ ಅವರ ಹೇಳಿಕೆ ಬಂದಿದೆ.
3:30 PM, 8 Jan
ಕೆಲವೇ ಕ್ಷಣಗಳಲ್ಲಿ ಕೇಂದ್ರ ಚುನಾವಣಾ ಆಯೋಗ ಸುದ್ದಿಗೋಷ್ಠಿ ಆರಂಭ
3:33 PM, 8 Jan
ನವದೆಹಲಿಯ ವಿಜ್ಞಾನ ಭವನದಲ್ಲಿ ಕೇಂದ್ರ ಚುನಾವಣಾ ಆಯೋಗ ಸುದ್ದಿಗೋಷ್ಠಿ
3:37 PM, 8 Jan
ಕೋವಿಡ್ ಮಾರ್ಗಸೂಚಿ ಅನುಸರಿಸಿ ಚುನಾವಣೆ ನಡೆಸುತ್ತೇವೆ ಎಂದು ಕೇಂದ್ರ ಚುನಾವಣಾ ಆಯುಕ್ತ ಹೇಳಿದರು.
3:39 PM, 8 Jan
ಕೋವಿಡ್ ಸಂದರ್ಭದಲ್ಲಿ ಚುನಾವಣೆ ನಡೆಸುವುದು ಸವಾಲಿನ ಕೆಲಸ ಎಂದು ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಹೇಳಿದರು.
3:41 PM, 8 Jan
ಉತ್ತರ ಪ್ರದೇಶ, ಗೋವಾ, ಪಂಜಾಬ್, ಉತ್ತರಾಖಂಡ, ಮಣಿಪುರ ರಾಜ್ಯಗಳಲ್ಲಿ ಇಂದಿನಿಂದಲೇ ಚುನಾವಣಾ ನೀತಿಸಂಹಿತೆ ಜಾರಿ; ಕೇಂದ್ರ ಚುನಾವಣಾ ಆಯೋಗ
3:42 PM, 8 Jan
ಉತ್ತರ ಪ್ರದೇಶ
ಉತ್ತರ ಪ್ರದೇಶ, ಗೋವಾ, ಪಂಜಾಬ್, ಉತ್ತರಾಖಂಡ, ಮಣಿಪುರ ರಾಜ್ಯಗಳ ಒಟ್ಟು 690 ಕ್ಷೇತ್ರಗಳಿಗೆ ಚುನಾವಣೆ; ಕೇಂದ್ರ ಚುನಾವಣಾ ಆಯೋಗ
3:43 PM, 8 Jan
ಕೋವಿಡ್-19ರ ದೃಷ್ಟಿಯಿಂದ ಚುನಾವಣಾ ಆಯೋಗದ ಮೂಲ ಸಿದ್ಧತೆಗಳು
* ಕೋವಿಡ್ ಸುರಕ್ಷಿತ ಚುನಾವಣೆಗಳು
* ಮತದಾರರಿಗೆ ತೊಂದರೆಯಿಲ್ಲದ ಆರಾಮದಾಯಕ ಮತದಾನದ ಅನುಭವ
* ಗರಿಷ್ಠ ಮತದಾರರ ಭಾಗವಹಿಸುವಿಕೆ
3:45 PM, 8 Jan
ಐದು ರಾಜ್ಯಗಳಲ್ಲಿ ಒಟ್ಟು 18.34 ಕೋಟಿ ಮತದಾರರಿದ್ದಾರೆ.
3:46 PM, 8 Jan
ಐದು ರಾಜ್ಯಗಳಲ್ಲಿ ಒಟ್ಟು 24.9 ಲಕ್ಷ ಹೊಸ ಮತದಾರರಿದ್ದಾರೆ.
3:48 PM, 8 Jan
ಐದು ರಾಜ್ಯಗಳಲ್ಲಿ ಒಟ್ಟು 2.15 ಲಕ್ಷ ಮತಗಟ್ಟೆಗಳ ಸ್ಥಾಪನೆ.
3:49 PM, 8 Jan
ಒಂದು ಮತಗಟ್ಟೆಯಲ್ಲಿ ಗರಿಷ್ಠ 1250 ಮತದಾರರ ಮೀತಿ ಇರುತ್ತದೆ.
3:50 PM, 8 Jan
ಅಭ್ಯರ್ಥಿಗಳು ಆನ್ಲೈನ್ ನಾಮಪತ್ರ ಸಲ್ಲಿಸುವ ಆಯ್ಕೆ ಇರುತ್ತದೆ: ಕೇಂದ್ರ ಚುನಾವಣಾ ಆಯೋಗ
3:51 PM, 8 Jan
ಪಂಚರಾಜ್ಯ ಚುನಾವಣೆಯಲ್ಲಿ ಕ್ರಿಮಿನಲ್ ದಾಖಲೆಗಳ ಘೋಷಣೆ ಕಡ್ಡಾಯ ಮಾಡಲಾಗಿದೆ.
3:53 PM, 8 Jan
ಪಂಚರಾಜ್ಯ ಚುನಾವಣೆಯಲ್ಲಿ ಎಲ್ಲ ಪಕ್ಷಗಳು ತಮ್ಮ ವೆಬ್ಸೈಟ್ನಲ್ಲಿ ಅಭ್ಯರ್ಥಿ ಕ್ರಿಮಿನಲ್ ಹಿನ್ನೆಲೆಯನ್ನು ಘೋಷಿಸಬೇಕು.
3:54 PM, 8 Jan
80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು, ವಿಕಲಚೇತನರು ಮತ್ತು ಕೋವಿಡ್-19 ಸೋಂಕಿತರು ಅಂಚೆ ಮತಪತ್ರದ ಮೂಲಕ ಮತ ಚಲಾಯಿಸಬಹುದು: ಸಿಇಸಿ ಸುಶೀಲ್ ಚಂದ್ರ
3:56 PM, 8 Jan
ಪಂಜಾಬ್, ಉತ್ತರಾಖಂಡ ಮತ್ತು ಉತ್ತರಪ್ರದೇಶ ಅಭ್ಯರ್ಥಿಗಳ ವೆಚ್ಚದ ಮಿತಿ 40 ಲಕ್ಷ ರೂ. ಇರುತ್ತದೆ. ಗೋವಾ ಮತ್ತು ಮಣಿಪುರ ಅಭ್ಯರ್ಥಿಗಳ ವೆಚ್ಚದ ಮಿತಿ 28 ಲಕ್ಷ ರೂ. ಇರುತ್ತದೆ: ಸಿಇಸಿ ಸುಶೀಲ್ ಚಂದ್ರ
3:57 PM, 8 Jan
ಪಂಚರಾಜ್ಯಗಳ ಚುನಾವಣೆಯಲ್ಲಿ ಎಲ್ಲಾ ಚುನಾವಣಾ ಅಧಿಕಾರಿಗಳಿಗೆ ಎರಡು ಬಾರಿ ಲಸಿಕೆ ಹಾಕಲಾಗುತ್ತದೆ ಮತ್ತು ಮುನ್ನೆಚ್ಚರಿಕೆಯ ಕ್ರಮ ಕೈಗೊಳ್ಳಲಾಗುತ್ತದೆ: ಸಿಇಸಿ ಸುಶೀಲ್ ಚಂದ್ರ
3:59 PM, 8 Jan
ಉತ್ತರಪ್ರದೇಶದಲ್ಲಿ ಶೇ.29ರಷ್ಟು ಹೊಸ ಮತದಾರರು ಸೇರ್ಪಡೆ
4:01 PM, 8 Jan
ಅಗತ್ಯ ಬಿದ್ದರೆ ಚುನಾವಣಾ ಸಿಬ್ಬಂದಿಗಳಿಗೆ ಬೂಸ್ಟರ್ ಡೋಸ್ ನೀಡಲಾಗುವುದು; ಸಿಇಸಿ ಸುಶೀಲ್ ಚಂದ್ರ
4:03 PM, 8 Jan
ಗೋವಾ, ಮಣಿಪುರ, ಪಂಜಾಬ್, ಉತ್ತರ ಪ್ರದೇಶ, ಉತ್ತರಾಖಂಡ್ ರಾಜ್ಯಗಳ ವಿಧಾನಸಭಾ ಚುನಾವಣೆ ನಡೆಸಲಾಗುವುದು. ಚುನಾವಣೆ ಸಂಬಂಧ ಕೇಂದ್ರ, ರಾಜ್ಯ ಸರ್ಕಾರಗಳ ಜತೆ ಚರ್ಚೆ ನಡೆಸಲಾಗಿದೆ ಎಂದು ಸಿಇಸಿ ಸುಶೀಲ್ ಚಂದ್ರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
4:03 PM, 8 Jan
ಪಂಚರಾಜ್ಯಗಳ ಚುನಾವಣೆಯಲ್ಲಿ ಚುನಾವಣಾ ಮೆರವಣಿಗೆಗೆ ಅವಕಾಶವಿಲ್ಲ: ಸಿಇಸಿ ಸುಶೀಲ್ ಚಂದ್ರ
4:04 PM, 8 Jan
ಜನವರಿ 15ರವರೆಗೆ ರೋಡ್‌ಶೋ, ಪಾದಯಾತ್ರೆಗೆ ಅವಕಾಶವಿಲ್ಲ: ಕೇಂದ್ರ ಚುನಾವಣಾ ಆಯೋಗ
4:05 PM, 8 Jan
ಜನವರಿ 15ರ ಬಳಿಕ ರೋಡ್‌ಶೋ, ಪಾದಯಾತ್ರೆಗೆ ಅವಕಾಶ ಕುರಿತು ತೀರ್ಮಾನ: ಕೇಂದ್ರ ಚುನಾವಣಾ ಆಯೋಗ
Assembly Elections 2022 LIVE Updates, Latest News of Uttar Pradesh, Uttarakhand, Manipur, Goa and Punjab Election Latest Updates: Election Commission of India to announce the schedule for Assembly elections of 5 states on January 8 at 3.30pm.