ರಾಜಸ್ಥಾನದಲ್ಲಿ ಕಾಂಗ್ರೆಸ್ಸಿಗೆ ಬಲ, ಹರಿಯಾಣದಲ್ಲಿ ಸುರ್ಜೆವಾಲಗೆ ಸೋಲು

ನವದೆಹಲಿ, ಜನವರಿ 31: ಹರಿಯಾಣ ಮತ್ತು ರಾಜಸ್ಥಾನಗಳಲ್ಲಿ ನಡೆದ ವಿಧಾನಸಭೆ ಉಪ ಚುನಾವಣೆಗಳಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ಕಾಂಗ್ರೆಸ್ ಜಯಭೇರಿ ಭಾರಿಸಿವೆ.

ಸಾರ್ವತ್ರಿಕ ಚುನಾವಣೆಗೂ ಮುನ್ನ ನಡೆದ ಕೊನೆಯ ಚುನಾವಣೆಗಳಲ್ಲಿ ಎರಡು ಪ್ರಮುಖ ರಾಷ್ಟ್ರೀಯ ಪಕ್ಷಗಳು ತಲಾ ಒಂದು ಗೆಲುವಿನ ರುಚಿ ಕಂಡಿವೆ.

assembly elections rajasthan ramgarh haryana jind bypoll congress and bjp

ಹರಿಯಾಣದ ಜಿಂದ್‌ನಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿಯ ಕೃಷನ್ ಮಿದ್ದಾ 12,000 ಮತಗಳಿಂದ ಜಯಗಳಿಸಿದ್ದಾರೆ. ಮಿದ್ದಾ ಅವರು 49,929 ಮತಗಳನ್ನು ಪಡೆದರೆ, ಜೆಜೆಪಿಯ ದಿಗ್ವಿಜಯ್ ಸುರ್ಜೇವಾಲಾ 37,681 ಮತಗಳನ್ನು ಗಳಿಸಿ ಸೋಲೊಪ್ಪಿಕೊಂಡರು.

ಕಾಂಗ್ರೆಸ್‌ನ ರಣದೀಪ್ ಸುರ್ಜೇವಾಲಾ 22,547 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ರಾಜಸ್ಥಾನದ ರಾಮಗಢ ವಿಧಾನಸಭೆ ಕ್ಷೇತ್ರದಲ್ಲಿ ನಡೆದ ಉಪ ಚುನಾವಣೆಯಲ್ಲಿ ಸುಮಾರು 20 ಅಭ್ಯರ್ಥಿಗಳು ಕಣದಲ್ಲಿದ್ದರು. ಡಿ. 7ರಂದು ರಾಜ್ಯದಲ್ಲಿ ಚುನಾವಣೆ ನಡೆದಿತ್ತು. ಆದರೆ, ಬಿಎಸ್‌ಪಿಯ ಅಭ್ಯರ್ಥಿಯಾಗಿದ್ದ ಲಕ್ಷ್ಮಣ್ ಸಿಂಗ್ ಚುನಾವಣೆಗೂ ಮುನ್ನವೇ ಮೃತಪಟ್ಟಿದ್ದರಿಂದ ಈ ಕ್ಷೇತ್ರದಲ್ಲಿ ಚುನಾವಣೆ ಮುಂದೂಡಲಾಗಿತ್ತು.

assembly elections rajasthan ramgarh haryana jind bypoll congress and bjp

ಕಾಂಗ್ರೆಸ್‌ನ ಶಫಿಯಾ ಜುಬೇರ್ ಅವರು ಬಿಜೆಪಿಯ ಸುಖ್ವಂತ್ ಸಿಂಗ್ ಅವರನ್ನು 12,228 ಮತಗಳ ಅಂತರದಿಂದ ಸೋಲಿಸಿದ್ದಾರೆ. ಜುಬೇರ್ ಅವರು 83311 (ಶೇ 44.77) ಮತಗಳನ್ನು ಪಡೆದರೆ, ಸುಖ್ವಂತ್ ಸಿಂಗ್ ಅವರು 71083 (ಶೇ 38.20) ಮತಗಳನ್ನು ಗಳಿಸಿದರು.

Assembly Elections : Randeep Surjewal loses Jind Bypoll

ಕಾಂಗ್ರೆಸ್‌ನ ಮಾಜಿ ನಾಯಕ ನಟವರ್ ಸಿಂಗ್ ಅವರ ಮಗ ಜಗತ್ ಸಿಂಗ್ ಬಿಜೆಪಿಯಲ್ಲಿದ್ದರು. ಆದರೆ, ಟಿಕೆಟ್ ಸಿಗದ ಕಾರಣಕ್ಕೆ ಅವರು ಪಕ್ಷ ತೊರೆದು ಬಿಎಸ್‌ಪಿ ಸೇರಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಅವರು 24,856 (ಶೇ 13.36) ಮತಗಳನ್ನು ಪಡೆದಿದ್ದು ಬಿಜೆಪಿಗೆ ಹೊಡೆತ ನೀಡಿತು.

ಈ ಗೆಲುವಿನೊಂದಿಗೆ 200 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ 100 ಕ್ಷೇತ್ರಗಳನ್ನು ತನ್ನದಾಗಿಸಿಕೊಳ್ಳುವ ಮೂಲಕ ಶತಕದ ಸಾಧನೆ ಮಾಡಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+