• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
LIVE

Assembly Elections 2021 Live: ಪಶ್ಚಿಮ ಬಂಗಾಳ: 4ನೇ ಹಂತದಲ್ಲಿ ಶೇ.76.16ರಷ್ಟು ಮತದಾನ

|

ಎರಡನೆಯ ಅಲೆಯ ಕೋವಿಡ್-19 ಸಾಂಕ್ರಾಮಿಕದ ಭೀತಿಯ ನಡುವೆ ದೇಶದಲ್ಲಿ ಮತ್ತೆ ಚುನಾವಣೆಯ ಕಾವು ಆರಂಭವಾಗಿದೆ. ಮಾರ್ಚ್ 27ರಿಂದ ಮೇ 2ರವರೆಗೆ ಐದು ವಿಧಾನಸಭೆಗಳ ಚುನಾವಣೆ ಪ್ರಕ್ರಿಯೆ ನಡೆಯುತ್ತಿದೆ. ಪಶ್ಚಿಮ ಬಂಗಾಳ, ಅಸ್ಸಾಂ, ಕೇರಳ, ತಮಿಳುನಾಡು ರಾಜ್ಯಗಳು ಮತ್ತು ಪುದುಚೇರಿ ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದೆ.

ಪಶ್ಚಿಮ ಬಂಗಾಳದ 294, ತಮಿಳುನಾಡಿನ 234, ಕೇರಳದ 140, ಅಸ್ಸಾಂನ 126 ಮತ್ತು ಪುದುಚೇರಿಯ 30 ವಿಧಾನಸಭೆ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಒಟ್ಟು ಎಂಟು ಹಂತಗಳಲ್ಲಿ ಮತ್ತು ಅಸ್ಸಾಂನಲ್ಲಿ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಉಳಿದ ಮೂರು ಕಡೆ ಏಪ್ರಿಲ್ 6ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯುತ್ತಿದೆ.

ಇದಲ್ಲದೆ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ವಿಧಾನಸಭೆ ಕ್ಷೇತ್ರಗಳು ಮತ್ತು ಲೋಕಸಭೆ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದೆ. ಈ ಎಲ್ಲ ಚುನಾವಣೆಗಳ ಫಲಿತಾಂಶ ಮೇ 2ರಂದು ಪ್ರಕಟವಾಗಲಿದೆ.

Assembly Elections 2021 News Live Updates: West Bengal, Tamil Nadu, Kerala, Assam, Kerala, Puducherry Election Latest News and Highlights in Kannada

ಏಪ್ರಿಲ್ 1 ರಂದು ಅಸ್ಸಾಂನಲ್ಲಿ 2ನೇ ಹಂತದ ಮತದಾನದಲ್ಲಿ 13 ಜಿಲ್ಲೆಗಳಲ್ಲಿನ 39 ಕ್ಷೇತ್ರಗಳಿಗೆ ಬೆಳಗ್ಗೆ 7 ರಿಂದ ಸಂಜೆ 6ರ ತನಕ ಮತದಾನ ನಡೆಯಲಿದೆ.

ಅದೇ ರೀತಿ ಪಶ್ಚಿಮ ಬಂಗಾಳದ 2ನೇ ಹಂತದ ಮತದಾನದಲ್ಲಿ 30 ಕ್ಷೇತ್ರಗಳಲ್ಲಿ ಮತದಾನ ನಿಗದಿಯಾಗಿದೆ. ಒಟ್ಟು 171 ಅಭ್ಯರ್ಥಿಗಳು ಕಣದಲ್ಲಿದ್ದು, ಈ ಪೈಕಿ 19 ಮಂದಿ ಮಹಿಳಾ ಅಭ್ಯರ್ಥಿಗಳಿದ್ದಾರೆ. ಬಹುನಿರೀಕ್ಷಿತ ಕುತೂಹಲಕಾರಿ ಕ್ಷೇತ್ರ ನಂದಿಗ್ರಾಮದಲ್ಲಿ ಸಿಎಂ ಮಮತಾ ಬ್ಯಾನರ್ಜಿ ಹಾಗೂ ಹಿರಿಯ ಮುಖಂಡ ಸುವೇಂದು ಅಧಿಕಾರಿ ನಡುವೆ ಹಣಾಹಣಿಯಿದೆ.

Newest First Oldest First
7:59 PM, 10 Apr
ಪಶ್ಚಿಮ ಬಂಗಾಳ
ಪಶ್ಚಿಮ ಬಂಗಾಳ: ನಾಲ್ಕನೇ ಹಂತದಲ್ಲಿ ಒಟ್ಟು ಶೇ.76.16ರಷ್ಟು ಮತದಾನವಾಗಿದೆ.
7:35 PM, 10 Apr
ಪಶ್ಚಿಮ ಬಂಗಾಳ: ನಾಲ್ಕನೇ ಹಂತದ ಮತದಾನ, 149ನೇ ಮತಗಟ್ಟೆಯ ಚಿತ್ರಣ
7:02 PM, 10 Apr
ಪಶ್ಚಿಮ ಬಂಗಾಳ
ಪಶ್ಚಿಮ ಬಂಗಾಳ: ಪ್ರಶಾಂತ್ ಕಿಶೋರ್ ಆಡಿಯೋ ಚಾಟ್ ವೈರಲ್
6:32 PM, 10 Apr
ಪಶ್ಚಿಮ ಬಂಗಾಳ
ಪಶ್ಚಿಮ ಬಂಗಾಳ: ಹೂಗ್ಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಕಾರಿನ ಮೇಲೆ ದಾಳಿ
6:16 PM, 10 Apr
ಪಶ್ಚಿಮ ಬಂಗಾಳ
ಪಶ್ಚಿಮ ಬಂಗಾಳ: ಬಿಜೆಪಿ ನಾಯಕರಾದ ಲಾಕೆಟ್ ಚಟರ್ಜಿ ಕಾರಿನ ಮೇಲೆ ಹಲ್ಲೆ ವಿಡಿಯೋ
6:00 PM, 10 Apr
ಪಶ್ಚಿಮ ಬಂಗಾಳ
ಪಶ್ಚಿಮ ಬಂಗಾಳ: ಸಂಜೆ 5.24ರ ವೇಳೆಗೆ ಶೇ.75.93ರಷ್ಟು ಮತದಾನವಾಗಿದೆ.
5:26 PM, 10 Apr
ಅಸ್ಸಾಂ
ಬಿಜೆಪಿ ಅಭ್ಯರ್ಥಿ ಹಾಗೂ ಹಾಲಿ ಶಾಸಕರೊಬ್ಬರ ಕಾರಿನಲ್ಲಿ ಇವಿಎಂ ಪತ್ತೆಯಾದ ಹಿನ್ನೆಲೆಯಲ್ಲಿ ಅಸ್ಸಾಂನ ನಾಲ್ಕು ಮತಗಟ್ಟೆಗಳಲ್ಲಿ ಮರು ಮತದಾನಕ್ಕೆ ಕೇಂದ್ರ ಚುನಾವಣಾ ಆಯೋಗ ಶನಿವಾರ ಆದೇಶಿಸಿದೆ.
4:49 PM, 10 Apr
ದೇಶದೆಲ್ಲೆಡೆ ಹೆಚ್ಚಾಗುತ್ತಿರುವ ಕೊರೊನಾ ಸೋಂಕಿನ ಮಧ್ಯೆ, ಮಾಸ್ಕ್ ಇಲ್ಲದೆ, ಸಾಮಾಜಿಕ ಅಂತರ ಕಾಪಾಡದೆ ಪ್ರಮುಖ ಪ್ರಚಾರಕರು, ರಾಜಕಾರಣಿಗಳು ಚುನಾವಣಾ ಪ್ರಚಾರ ಮಾಡುತ್ತಿರುವ ಬಗ್ಗೆ ಚುನಾವಣಾ ಆಯೋಗ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
4:04 PM, 10 Apr
ಪಶ್ಚಿಮ ಬಂಗಾಳ
ಪಶ್ಚಿಮ ಬಂಗಾಳ: ಹಿಂಸಾಚಾರ ವರದಿಯಾದ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ ಸಿಟಾಲ್ಕುಚಿ ವಿಧಾನಸಭಾ ಕ್ಷೇತ್ರದ ಮತಗಟ್ಟೆ ನಂ.126 ರಲ್ಲಿ ಮತದಾನ ಪ್ರಕ್ರಿಯೆಯನ್ನು ಮುಂದೂಡಲು ಚುನಾವಣಾ ಆಯೋಗ ಆದೇಶ ನೀಡಿದೆ.
3:49 PM, 10 Apr
ಪಶ್ಚಿಮ ಬಂಗಾಳ
ಪಶ್ಚಿಮ ಬಂಗಾಳ: ಸೌರವ್ ಗಂಗೂಲಿ ಬೇಹಾಲಾದಲ್ಲಿ ಮತ ಚಲಾಯಿಸಿದರು.
3:44 PM, 10 Apr
ಪಶ್ಚಿಮ ಬಂಗಾಳ
ಕೂಚ್ ಬೆಹಾರ್ ಘರ್ಷಣೆಗೆ ಸಂಬಂಧಿಸಿದಂತೆ ಮಮತಾ ಬ್ಯಾನರ್ಜಿ ಅವರು ಸಂಜೆ 5 ಗಂಟೆಗೆ ಸುದ್ದಿಗೋಷ್ಠಿ ನಡೆಸಲಿದ್ದಾರೆ.
3:01 PM, 10 Apr
ಪಶ್ಚಿಮ ಬಂಗಾಳ
ಸಿತಲ್‌ಕುಚಿಯ ಕೂಚ್‌ಬೆಹರ್ ಜಿಲ್ಲೆಯಲ್ಲಿ ಶನಿವಾರ ಬೆಳಿಗ್ಗೆ ಬಿಜೆಪಿ-ಟಿಎಂಸಿ ಕಾರ್ಯಕರ್ತರ ನಡುವೆ ಗಲಭೆ ಏರ್ಪಟ್ಟಿದೆ. ಈ ಸಂದರ್ಭ ಸಿಐಎಸ್‌ಎಫ್ ಸಿಬ್ಬಂದಿ ಗುಂಡು ಹಾರಿಸಿದ್ದು, ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮೋದಿ, "ದೀದಿ ಈ ಹಿಂಸಾಚಾರ, ಭದ್ರತಾ ಪಡೆ ವಿರುದ್ಧ ಜನರನ್ನು ಎತ್ತಿಕಟ್ಟುವ ನಿಮ್ಮ ತಂತ್ರ ಹಾಗೂ ಮತದಾನ ಪ್ರಕ್ರಿಯೆಗೆ ಅಡ್ಡಿ ಪಡಿಸುವ ಆಲೋಚನೆಗಳೆಲ್ಲಾ ನಿಮಗೆ ರಕ್ಷಣೆ ನೀಡಲು ಸಾಧ್ಯವಿಲ್ಲ. ಹತ್ತು ವರ್ಷಗಳಿಂದ ನೀವು ನಡೆಸಿರುವ ಕೆಟ್ಟ ಆಡಳಿತ ಹಾಗೂ ಇಂಥ ಹಿಂಸಾಚಾರ ನಿಮ್ಮನ್ನು ಕಾಪಾಡುವುದಿಲ್ಲ" ಎಂದು ಹೇಳಿದ್ದಾರೆ.
2:20 PM, 10 Apr
ಪಶ್ಚಿಮ ಬಂಗಾಳ
ಪಶ್ಚಿಮ ಬಂಗಾಳ ಚುನಾವಣೆ: ಭಾರತೀಯ ಜನತಾ ಪಕ್ಷದ ಮುಖಂಡರ ನಿಯೋಗ ಇಂದು ಕೋಲ್ಕತ್ತಾದಲ್ಲಿ ಚುನಾವಣಾ ಆಯೋಗವನ್ನು ಭೇಟಿ ಮಾಡಲಿದೆ.
2:20 PM, 10 Apr
ಪಶ್ಚಿಮ ಬಂಗಾಳ ಚುನಾವಣೆ: ಭಾರತೀಯ ಜನತಾ ಪಕ್ಷದ ಮುಖಂಡರ ನಿಯೋಗ ಇಂದು ಕೋಲ್ಕತ್ತಾದಲ್ಲಿ ಚುನಾವಣಾ ಆಯೋಗವನ್ನು ಭೇಟಿ ಮಾಡಲಿದೆ.
1:53 PM, 10 Apr
ಪಶ್ಚಿಮ ಬಂಗಾಳ
ಪಶ್ಚಿಮ ಬಂಗಾಳ ಚುನಾವಣೆ: ಪಶ್ಚಿಮ ಬಂಗಾಳದ ನಾಲ್ಕನೇ ಹಂತದ ಚುನಾವಣೆಯಲ್ಲಿ ಮಧ್ಯಾಹ್ನ 1.30ರವರೆಗೆ ಶೇ.52.89ರಷ್ಟು ಮತದಾನ ದಾಖಲಾಗಿದೆ.
1:43 PM, 10 Apr
ಪಶ್ಚಿಮ ಬಂಗಾಳ
ಪಶ್ಚಿಮ ಬಂಗಾಳ ಚುನಾವಣೆ: ಭಾರತದ ಚುನಾವಣಾ ಆಯೋಗವು ತಿದ್ದುಪಡಿ ಮಾಡಿದ್ದು, ವಿಶೇಷ ವೀಕ್ಷಕರ ಮಧ್ಯಂತರ ವರದಿಯ ಆಧಾರದ ಮೇಲೆ ಕೂಚ್ ಬೆಹಾರ್‌ನ ಸಿಟಲ್‌ಕುರ್ಚಿ ಎಸಿಯ ಪಿಎಸ್ 126 ರಲ್ಲಿ ಮತದಾನವನ್ನು ಮುಂದೂಡಲು ಆಯೋಗವು ಈ ಮೂಲಕ ಆದೇಶಿಸಿದೆ. ಇಂದು ಸಂಜೆ 5 ಗಂಟೆಯೊಳಗೆ ಸಿಇಒ ಅವರಿಂದ ವಿವರವಾದ ವರದಿಗಳನ್ನು ಕೋರಲಾಗಿದೆ: ಇಸಿ
1:40 PM, 10 Apr
ಪಶ್ಚಿಮ ಬಂಗಾಳ
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನಾಳೆ ಕೂಚ್ ಬೆಹಾರ್‌ನ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ಇಂದು ಗಲಭೆ ವೇಳೆ ಗುಂಡು ಹಾರಿ ನಾಲ್ಕು ಜನರು ಸಾವನ್ನಪ್ಪಿದ್ದಾರೆ.
12:41 PM, 10 Apr
ಪಶ್ಚಿಮ ಬಂಗಾಳ
ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ 2021ರ ನಾಲ್ಕನೇ ಹಂತದ ಸಂದರ್ಭದಲ್ಲಿ ಕೂಚ್ ಬೆಹಾರ್ ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ನಾಲ್ಕು ಜನರು ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಕೇಂದ್ರ ಪಡೆಗಳಿಂದ ಗುಂಡಿನ ದಾಳಿ ಮಾಡಲಾಗಿದೆ ಎಂದು ಟಿಎಂಸಿ ಆರೋಪಿಸಿದೆ.
12:19 PM, 10 Apr
ಪಶ್ಚಿಮ ಬಂಗಾಳ
ಚಿತ್ರಗಳು : ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ 2021
ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ 2021
12:12 PM, 10 Apr
ಪಶ್ಚಿಮ ಬಂಗಾಳ
ಪಶ್ಚಿಮ ಬಂಗಾಳದಲ್ಲಿ ಶನಿವಾರ ನಾಲ್ಕನೇ ಹಂತದ ಚುನಾವಣೆ ನಡೆಯುತ್ತಿದ್ದು, ಮತದಾನ ಸಂದರ್ಭ ಕೂಚ್‌ ಬೆಹರ್‌ನಲ್ಲಿ ಗಲಭೆ ಏರ್ಪಟ್ಟಿದೆ. ತೃಣಮೂಲ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ನಡೆದ ಗಲಭೆಯಲ್ಲಿ ಗುಂಡು ಹಾರಿಸಲಾಗಿದ್ದು, ನಾಲ್ಕು ಮಂದಿ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.
11:30 AM, 10 Apr
ಪಶ್ಚಿಮ ಬಂಗಾಳ
ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ: ಶನಿವಾರ ನಾಲ್ಕನೇ ಹಂತದ ಮತದಾನದಲ್ಲಿ ಬೆಳಿಗ್ಗೆ 11:05 ರವರೆಗೆ ಶೇ.16.65ರಷ್ಟು ಮತದಾನವಾಗಿದೆ.
11:00 AM, 10 Apr
ಪಶ್ಚಿಮ ಬಂಗಾಳ
ಬಂಗಾಳದಲ್ಲಿ ಪ್ರಶಾಂತ್ ಕಿಶೋರ್ ಕಾರ್ಯಚಟುವಟಿಕೆ ಫಲ ನೀಡುವುದಿಲ್ಲ. ನರೇಂದ್ರ ಮೋದಿಯವರೇ ಇಲ್ಲಿ ಗೆಲ್ಲುವುದು ಎಂದು ಬಿಜೆಪಿ ಮುಖಂಡ ರಾಜೀವ್ ಬ್ಯಾನರ್ಜಿ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ. ಶನಿವಾರ ಪಶ್ಚಿಮ ಬಂಗಾಳದಲ್ಲಿ 44 ಕ್ಷೇತ್ರಗಳಿಗೆ ನಾಲ್ಕನೇ ಹಂತದ ಚುನಾವಣೆ ನಡೆಯುತ್ತಿದೆ.
10:53 AM, 10 Apr
ಪಶ್ಚಿಮ ಬಂಗಾಳ
ಮತದಾನ ಸಂದರ್ಭ ಹೂಗ್ಲಿ ಜಿಲ್ಲೆಯ ಬೂತ್‌ ನಂಬರ್ 66ರಲ್ಲಿ ತಮ್ಮ ಮೇಲೆ ಸ್ಥಳೀಯರು ದಾಳಿ ನಡೆಸಿದ್ದಾಗಿ ಬಿಜೆಪಿ ಮುಖ್ಯಸ್ಥೆ ಲಾಕೆಟ್ ಚರ್ಟರ್ಜಿ ಚುನಾವಣಾ ಆಯೋಗಕ್ಕೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದ್ದು, ಹೆಚ್ಚು ಭದ್ರತಾ ಸಿಬ್ಬಂದಿ ಕಳುಹಿಸುವಂತೆ ಕೇಳಿದ್ದಾರೆ.
10:52 AM, 10 Apr
ಪಶ್ಚಿಮ ಬಂಗಾಳ
ಪಶ್ಚಿಮ ಬಂಗಾಳದಲ್ಲಿ ನಾಲ್ಕನೇ ಹಂತದ ಚುನಾವಣೆ ನಡೆಯುತ್ತಿದ್ದು, ಹೂಗ್ಲಿಯಲ್ಲಿ ವರದಿ ಮಾಡಲು ಬಂದಿದ್ದ ಮಾಧ್ಯಮದವರ ವಾಹನದ ಮೇಲೆ ದಾಳಿ ನಡೆಸಲಾಗಿದೆ.
10:51 AM, 10 Apr
ಪಶ್ಚಿಮ ಬಂಗಾಳ
ಪಶ್ಚಿಮ ಬಂಗಾಳದಲ್ಲಿ ನಾಲ್ಕನೇ ಹಂತದ ಚುನಾವಣೆ ನಡೆಯುತ್ತಿದ್ದು, ಹೂಗ್ಲಿ ಜಿಲ್ಲೆಯಲ್ಲಿ ಬಿಜೆಪಿ ಮುಖ್ಯಸ್ಥರಾದ ಲಾಕೆಟ್ ಚಟರ್ಜಿ ಅವರ ಕಾರಿನ ಮೇಲೆ ಸ್ಥಳೀಯರು ದಾಳಿ ನಡೆಸಿದರು.
10:39 AM, 10 Apr
ಪಶ್ಚಿಮ ಬಂಗಾಳ
ಪಶ್ಚಿಮ ಬಂಗಾಳದ ಕೂಚ್‌ಬೇಹರ್ ಜಿಲ್ಲೆಯ ಸಿತಲ್‌ಕುಚಿಯಲ್ಲಿ ಶನಿವಾರ ಮತದಾನ ಮಾಡಲು ಸರದಿ ಸಾಲಿನಲ್ಲಿ ನಿಂತಿದ್ದ ವ್ಯಕ್ತಿಯೊಬ್ಬನ ಮೇಲೆ ಗುಂಡು ಹಾರಿಸಲಾಗಿದೆ. ಸಾವನ್ನಪ್ಪಿದವನನ್ನು ಆನಂದ ಬರ್ಮಾನ್ (18) ಎಂದು ಗುರುತಿಸಲಾಗಿದ್ದು, ಮೊದಲ ಬಾರಿ ಮತ ಹಾಕಲು ಬಂದಿದ್ದರು ಎನ್ನಲಾಗಿದೆ. ಯಾರು ಗುಂಡು ಹಾರಿಸಿದರು ಎಂಬುದು ತಿಳಿದುಬಂದಿಲ್ಲ.
10:26 AM, 10 Apr
ಪಶ್ಚಿಮ ಬಂಗಾಳ
ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಟಿಎಂಸಿ ಶವಪೆಟ್ಟಿಗೆಗೆ ಕೊನೆ ಮೊಳೆ ಹೊಡೆದಿದ್ದಾರೆ. ನರೇಂದ್ರ ಮೋದಿ ಇಡೀ ವಿಶ್ವದಲ್ಲೇ ಪ್ರಸಿದ್ಧಿಯಾಗಿದ್ದಾರೆ ಎಂದು ಪಶ್ಚಿಮ ಬಂಗಾಳದ ಕೂಚ್ ಬೇಹರ್‌ನ ಸಂಸದ ನಿಶಿತ್ ಪ್ರಾಮಾಣಿಕ್ ಹೇಳಿದ್ದಾರೆ.
9:55 AM, 10 Apr
ಪಶ್ಚಿಮ ಬಂಗಾಳ
ಶನಿವಾರ ಬೆಳಿಗ್ಗೆ 9.30ರವರೆಗೂ ಪಶ್ಚಿಮ ಬಂಗಾಳದ ನಾಲ್ಕನೇ ಹಂತದ ಚುನಾವಣೆಯಲ್ಲಿ 15.85% ಮತದಾನ ದಾಖಲಾಗಿರುವುದಾಗಿ ತಿಳಿದುಬಂದಿದೆ.
9:26 AM, 10 Apr
ಪಶ್ಚಿಮ ಬಂಗಾಳ
ಪಶ್ಚಿಮ ಬಂಗಾಳದ ಅಲಿಪುರದೌರ್‌ನಲ್ಲಿ ಮಹಿಳೆಯೊಬ್ಬರು ಮತದಾನ ಮಾಡಲು ಭದ್ರತಾ ಸಿಬ್ಬಂದಿ ನೆರವಾದರು
8:49 AM, 10 Apr
ಪಶ್ಚಿಮ ಬಂಗಾಳ
ಶನಿವಾರ ಪಶ್ಚಿಮ ಬಂಗಾಳದಲ್ಲಿ ನಾಲ್ಕನೇ ಹಂತದ ಚುನಾವಣೆ ಆರಂಭವಾಗಿದ್ದು, ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಮತ್ತೊಮ್ಮೆ ಎಚ್ಚರಿಕೆ ನೀಡಿದೆ.ರಾಜಕೀಯ ಸಮಾವೇಶದಲ್ಲಿ ಕೊರೊನಾ ನಿಯಮಾವಳಿಗಳನ್ನು ಉಲ್ಲಂಘಿಸಿದ್ದು ಕಂಡುಬಂದರೆ ಸಮಾವೇಶವನ್ನು ರದ್ದುಗೊಳಿಸುವುದಕ್ಕೂ ಹಿಂಜರಿಯುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದೆ.
READ MORE

English summary
Assembly Elections 2021 Live Updates in Kannada: All you need to know about the West Bengal, Assam, Tamil Nadu, Kerala and Puducherry Assembly Elections 2021 polling schedule, voting date and time, assembly constituencies, key candidates and all latest news highlights in kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X