Get Updates
Get notified of breaking news, exclusive insights, and must-see stories!

ಟೈಮ್ಸ್ ನೌ ಸಮೀಕ್ಷೆ: ಪಶ್ಚಿಮ ಬಂಗಾಳದಲ್ಲಿ ಮತ್ತೆ ದೀದಿ

ಟೈಮ್ಸ್ ನೌ-ಸಿ ವೋಟರ್ ಸಮೀಕ್ಷೆಯಂತೆ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ 2021 ರಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಯು ಮತ್ತೆ ಅಧಿಕಾರ ಹಿಡಿಯಲಿದೆ.

ಸಮೀಕ್ಷೆ ವರದಿಯಂತೆ ಬಿಜೆಪಿ ಹಾಗೂ ಮಿತ್ರಪಕ್ಷಗಳು 115 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಇನ್ನು ಮಮತಾ ನೇತೃತ್ವದ ಟಿಎಂಸಿ ಹಾಗೂ ಮಿತ್ರ ಪಕ್ಷಗಳು 158 ಕ್ಷೇತ್ರಗಳಲ್ಲಿ ಜಯಗಳಿಸುವ ಮೂಲಕ ಅಲ್ಪ ಬಹುಮತದೊಂದಿಗೆ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಪಶ್ಚಿಮ ಬಂಗಾಳದ ಇತರೆ ಎಡಪಕ್ಷಗಳು 19 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿವೆ.

ಪಶ್ಚಿಮ ಬಂಗಾಳದಲ್ಲಿ ಒಟ್ಟು 294 ವಿಧಾನಸಭೆ ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು 148 ಕ್ಷೇತ್ರಗಳಲ್ಲಿ ಜಯಗಳಿಸಿದವರು ಬಹುಮತ ಪಡೆಯುತ್ತಾರೆ.

West Bengal Assembly Elections Times Now-C Voter Exit polls Results 2021

ಬಿಜೆಪಿಯು 100 ಕ್ಕೂ ಹೆಚ್ಚು ಸೀಟು ಗಳಿಸಿದಲ್ಲಿ ಅದನ್ನು ಸಾಧನೆಯೆಂದೇ ಪರಿಗಣಿಸಬೇಕಾಗುತ್ತದೆ. ಪಶ್ಚಿಮ ಬಂಗಾಳದ 2016ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಕೇವಲ 3 ಸ್ಥಾನದಲ್ಲಿಯಷ್ಟೆ ಗೆದ್ದಿತ್ತು. ಆದರೆ ಕೇವಲ ಐದು ವರ್ಷದಲ್ಲಿ ನೂರಕ್ಕೂ ಹೆಚ್ಚು ಸ್ಥಾನ ಗೆಲ್ಲುವುದು ಕಡಿಮೆ ಸಾಧನೆಯೇನಲ್ಲ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಮತಾ ನೇತೃತ್ವದ ಟಿಎಂಸಿ ಪಕ್ಷವು 211 ಕ್ಷೇತ್ರದಲ್ಲಿ ಗೆಲುವು ಸಾಧಿಸಿತ್ತು. ಕಾಂಗ್ರೆಸ್ 44 ಸ್ಥಾನಗಳಲ್ಲಿ ಜಯಿಸಿತ್ತು. ಕಾಂಗ್ರೆಸ್‌ ಈ ಬಾರಿ ಬೆರಳಂಕಿಯ ಸ್ಥಾನಗಳಲ್ಲಿಯಷ್ಟೆ ಬಂಗಾಳದಲ್ಲಿ ಜಯಿಸಲಿದೆ ಎನ್ನುತ್ತಿದೆ ಟೈಮ್ಸ್‌ ನೌ ಸಮೀಕ್ಷೆ.

ಟುಡೇಸ್ ಚಾಣಕ್ಯ, ರಿಪಬ್ಲಿಕ್-ಸಿಎನ್‌ಎಕ್ಸ್ ಇನ್ನೂ ಕೆಲವು ಸಮೀಕ್ಷೆಗಳಲ್ಲಿಯೂ ಬಿಜೆಪಿ ಪ್ರಬಲ ವಿಪಕ್ಷವಾಗಿ ಹೊರಹೊಮ್ಮುವುದೆಂಬ ಸಮೀಕ್ಷೆಯೇ ಹೊರಬಿದ್ದಿದೆ. ಜನ್‌ ಕೀ ಬಾತ್ ಹಾಗೂ ಪೀಪಲ್ಸ್ ಪೋಲ್‌ನಲ್ಲಿ ಮಾತ್ರ ಬಿಜೆಪಿಗೆ ಬಹುಮತ ದೊರಕುತ್ತದೆ ಎಂದು ಹೇಳಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+