ಬೆಂಗಳೂರು ಕಸ ಸಮಸ್ಯೆಗೆ ಟೆಕ್ ಟಚ್: 'ಡಿಕ್ಲಟರ್' ಆಪ್ ಲಾಂಚ್, ಈಗಲೇ ಡೌನ್‌ಲೋಡ್ ಮಾಡಿ

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ ಹಳೆಯ ಹಾಗೂ ಬೇಡದಿರುವ ವಸ್ತುಗಳ ವಿಲೇವಾರಿ ಇನ್ನಷ್ಟು ಸುಲಭಗೊಳಿಸುವ ತಂತ್ರಜ್ಞಾನ ಆವಿಷ್ಕರಿಸಲಾಗಿದೆ. ಹಸಿ ಕಸ ಮತ್ತು ಒಣ ಕಸ ಬೇರ್ಪಡಿಸಿ ಕಸ ಸಂಗ್ರಹಿಸಲಾಗುತ್ತದೆ, ವಿಲೇವಾರಿ ಮಾಡಲಾಗುತ್ತದೆ. ಆದರೆ ಹಳೆಯ ಘನ ತ್ಯಾಜ್ಯ ನಿರ್ವಹಣೆ ಸಮಸ್ಯೆ ಆಗಿತ್ತು. ಆ ಸಮಸ್ಯೆಗೆ ಪರಿಹಾರ ಸಿಕ್ಕಿದೆ.

ಹೌದು ಇತರ ತ್ಯಾಜ್ಯದಂತೆ ಘನತ್ಯಾಜ್ಯ ವಿಲೇವಾರಿಗಗಿ 'ಡಿಕ್ಲಟರ್(DClutter) ತಂತ್ರಾಂಶ ಅನಾವರಣ ಮಾಡಲಾಗಿದೆ ಎಂದು ಬೆಂಗಳೂರು ಘನ ತ್ಯಾಜ್ಯ ನಿರ್ವಹಣಾ ನಿಯಮಿತದ ಮುಖ್ಯ ಕಾರ್ಯನಿರ್ವಣಾಧಿಕಾರಿಯಾದ ಕರೀಗೌಡ ಅವರು ಶನಿವಾರ ಮಾಹಿತಿ ನೀಡಿದರು.

Bengaluru

ಬಿ.ಎಸ್.ಡಬ್ಲ್ಯೂ.ಎಂ.ಎಲ್ ವತಿಯಿಂದ ಬೆಂಗಳೂರು ನಗರಾದ್ಯಂತ ಮನೆಮನೆಗೆ ತೆರಳಿ ಹಸಿ ಮತ್ತು ಒಣ ತ್ಯಾಜ್ಯ ಸಂಗ್ರಹಣ ಕಾರ್ಯವನ್ನು ನಿರ್ವಹಿಸಲಾಗುತ್ತಿದೆ. ಆದರೆ ಹಳೆಯ ಪೀಠೋಪಕರಣಗಳು, ಸೋಫಾಗಳು, ಹಾಸಿಗೆಗಳು ಕಪಾಟುಗಳು, ತ್ಯಜಿಸಲಾದ ಬಟ್ಟೆಗಳು, ಒಡೆದ ಸ್ಯಾನಿಟರಿ ಸಿಂಕ್ ಸಾಮಗ್ರಿಗಳು, ಹಳೆಯ ಕಾಮೋಡ್‌ಗಳು, ಚಪ್ಪಲಿ ಹಾಗೂ ಇತರೆ ದೊಡ್ಡ ಗಾತ್ರದ ಗೃಹ ಬಳಕೆಯ ತ್ಯಾಜ್ಯಗಳನ್ನು ನಿಯಮಿತ ತ್ಯಾಜ್ಯ ಸಂಗ್ರಹ ವ್ಯವಸ್ಥೆಯ ಮೂಲಕ ಸಂಗ್ರಹಿಸಲಾಗುತ್ತಿರಲಿಲ್ಲ.

ಭಾನುವಾರ ಬೆಂಗಳೂರು ಮೆಟ್ರೋ ನೇರಳೆ ಮಾರ್ಗದಲ್ಲಿ ಸಂಚಾರ ಕಡಿತ, ಯಾರಿಗೆಲ್ಲ ತೊಂದರೆ
ಭಾನುವಾರ ಬೆಂಗಳೂರು ಮೆಟ್ರೋ ನೇರಳೆ ಮಾರ್ಗದಲ್ಲಿ ಸಂಚಾರ ಕಡಿತ, ಯಾರಿಗೆಲ್ಲ ತೊಂದರೆ

6,000 ಮೆಟ್ರಿಕ್ ಟನ್ ತ್ಯಾಜ್ಯ ಸಂಗ್ರಹ

ಇದರ ಪರಿಣಾಮ ಇಂತಹ ತ್ಯಾಜ್ಯವನ್ನು ಸಾರ್ವಜಿನಕರು ರಸ್ತೆ ಬದಿಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ತ್ಯಜಿಸಲಾಗುತ್ತಿದ್ದು, ಇದು ಪರಿಸರ ಸಮಸ್ಯೆಗಳನ್ನು ಉಂಟು ಮಾಡುವುದರ ಜೊತೆಗೆ ನಗರದ ಸ್ವಚ್ಛತೆ ಮತ್ತು ಸೌಂದರ್ಯಕ್ಕೂ ಧಕ್ಕೆಯುಂಟಾಗುತ್ತಿತ್ತು. ಈ ಸವಾಲನ್ನು ಎದುರಿಸಲು, BSWML ವತಿಯಿಂದ ಪ್ರಾಯೋಗಿಕವಾಗಿ ಟ್ರ್ಯಾಕ್ಟರ್‌ಗಳನ್ನು ನಿಯೋಜಿಸಿ ರಸ್ತೆ ಬದಿಯಲ್ಲಿ ತ್ಯಜಿಸಲಾದ ಬೃಹತ್ ತ್ಯಾಜ್ಯವನ್ನು ಸಂಗ್ರಹಿಸುವ ಕಾರ್ಯ ಕೈಗೊಳ್ಳಲಾಗಿತ್ತು. ಈ ಕಾರ್ಯಾಚರಣೆಯ ವೇಳೆ ಬೆಂಗಳೂರು ನಗರದ್ಯಾಂತ ವಿವಿಧ ಪ್ರದೇಶಗಳಿಂದ ಸುಮಾರು 6,000 ಮೆಟ್ರಿಕ್ ಟನ್‌ಗಳಷ್ಟು ಬೃಹತ್ ತ್ಯಾಜ್ಯವನ್ನು ಗುರುತಿಸಿ ಸಂಗ್ರಹಿಸಲಾಗಿದೆ ಎಂದು ಅವರು ವಿವರಿಸಿದರು.

'ಡಿಕ್ಲಟರ್' ತಂತ್ರಾಂಶದಿಂದ ಹೇಗೆ ಉಪಯೋಗ?

ಸ್ಥಿರ ಮತ್ತು ನಾಗರಿಕ ಸ್ನೇಹಿ ಪರಿಹಾರ ಒದಗಿಸುವ ಮಹತ್ವದ ಹೆಜ್ಜೆಯಾಗಿ, BSWML ಇದೀಗ 'ಡಿಕ್ಲಟರ್' (DClutter) ಮೊಬೈಲ್ ತಂತ್ರಾಂಶವನ್ನು ಪರಿಚಯಿಸಿದೆ. ಈ ತಂತ್ರಾಂಶವು ಗೂಗಲ್ ಪ್ಲೇ ಸ್ಟೋರ್ ಹಾಗೂ ಆಪಲ್ ಆಪ್ ಸ್ಟೋರ್‌ಗಳಲ್ಲಿ ಲಭ್ಯವಿದ್ದು, ನಾಗರಿಕರು ತಮ್ಮ ಮನೆಗಳಲ್ಲಿರುವ ಬೃಹತ್ ತ್ಯಾಜ್ಯ ವಿಲೇವಾರಿಗೆ ಸುಲಭವಾಗಿ ಸಲ್ಲಿಸಬಹುದಾಗಿದೆ. ಸದರಿ ಆಪ್‌ನಲ್ಲಿ ಬರುವ ಕೋರಿಕೆಯಂತೆ ಹಾಗೂ ತ್ಯಾಜ್ಯದ ಪ್ರಮಾಣ ಹಾಗೂ ಸ್ವರೂಪ ಅವಲಂಬಿಸಿ ವಾರಕ್ಕೆ ಒಮ್ಮೆ ಬೃಹತ್ ತ್ಯಾಜ್ಯ ಸಂಗ್ರಹಣೆ ನಡೆಸಲಾಗುತ್ತದೆ ಎಂದು ಅವರು ತಿಳಿಸಿದರು.

ಮರು ಬಳಕೆಗೆ ರವಾನೆ

ಸಂಗ್ರಹಿಸಲಾದ ತ್ಯಾಜ್ಯದಲ್ಲಿ ಮರುಬಳಕೆ ಸಾಧ್ಯವಿರುವ ವಸ್ತುಗಳನ್ನು ಅಧಿಕೃತ ಮರುಬಳಕೆ ಘಟಕಗಳಿಗೆ ಕಳುಹಿಸಲಾಗುವುದು. ಮರುಬಳಕೆ ಅಸಾಧ್ಯವಾದ ಉಳಿದ ತ್ಯಾಜ್ಯವನ್ನು ವೈಜ್ಞಾನಿಕ ವಿಧಾನದಲ್ಲಿ ಸಂಸ್ಕರಿಸಲು ವೆಸ್ಟ್-ಟು-ಎನರ್ಜಿ ಘಟಕಗಳಿಗೆ ರವಾನಿಸಲಾಗುತ್ತದೆ.

'ಡಿಕ್ಲಟರ್' ಆಪ್‌ನ ಉದ್ದೇಶವು ಬೃಹತ್ ತ್ಯಾಜ್ಯ ನಿರ್ವಹಣೆಯಲ್ಲಿ ಇರುವ ಕೊರತೆಯನ್ನು ನಿವಾರಿಸಿ, ಬೆಂಗಳೂರು ನಾಗರಿಕರಿಗೆ ವಿಶ್ವಾಸಾರ್ಹ ಹಾಗೂ ಪರಿಸರ ಸ್ನೇಹಿ ತ್ಯಾಜ್ಯ ವಿಲೇವಾರಿ ವ್ಯವಸ್ಥೆಯನ್ನು ಒದಗಿಸುವುದಾಗಿದೆ. ಬೆಂಗಳೂರು ನಗರವನ್ನು ಸ್ವಚ್ಛ, ಸುಸ್ಥಿರ ಹಾಗೂ ರಸ್ತೆ ಬದಿ ತ್ಯಾಜ್ಯ ಮುಕ್ತ ನಗರವನ್ನಾಗಿ ರೂಪಿಸಲು ಬಿಎಸ್‌ಡಬ್ಲುಎಂಎಲ್ ಬದ್ಧವಾಗಿದೆ.

ಪ್ರಯಾಣಿಕರಿಗೆ ಗುಡ್‌ನ್ಯೂಸ್; ಬೆಂಗಳೂರು-ಹೌರಾ ಸೇರಿ 3 ರೈಲುಗಳ ಸಂಚಾರ ವೇಳಾಪಟ್ಟಿ ಯಥಾಸ್ಥಿತಿ
ಪ್ರಯಾಣಿಕರಿಗೆ ಗುಡ್‌ನ್ಯೂಸ್; ಬೆಂಗಳೂರು-ಹೌರಾ ಸೇರಿ 3 ರೈಲುಗಳ ಸಂಚಾರ ವೇಳಾಪಟ್ಟಿ ಯಥಾಸ್ಥಿತಿ

ನಾಗರಿಕರು 'ಡಿಕ್ಲಟರ್' ಹೇಗೆ ಬಳಸಬೇಕು

* ಗೂಗಲ್ ಸ್ಟೋರ್ ಅಥವಾ ಆಪಲ್ ಸ್ಟೋರ್ ನಿಂದ ತಂತ್ರಾಂಶವನ್ನು ಡೌನ್ ಲೋಡ್ ಮಾಡಿಕೊಳ್ಳಿ.
* ಪ್ರಾಥಮಿಕ ವಿವರಗಳೊಂಗರೆ ನೋಂದಾಯಿಸಿಕೊಳ್ಳಿ
* ವಿಲೇವಾರಿ ಮಾಡಬೇಕಾದ ವಸ್ತುಗಳನ್ನು ಆಯ್ಕೆ ಮಾಡಿ
* ಪಿಕ್ ಅಪ್ ಸಮಯವನ್ನು ನಿಗದಿಪಡಿಸಿ
* ಬಿ.ಎಸ್.ಡಬ್ಲ್ಯೂ.ಎಂ.ಎಲ್ ತಂಡ ನಿಮ್ಮ ಮನೆ ಬಾಗಿಲಿಗೆ ಬಂದು ಸಂಗ್ರಹಿಸಲಿದೆ.

ಗೂಗಲ್ ಪ್ಲೇ ಸ್ಟೋರ್ ಲಿಂಕ್: https://play.google.com/store/apps/details?id=com.dclutter.app, ಆಪಲ್ ಆಪ್ ಸ್ಟೋರ್‌ ಲಿಂಕ್:
https://apps.apple.com/us/app/dclutter/id6755908090 ಮೂಲಕ ನೀವು ಡೌನ್‌ಲೋಡ್ ಮಾಡಿಕೊಳ್ಳಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+